Site icon Vistara News

ಮತ್ತೊಂದು ದೆಹಲಿ ಮರ್ಡರ್‌ | ಚಿಕ್ಕಮ್ಮನನ್ನು ಕತ್ತರಿಸಿ ಹಾದಿಬೀದಿಯಲ್ಲಿ ಚೆಲ್ಲಿದ ಮಗ

murder news delhi

ನವ ದೆಹಲಿ: ಅಫ್ತಾಬ್‌ ಎಂಬ ಪಾತಕಿ ಪ್ರಿಯತಮೆ ಶ್ರದ್ಧಾಳನ್ನು ಕೊಲೆ ಮಾಡಿ ಕತ್ತರಿಸಿ ಬಿಸಾಡಿದ ಮಾದರಿಯಲ್ಲಿಯೇ ಇನ್ನೊಬ್ಬ ಪಾಪಿ ತನ್ನ ಚಿಕ್ಕಮ್ಮನನ್ನು ಕತ್ತರಿಸಿ ಚೂರು ಚೂರುಗಳಾಗಿ ಮಾಡಿ ದೆಹಲಿಯ ಹಾದಿ ಬದಿಯಲ್ಲಿ ಬಿಸಾಡಿದ್ದಾನೆ.

ಆರೋಪಿಯ ಹೆಸರು ಅನುಜ್‌ ಶರ್ಮಾ ಅಲಿಯಾಸ್‌ ಅಚಿತ್ಯ ಗೋವಿಂದ ದಾಸ್.‌ ತನ್ನ ಚಿಕ್ಕಮ್ಮ ಸರೋಜ್‌ ಶರ್ಮಾ ಎಂಬಾಕೆ ಕಾಣೆಯಾಗಿದ್ದಾಳೆ ಎಂದು ಇವನು ಪೊಲೀಸರಿಗೆ ಡಿಸೆಂಬರ್‌ 11ರಂದು ದೂರು ನೀಡಿದ್ದ. ಜೈಪುರದಲ್ಲಿ ಈಕೆಗಾಗಿ ಹುಡುಕಾಟ ನಡೆದಾಗ ಇವನೂ ಅವರ ಜತೆ ಸೇರಿಕೊಂಡಿದ್ದ.

ಈತನ ಹೇಳಿಕೆ ಗೊಂದಲಮಯವಾಗಿದೆ ಎಂಬ ಸಂಶಯ ತಲೆದೋರಿದಾಗ ಪೊಲೀಸರು ಇವನ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದರು. ಇವನು ದೊಡ್ಡ ಸೂಟ್‌ಕೇಸ್‌ನೊಂದಿಗೆ ಮನೆಯಿಂದ ಹೊರಬೀಳುತ್ತಿರುವುದು ಸಿಸಿಟಿವಿ ಕ್ಯಾಮೆರಾ ಪೂಟೇಜ್‌ನಲ್ಲಿ ಕಂಡುಬಂದದ್ದಲ್ಲದೆ, ಕಿಚನ್‌ನಲ್ಲಿ ರಕ್ತದ ಕಲೆ ಕ್ಲೀನ್‌ ಮಾಡುತ್ತಿರುವುದು ಇವನ ಸಂಬಂಧಿಯೊಬ್ಬರ ಕಣ್ಣಿಗೆ ಬಿದ್ದಿತ್ತು.

ಇದನ್ನೂ ಓದಿ | Shraddha Murder Case | ಪೊಲೀಸರು ಸಹಕಾರ ನೀಡಿದ್ದರೆ ಮಗಳು ಬದುಕುತ್ತಿದ್ದಳು, ಶ್ರದ್ಧಾ ತಂದೆ ಗಂಭೀರ ಆರೋಪ

ಡಿ.13ರಂದು ಈತನನ್ನ ಬಂಧಿಸಲಾಗಿತ್ತು. ಪ್ರಶ್ನೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದ. ತನಗೂ ಚಿಕ್ಕಮ್ಮನಿಗೂ ವಾಗ್ಯುದ್ಧ ನಡೆದಾಗ, ಸುತ್ತಿಗೆಯಿಂದ ಆಕೆಯ ತಲೆಗೆ ಹೊಡೆದು ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದ. ಸರೋಜ್‌ ಶರ್ಮಾ ಈತನ ತಂದೆಯ ಸಹೋದರ ಪತ್ನಿಯಾಗಿದ್ದು, ಪತಿಯ ಮರಣಾನಂತರ ಅನುಜ್‌ ಕುಟುಂಬದ ಜತೆ ವಾಸಿಸುತ್ತಿದ್ದರು.

ಕೊಲೆ ಮಾಡಿದ ಬಳಿಕ ಈತ ಶವವನ್ನು ಬಾತ್‌ರೂಮಿಗೆ ಎಳೆದೊಯ್ದು, ಅದನ್ನು ಮಾರ್ಬಲ್‌ ಕಟ್ಟರ್‌ನಿಂದ 10 ತುಂಡುಗಳಾಗಿ ಮಾಡಿದ್ದ. ಚೂರುಗಳನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿ ದೆಲ್ಲಿ ಹೈವೇಯ ಅಕ್ಕಪಕ್ಕ ಎಸೆದು ಬಂದಿದ್ದ. ಹೆಚ್ಚಿನ ತುಣುಕುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ | Shraddha Murder Case | ಶ್ರದ್ಧಾ ಹತ್ಯೆ ಕೇಸ್​​ನಲ್ಲಿ ಮಹತ್ವದ ತಿರುವು; ಅರಣ್ಯದಲ್ಲಿ ಸಿಕ್ಕ ಎಲುಬುಗಳು ಯಾರದ್ದು ಎಂಬ ಪ್ರಶ್ನೆಗೆ ಸಿಕ್ತು ಉತ್ತರ

Exit mobile version