Site icon Vistara News

Physical Abuse: ರಾಬರಿ ಎಂದು ದೂರು ಕೊಟ್ಟವನೇ ಕಾಮುಕ; ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದ ಆಟೋ ಚಾಲಕ!

Physical Abuse

ಬೆಂಗಳೂರು: ಅಪರಿಚಿತ ಊರಿಗೆ ತೆರಳಬೇಕಾಗಿದ್ದರೆ ಎಷ್ಟು ಎಚ್ಚರಿಕೆದಿಂದ ಇರುತ್ತೇವೋ ಅಷ್ಟು ಒಳ್ಳೆಯದು‌. ಇಲ್ಲದಿದ್ದಲ್ಲಿ ಎಂತಹ ಅನಾಹುತ ಆಗ ಬಲ್ಲದು ಎಂಬುವುದಕ್ಕೆ ಈ ಘಟನೆ ಸಾಕ್ಷಿ‌. ಮನೆ ಬಿಟ್ಟು ಓಡಿ ಬಂದಿದ್ದ ಯುವಕ-ಯುವತಿಗೆ ಬಾಡಿಗೆ ಮನೆ ಹುಡುಕಿಕೊಡುತ್ತೇನೆ ಎಂದು ಹೇಳಿ, ಯುವತಿ ಮೇಲೆ ಅತ್ಯಾಚಾರಕ್ಕೆ (Physical Abuse) ಯತ್ನಿಸಿದ ಆಟೋ ಚಾಲಕ ಹಾಗೂ ಆತನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದ ಯುವಕ ಜೈಲು ಪಾಲಾಗಿದ್ದಾರೆ.

ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆಟೋ ಚಾಲಕ ರಾಜು ಹಾಗೂ ಹಲ್ಲೆ ಮಾಡಿದ ಯುವಕ ಮಹಮ್ಮದ್ ಅನ್ಸರ್ ಎಂಬುವರನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

ಪಿಳ್ಳಗಾನಹಳ್ಳಿಯ ಕೃಷ್ಣಪ್ಪ ಲೇಔಟ್ ನಿವಾಸಿಯಾಗಿರುವ ಆಟೋ ಚಾಲಕ ರಾಜುವಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗಳಿದ್ದಾಳೆ‌. ಗಂಡು ಮಕ್ಕಳು ಆಟೋ ಓಡಿಸಿದರೆ ಮಗಳಿಗೆ ಮದುವೆ ಆಗಿದೆ. ಆದರೂ ಮಗಳ ವಯಸ್ಸಿನ ಹೆಣ್ಣು ಮಗಳ ಜತೆ ಸರಸವಾಡಲು ಹೋಗಿ ತಲೆಗೆ ಮಚ್ಚೇಟು ತಿಂದಿದ್ದಲ್ಲದೇ ಜೈಲು ಪಾಲಾಗಿದ್ದಾನೆ.

ಇದನ್ನೂ ಓದಿ | Road Accident: ಬೈಕ್‌ಗಳ ಅಪಘಾತ; ಮಗನ ಕಣ್ಣೆದುರೇ ರಕ್ತಕಾರಿ ತಾಯಿ ಮೃತ್ಯು; ಮೂವರು ಗಂಭೀರ

ಇನ್ನು ಪರಾರಿಯಾಗಿದ್ದ ಜೋಡಿ ಈ ಬಗ್ಗೆ ದೂರು ನೀಡಿರಲಿಲ್ಲ. ಆದರೆ ತನ್ನ ತಪ್ಪನ್ನು ಮುಚ್ಚಿ ಹಾಕಲು ಆಟೋ ಚಾಲಕ ರಾಜು, ತನ್ನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ರಾಬರಿ ಮಾಡಿದ್ದಾರೆಂದು ಹೇಳಿ ಕೊಲೆ ಯತ್ನ ಕೇಸು ದಾಖಲಿಸಿದ್ದ. ಇದೇ ಆತನಿಗೆ ಮುಳುವಾಗಿತ್ತು.

ಚಿಕ್ಕಮಗಳೂರು ಮೂಲದ ಯುವತಿ ತ್ರಿಷಾ ಹಾಗೂ ಕೇರಳ ಮೂಲದ ಯುವಕ ಮಹಮ್ಮದ್ ಅನ್ಸರ್ ಮನೆ ಬಿಟ್ಟು ಬೆಂಗಳೂರಿಗೆ ಓಡಿ ಬಂದಿದ್ದರು. ಚೇತನ್ ಎಂಬಾತ ಸಹಾಯ ಮಾಡುತ್ತಾನೆ ಎಂದು ನಂಬಿ ಜಯನಗರದ ಮೆಟ್ರೋ ಸ್ಟೇಷನ್ ಬಳಿ ಕಾದು ಕೂತಿದ್ದರು. ಎಷ್ಟೇ ಕಾದರೂ ಚೇತನ್ ಬಂದಿರಲಿಲ್ಲ. ಕಾಲ್ ಮಾಡಿದರೆ ಸ್ವಿಚ್ ಆಫ್ ಬರ್ತಿತ್ತು. ಇದನ್ನು ಗಮನಿಸಿದ್ದ ಆಟೋ ಚಾಲಕ ರಾಜು, ನೇರವಾಗಿ ಜೋಡಿಯ ಬಳಿ ಬಂದು ಹೋಗಬೇಕಾದ ಜಾಗದ ಬಗ್ಗೆ ಕೇಳಿದಕ್ಕೆ ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ಎಂದಿದ್ದರು. ಸರಿ ಎಂದು ಕೂರಿಸಿಕೊಂಡು ಹೋಗುವಾಗ ಮನೆ ಬಾಡಿಗೆಗೆ ಬೇಕಾ ಎಂದಿದ್ದಾನೆ. ಇದಕ್ಕೆ ಒಪ್ಪಿ ಬೇಕು ಎಂದಿದಕ್ಕೆ ನನ್ನದೇ ಮನೆ ಬಾಡಿಗೆಗೆ ಇದೆ‌, ಇಷ್ಟವಾದರೆ ತೆಗೆದುಕೊಳ್ಳಿ ಎಂದಿದ್ದ.

ಸ್ವಲ್ಪ ದೂರ ಹೋದ ಬಳಿಕ ತನ್ನ ಬಾಡಿಗೆ ಮನೆ ದೂರ ಇದೆ. ಇಲ್ಲೆ ಪಿಳ್ಳಗಾನಹಳ್ಳಿಯಲ್ಲಿ ನನ್ನ ಸ್ಚಂತ ಮನೆ ಇದೆ. ಇವತ್ತು ಇದ್ದು, ನಾಳೆ ಹೋಗುವಂತೆ ಹೇಳಿದಕ್ಕೆ ಅದಕ್ಕೆ ಆ ಜೋಡಿ ಒಪ್ಪಿದ್ದರು. ದಾರಿ ಮಧ್ಯೆ ಆರೋಪಿ ಆಟೋ ಚಾಲಕ ರಾಜು ಮದ್ಯ ಖರೀದಿ ಮಾಡಿದ್ದ. ನಂತರ ಸೀದಾ ಮನೆಗೆ ಬಂದವನೇ ಅನ್ಸರ್‌ಗೆ ಸ್ವಲ್ಪ ಕುಡಿಸಿ ಮಲಗಿಸಿದ್ದ. ಸ್ವಲ್ಪ ಸಮಯದ ಬಳಿಕ ಯುವತಿಯನ್ನು ಅಡುಗೆ ಮನೆಗೆ ಎಳೆದೊಯ್ದು ತನ್ನ ಜತೆ ಮಲಗುವಂತೆ ಒತ್ತಾಯಿಸಿ ಚುಂಬಿಸಿದ್ದನಂತೆ. ಇದರಿಂದ ಯುವತಿ ಕಿರುಚಿದಾಗ ಅನ್ಸರ್ ಒಳ ಓಡಿ ಬಂದಿದ್ದ. ಆಗ ರಾಜು ಮಚ್ಚು ತೋರಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿ ಮಚ್ಚು ಅಲ್ಲೆ ಪಕ್ಕ ಇಟ್ಟು ಮತ್ತೆ ತನ್ನ ಕಾಮುಕತನ ಮುಂದುವರಿಸಿದ್ದ. ಅಷ್ಟರಲ್ಲಿ ಅನ್ಸರ್ ಅಲ್ಲೇ ಇದ್ದ ಮಚ್ಚಿನಿಂದ ರಾಜುವಿನ ತಲೆಗೆ ಹೊಡೆದು ಯುವತಿಯ ಜತೆ ಹೊರಗೆ ಓಡಿ ಬಂದಿದ್ದ. ನಂತರ ಗೂಗಲ್ ಮ್ಯಾಪ್ ನೋಡಿ ಯಾರ್ಯಾರೋ ಕೈ ಕಾಲು ಹಿಡಿದು ಮೆಜೆಸ್ಟಿಕ್ ಬಂದಿದ್ದರು. ಆದರೆ ದೂರು ನೀಡಿರಲಿಲ್ಲ. ಇವರಿಂತ ಮುಂಚೆ ರಾಜು ಕೊಲೆ ಯತ್ನದ ದೂರು ನೀಡಿದಾಗ ಜೋಡಿಯನ್ನು ಟ್ರೇಸ್ ಮಾಡಿದಾಗ ಅಸಲಿ ಸಂಗತಿ ಹೊರ ಬಿದ್ದಿದೆ.

ಇದನ್ನೂ ಓದಿ | Viral Video: ಮೈದುನನ ಇಬ್ಬರು ಮಕ್ಕಳನ್ನು ವಿಷವಿಕ್ಕಿ ಕೊಂದಳು, ಮೂರನೇ ಮಗುವನ್ನು ಕೊಲ್ಲುವಾಗ ಸಿಕ್ಕಿ ಬಿದ್ದಳು!

ಇನ್ನು ರಾಜು ನೀಡಿದ ದೂರಿನ ಅನ್ವಯ ಯುವಕ ಮಹಮ್ಮದ್ ಅನ್ಸರ್‌ನ ಬಂಧನ ಮಾಡಿದಲ್ಲದೆ ಯುವತಿ ನೀಡಿದ ದೂರಿನ ಮೇಲೆ ಆಟೋ ಚಾಲಕ ರಾಜುವನ್ನು ಬಂಧನ ಮಾಡಲಾಗಿದೆ. ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Exit mobile version