ಉಡುಪಿ: ಮಗಳ ಪ್ರೀತಿ ವಿರೋಧಿಸಿ ಆಕೆಯ ಆಶ್ಲೀಲ ವಿಡಿಯೋ (Obscene video) ಮಾಡಿ ವಿಕೃತಿ ಮೆರೆದಿದ್ದ ʼಆಪದ್ಬಾಂಧವʼ ಆಸೀಫ್‌ನ (Apadbandhava) ಇನ್ನೊಂದು ವಿಕೃತಿ ಬಯಲಾಗಿದೆ. ಈ ಸಲ ಈತ ತನ್ನ ಸಹಾಯಕನಿಗೇ ಹಲ್ಲೆ (Assault Case) ನಡೆಸಿದ್ದಾನೆ. ಜೊತೆಗೆ ತನ್ನ ಪತ್ನಿಯನ್ನೇ ಕೂರಿಸಿ ಇಬ್ಬರಿಗೂ ಬೆಲ್ಟ್‌ನಿಂದ ಹಲ್ಲೆ ಮಾಡಿ ಅದನ್ನು ವಿಡಿಯೋ ಮಾಡಿಕೊಂಡಿದ್ದಾನೆ. ಉಡುಪಿ (Udupi News) ಜಿಲ್ಲೆಯ ಕಾಪು ತಾಲೂಕಿನ ಉಚ್ಚಿಲದಲ್ಲಿ ಘಟನೆ ನಡೆದಿದೆ.
ತನ್ನ ಜೊತೆಗಿದ್ದ ಯುವಕನ ಮೇಲೆ ಬೆಲ್ಟ್‌ನಿಂದ ಯದ್ವಾತದ್ವಾ ಹಲ್ಲೆ ನಡೆಸಿದ, ಅಶ್ಲೀಲವಾಗಿ ಬೈದ ಆಸೀಫ್‌ನ ವಿಡಿಯೋ ಇದೀಗ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ 2 ವರ್ಷಗಳ ಹಿಂದಿನದ್ದು ಎನ್ನಲಾಗಿದೆ. ಈತನ ಆಂಬ್ಯುಲೆನ್ಸ್ ಚಾಲಕನಾಗಿದ್ದ ಸಿರಾಜ್ ಮೇಲೆ ಹಲ್ಲೆ ನಡೆಸಿದ್ದಾನೆ. ಸಂಬಳ ಕೊಡದೆ ಬಾಕಿ ಉಳಿಸಿಕೊಂಡಿದ್ದ ಆಸೀಫ್ ಬಳಿ, 2 ತಿಂಗಳ ಸಂಬಳ ನೀಡುವಂತೆ ಸಿರಾಜ್ ಕೇಳಿಕೊಂಡಿದ್ದ. ಇದರಿಂದ ರೇಗಿದ್ದ ಆಸೀಫ್ ಹಲ್ಲೆ ನಡೆಸಿದ್ದ.
ಸಿರಾಜ್ ಜೊತೆ ತನ್ನ ಪತ್ನಿಯನ್ನೂ ಕೂರಿಸಿ ಆಸೀಫ್ ಹಲ್ಲೆ ನಡೆಸಿದ್ದ. ಹಲ್ಲೆ ವೀಡಿಯೋ ತಾನೇ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದ. ತನ್ನ ಹೆಂಡತಿ ಜೊತೆಗೆ ಸಿರಾಜ್‌ಗೆ ಅಕ್ರಮ ಸಂಬಂಧ ಕಲ್ಪಿಸಿ ಇಬ್ಬರಿಗೂ ಹೊಡೆದಿದ್ದ. ಹಲ್ಲೆ ಸಿರಾಜ್ ಈತನ ಬಳಿಯಿಂದ ಕೆಲಸ ತೊರೆದಿದ್ದ. ಇದೀಗ ಜಾಲತಾಣದಲ್ಲಿ ಹಲ್ಲೆ ವಿಡಿಯೋ ವೈರಲ್ ಆಗಿದೆ.
ಈ ವಿಕೃತ ಆಸಾಮಿ ಆಸೀಫ್ ಇತ್ತೀಚೆಗೆ ಮಗಳ ವಿಡಿಯೋವನ್ನೇ ಅಶ್ಲೀಲವಾಗಿ ಎಡಿಟ್ ಮಾಡಿ ವೈರಲ್ ಮಾಡಿದ್ದ. ಈತನ ಮೃಗೀಯ ವರ್ತನೆಯು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಗಳ ಪ್ರೀತಿ ವಿಚಾರ ಗೊತ್ತಾಗಿದ್ದಕ್ಕೆ ಆಕೆಗೆ ಕಾಲಿನಲ್ಲಿ ತುಳಿದು ಹಲ್ಲೆ ನಡೆಸಿದ್ದ. ಮಗಳ ಮೇಲಿನ ಹಲ್ಲೆ ತಪ್ಪಿಸಲು ಹೋದ ಪತ್ನಿಗೂ ಯದ್ವಾತದ್ವಾ ಹಲ್ಲೆ ನಡೆಸಿದ್ದಾನೆ.
ಸದ್ಯ ಪತ್ನಿ, ಮಗಳ ಮೇಲಿನ ಹಲ್ಲೆ ಪ್ರಕರಣದಲ್ಲಿ ಆಸಿಫ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದೆ. ಈತ ಸಮಾಜ ಸೇವಕನ ಸೋಗು ಧರಿಸಿದ್ದಾನೆ. ʼಆಪದ್ಬಾಂಧವʼ ಎಂಬ ಹೆಸರಿನಲ್ಲಿ ಸಂಸ್ಥೆಯೊಂದನ್ನು ನಡೆಸುತ್ತಿದ್ದು, ಅದರ ಹೆಸರಿನ ಮರೆಯಲ್ಲಿ ಇನ್ನೆಷ್ಟು ಅಕ್ರಮಗಳು, ಗೂಂಡಾಗಿರಿಗಳು ನಡೆದಿವೆಯೋ ತನಿಖೆ ಆಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಅಗ್ನಿ ಆಕಸ್ಮಿಕಕ್ಕೆ ಮನೆ ಸುಟ್ಟು ಕರಕಲು, ಬಾರ್ ಮಾಲೀಕ ಸಾವು
ಉಡುಪಿ: ಉಡುಪಿಯ ಗಾಂಧಿನಗರದ ಬಾರ್ ಮಾಲೀಕರೊಬ್ಬರ ಮನೆಯಲ್ಲಿ ಭಾರಿ ಅಗ್ನಿ ಅವಘಡ (Fire mishop, fire tragedy) ಸಂಭವಿಸಿದ್ದು, ಸುಟ್ಟ ಗಾಯಗಳಿಂದ ಮಾಲೀಕ ಸಾವಿಗೀಡಾಗಿದ್ದಾರೆ. ಮಾಲೀಕರ ಪತ್ನಿಯೂ ತೀವ್ರವಾಗಿ ಗಾಯಗೊಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉಡುಪಿಯ ಅಂಬಲಪಾಡಿಯ ಗಾಂಧಿ ನಗರದಲ್ಲಿ ಶೆಟ್ಟಿ ಬಾರ್ & ರೆಸ್ಟೋರೆಂಟ್‌ನ ಮಾಲೀಕರ ಮನೆಯಲ್ಲಿ ದುರ್ಘಟನೆ ನಡೆದಿದೆ. ಹೊತ್ತಿ ಉರಿಯುತ್ತಿದ್ದ ಮನೆಯ ಒಳಗೆ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ರಮಾನಂದ್ ಶೆಟ್ಟಿ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ.
ಘಟನೆಯಲ್ಲಿ ಅವರ ಪತ್ನಿ ಅಶ್ವಿನಿ ಶೆಟ್ಟಿಗೂ ಗಂಭೀರ ಸುಟ್ಟ ಗಾಯಗಳಾಗಿವೆ. ಇವರ ಇಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಬೆಂಕಿಯ ಜ್ವಾಲೆಯಿಂದಾಗಿ ಪ್ರಜ್ಞೆ ತಪ್ಪಿದ್ದ ದಂಪತಿಯನ್ನು ಅಗ್ನಿಶಾಮಕ ಸಿಬ್ಬಂದಿ ವಿನಾಯಕ್ ರಕ್ಷಿಸಿದ್ದರು. ಸ್ಥಳಕ್ಕೆ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಕಾರ್ಯಾಚರಣೆ ನಡೆಸಿದ್ದರು. ಬೆಂಕಿಯ ಜ್ವಾಲೆಗೆ ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ.
ಇದನ್ನೂ ಓದಿ: Physical Abuse : ಬಸ್ನಲ್ಲಿ ಪಕ್ಕದಲ್ಲಿ ಕೂರಿಸಿಕೊಂಡು ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟವನಿಗೆ ಮಹಿಳೆಯರಿಂದ ಗೂಸಾ