Viral Video: ಮೈದುನನ ಇಬ್ಬರು ಮಕ್ಕಳನ್ನು ವಿಷವಿಕ್ಕಿ ಕೊಂದಳು, ಮೂರನೇ ಮಗುವನ್ನು ಕೊಲ್ಲುವಾಗ ಸಿಕ್ಕಿ ಬಿದ್ದಳು! - Vistara News

ವೈರಲ್ ನ್ಯೂಸ್

Viral Video: ಮೈದುನನ ಇಬ್ಬರು ಮಕ್ಕಳನ್ನು ವಿಷವಿಕ್ಕಿ ಕೊಂದಳು, ಮೂರನೇ ಮಗುವನ್ನು ಕೊಲ್ಲುವಾಗ ಸಿಕ್ಕಿ ಬಿದ್ದಳು!

Viral Video: ಮಲಗಿದ್ದ ಮಗುವಿಗೆ ಮಹಿಳೆಯೊಬ್ಬರು ವಿಷ ನೀಡುತ್ತಿರುವ ಆಘಾತಕಾರಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಎನ್‌ಸಿಎಂ ಇಂಡಿಯಾ ಕೌನ್ಸಿಲ್ ಫಾರ್ ಮೆನ್ ಅಫೇರ್ಸ್ ಹಂಚಿಕೊಂಡಿದೆ. ಇದು ಎಕ್ಸ್ ನಲ್ಲಿ ಭಾರಿ ವೈರಲ್ ಆಗಿದೆ. ಇದರ ಹಿಂದಿನ ಕತೆ ಏನು? ಇಲ್ಲಿದೆ ವಿವರ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೈದುನನ ಮಗನಿಗೆ ಮಹಿಳೆಯೊಬ್ಬಳು ವಿಷವಿಕ್ಕಿರುವ (poison) ಘಟನೆ ರಾಜಸ್ಥಾನದ (Rajasthan) ಬಾರ್ಮರ್ ಜಿಲ್ಲೆಯ ಭದ್ರೇಸ್ ಗ್ರಾಮದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (Viral Viral Video) ಆಗಿದೆ. ಇದಕ್ಕೆ ನೆಟ್ಟಿಗರಿಂದ ತೀವ್ರ ಆಕ್ರೋಶವೂ ವ್ಯಕ್ತವಾಗುತ್ತಿದೆ.

ಮಲಗಿದ್ದ ಮಗುವಿಗೆ ಮಹಿಳೆಯೊಬ್ಬರು ವಿಷ ನೀಡುತ್ತಿರುವ ಆಘಾತಕಾರಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಎನ್‌ಸಿಎಂ ಇಂಡಿಯಾ ಕೌನ್ಸಿಲ್ ಫಾರ್ ಮೆನ್ ಅಫೇರ್ಸ್ ಹಂಚಿಕೊಂಡಿದೆ. ಇದು ಎಕ್ಸ್ ನಲ್ಲಿ ಭಾರಿ ವೈರಲ್ ಆಗಿದೆ.

ರಾಜಸ್ಥಾನದ ಭದ್ರೇಸ್ ಗ್ರಾಮದಲ್ಲಿ ಹಿರಿಯ ಸಹೋದರನ ಪತ್ನಿ ಗಂಡನ ಕಿರಿಯ ಸಹೋದರನ ಮಗುವಿಗೆ ವಿಷ ನೀಡಿರುವುದಾಗಿ ಹೇಳಲಾಗಿದೆ. ಕಿರಿಯ ಸಹೋದರನ ಇಬ್ಬರು ಮಕ್ಕಳು ಇದೇ ರೀತಿ ಸಾವನ್ನಪ್ಪಿದ್ದರು. ಈ ಬಗ್ಗೆ ಮಗುವಿನ ತಾಯಿಯು ಗಂಡನ ಸಹೋದರನ ಪತ್ನಿ ಜೇಥನಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದಳು.

ಹಿಂದೆ ಇಬ್ಬರು ಮಕ್ಕಳು ಇದೇ ರೀತಿ ಸಾವನ್ನಪ್ಪಿದ್ದರಿಂದ ಈ ಬಾರಿ ಎಚ್ಚರಿಕೆಯಿಂದ ಇದ್ದಳು. ಮಗುವಿನ ಹಾಸಿಗೆಯ ಬಳಿ ರೆಕಾರ್ಡ್ ಮಾಡಲು ಕೆಮರಾ ಇರಿಸಿದ್ದಳು. ಸುತ್ತಮುತ್ತ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿರುವುದನ್ನು ಪರೀಕ್ಷಿಸುತ್ತಿದ್ದಳು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಜೇಥನಿ ಎಂಬಾಕೆ ಕೋಣೆಗೆ ಪ್ರವೇಶಿಸುತ್ತಾಳೆ. ಮಗು ಒಂಟಿಯಾಗಿ ಮಲಗಿರುವುದನ್ನು ನೋಡಿ ಮಗುವಿನ ಮೇಲೆ ಇರಿಸಿದ್ದ ಸೊಳ್ಳೆ ಪರದೆಯನ್ನು ಸದ್ದಿಲ್ಲದೆ ತೆಗೆದು ಕೆಲವು ಹನಿಗಳನ್ನು ಮಗುವಿನ ಬಾಯಿಗೆ ಹಾಕಿದಳು.


ಮಗುವನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಮೂರು ದಿನಗಳ ಕಾಲ ಐಸಿಯುನಲ್ಲಿ ಹೋರಾಡಿದ ಮಗು ಈಗ ಚೇತರಿಸಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿರುವ ಈ ವಿಡಿಯೋವನ್ನು ಈವರೆಗೆ 17.9 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಇದನ್ನು ನೋಡಿರುವ ಸಾಕಷ್ಟು ಮಂದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Miracle case : ಮುರ್ತುಜಾ ಖಾದ್ರಿ ಪವಾಡ; ಅಂತ್ಯಕ್ರಿಯೆ ಮಾಡುವಾಗಲೇ ಕೆಮ್ಮಿದ ಮಗು!

ವೈರಲ್ ಆಗಿರುವ ಈ ವಿಡಿಯೋ ಕುರಿತು ಬಾರ್ಮರ್ ಪೊಲೀಸರು ಪ್ರತಿಕ್ರಿಯಿಸಿದ್ದು, ಇದು ಭದ್ರೇಸ್ ಗ್ರಾಮದ ಮುಖೇಶ್ ಪ್ರಜಾಪತ್ ಅವರ ಮಗನಿಗೆ ವಿಷವಿಕ್ಕಿರುವ ವಿಡಿಯೋ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಇನ್ನೊಂದು ಮಾಹಿತಿ ಪ್ರಕಾರ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕೆ ಆಕೆ ಈ ರೀತಿ ಮಾಡಿದ್ದಳೆಂದು ಹೇಳಿಲ್ಲ ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Bansuri Swaraj: ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿ ಸುಷ್ಮಾ ಸ್ವರಾಜ್‌ರನ್ನು ನೆನಪಿಸಿದ ಮಗಳು! ವಿಡಿಯೊ ನೋಡಿ

Bansuri Swaraj: ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್ ತಾಯಿಯ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಲೋಕಸಭೆಯಲ್ಲಿ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ ತಾಯಿ ಸುಷ್ಮಾ ಸ್ವರಾಜ್ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದನ್ನು ನೆಟ್ಟಿಗರು ನೆನಪಿಸಿಕೊಂಡಿದ್ದಾರೆ ತಾಯಿಯಂತೆ ಮಗಳು’ ಎಂಬ ಶೀರ್ಷಿಕೆಯಡಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಸುಷ್ಮಾ ಸ್ವರಾಜ್ ಹಾಗೂ ಬಾನ್ಸುರಿ ಸ್ವರಾಜ್ ಇಬ್ಬರೂ ಲೋಕಸಭೆಯಲ್ಲಿ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿರುವ ವೀಡಿಯೋವನ್ನು ಸಂಯೋಜಿಸಲಾಗಿದೆ.

VISTARANEWS.COM


on

Bansuri Swaraj
Koo


ದೆಹಲಿ: ಬಿಜೆಪಿ ನಾಯಕಿ ದಿವಂಗತ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್ (Bansuri Swaraj) ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ತಾಯಿಯ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಲೋಕಸಭೆಯಲ್ಲಿ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ, ತಾಯಿ ಸುಷ್ಮಾ ಸ್ವರಾಜ್ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದನ್ನು ನೆಟ್ಟಿಗರು ನೆನಪಿಸಿಕೊಂಡಿದ್ದಾರೆ.

“ತಾಯಿಯಂತೆ ಮಗಳು’ ಎಂಬ ಶೀರ್ಷಿಕೆಯಡಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಸುಷ್ಮಾ ಸ್ವರಾಜ್ ಹಾಗೂ ಬಾನ್ಸುರಿ ಸ್ವರಾಜ್ ಇಬ್ಬರೂ ಲೋಕಸಭೆಯಲ್ಲಿ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿರುವ ವೀಡಿಯೋವನ್ನು ಸಂಯೋಜಿಸಲಾಗಿದೆ. ದಿವಂಗತ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್ ಅವರಿಗೆ ನವದೆಹಲಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡಲಾಗಿತ್ತು. ಅಲ್ಲಿ ಅವರು ಎದುರಾಳಿ ಎಎಪಿಯ ಸೋಮನಾಥ್ ಭಾರ್ತಿ ಅವರನ್ನು 78,370 ಮತಗಳ ಅಂತರದಿಂದ ಸೋಲಿಸಿದ್ದರು.

ಇದನ್ನೂ ಓದಿ: ವೃದ್ಧ ರೋಗಿಯ ಮೇಲೆ ದರ್ಪ ತೋರಿದ ಆಸ್ಪತ್ರೆ ಸಿಬ್ಬಂದಿ; ಆಘಾತಕಾರಿ ವಿಡಿಯೊ

1975ರ ತುರ್ತು ಪರಿಸ್ಥಿತಿ ಹೇರಿಕೆ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಕಟ್ಟುನಿಟ್ಟಿನ ಮನವಿಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ನಡುವೆ ಮಾತಿನ ಚಕಮಕಿ ನಡೆಯುವ ಮೂಲಕ 18ನೆಯ ಲೋಕಸಭೆಯ ಮೊದಲ ದಿನ ಅಂತ್ಯಗೊಂಡಿತು. ಪ್ರಧಾನಿ ಸೇರಿದಂತೆ ಹೊಸದಾಗಿ ಚುನಾಯಿತರಾದ ಒಟ್ಟು 262 ಸಂಸದರು ಪ್ರಮಾಣ ವಚನ ಸ್ವೀಕರಿಸಿದರು.

Continue Reading

Latest

Viral Video: ನಡೆದು ಹೋಗುತ್ತಿದ್ದ ಹುಡುಗಿಯ ಎದುರು ಹಸ್ತಮೈಥುನ ಮಾಡಿಕೊಂಡ ವಿಕೃತ ಯುವಕ!

Viral Video: ಪಶ್ಚಿಮ ಬಂಗಾಳದ ಬಸಿರ್ಹರ್ತ ಜಿಲ್ಲೆಯ ಗ್ರಾಮಾಂತರ ರಸ್ತೆಯಲ್ಲಿ ಹುಡುಗಿಯೊಬ್ಬಳು ನಡೆದುಕೊಂಡು ಹೋಗುವ ಸಂದರ್ಭ ವ್ಯಕ್ತಿಯೊಬ್ಬ ಬಹಿರಂಗವಾಗಿ ಹಸ್ತಮೈಥುನ ಮಾಡಿಕೊಳ್ಳುವ ಅಸಹ್ಯಕಾರಿ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಅಸಹ್ಯಕರ ವಿಡಿಯೋವನ್ನು ಸಾಮಾಜಿಕ ಜಾಲತಾಣ “ಎಕ್ಸ್’ನಲ್ಲಿ ನೆಟಿಜನ್ ಗಳು ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Viral Video
Koo

ಜನ ಶೈಕ್ಷಣಿಕವಾಗಿ ಮೇಲ್ದರ್ಜೆಗೆ ಏರುತ್ತಿದ್ದಂತೆ ಸಾಮಾಜಿಕವಾಗಿ ಎಷ್ಟೊಂದು ಕೀಳುಮಟ್ಟಕ್ಕೆ ಇಳಿಯುತ್ತಾರೆ ಎಂಬುದಕ್ಕೆ ಇಲ್ಲೊಂದು ನಿದರ್ಶನವಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಮನುಷ್ಯನ ವಿಕೃತ ಮುಖವನ್ನು ವಿಜೃಂಭಿಸುತ್ತದೆ. ನಡುರಸ್ತೆಯಲ್ಲಿ ನಾಚಿಕೆ ಬಿಟ್ಟ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಂಡಿರುವ ವಿಡಿಯೊವೊಂದು ವೈರಲ್‌ (Viral Video) ಆಗಿದೆ.

ಪಶ್ಚಿಮ ಬಂಗಾಳದ ಬಸಿರ್ಹರ್ತ ಜಿಲ್ಲೆಯ ಗ್ರಾಮಾಂತರ ರಸ್ತೆಯಲ್ಲಿ ಹುಡುಗಿಯೊಬ್ಬಳು ನಡೆದುಕೊಂಡು ಹೋಗುವ ಸಂದರ್ಭ ವ್ಯಕ್ತಿಯೊಬ್ಬ ಬಹಿರಂಗವಾಗಿ ಹಸ್ತಮೈಥುನ ಮಾಡಿಕೊಳ್ಳುವ ಅಸಹ್ಯಕಾರಿ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಅಸಹ್ಯಕರ ವಿಡಿಯೋವನ್ನು ಸಾಮಾಜಿಕ ಜಾಲತಾಣ “ಎಕ್ಸ್’ನಲ್ಲಿ ನೆಟಿಜನ್ ಗಳು ಹಂಚಿಕೊಂಡಿದ್ದಾರೆ.

ಬೈಕ್ ನಲ್ಲಿ ಸಂಚರಿಸುವ ವ್ಯಕ್ತಿ ಇದ್ದಕ್ಕಿಂದ್ದಂತೆ ಬೈಕ್ ನಿಲ್ಲಿಸುತ್ತಾನೆ ಹಾಗೂ ಹಿಂತಿರುಗಿ ನೋಡುತ್ತಾನೆ. ಈ ವೇಳೆ ಇನ್ನೊಂದು ಬೈಕ್ ಅವನ ಹತ್ತಿರದಿಂದ ಹಾದು ಹೋಗುತ್ತದೆ. ಬಳಿಕ ಇನ್ನಾವುದೇ ವಾಹನ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವ ಆತ ತನ್ನ ಖಾಸಗಿ ಅಂಗವನ್ನು ಪದೇಪದೇ ಮುಟ್ಟಿಕೊಳ್ಳುತ್ತ ಹಸ್ತಮೈಥುನ ಆರಂಭಿಸುತ್ತಾನೆ.

ಆಗ ಬೆನ್ನಿಗೆ ಬ್ಯಾಗ್ ಹಾಕಿಕೊಂಡ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಅದೇ ದಾರಿಯಲ್ಲಿ ತೆರಳುತ್ತಾಳೆ. ಆಗ ಬೈಕ್ ಬಿಟ್ಟು ಹುಡುಗಿಯನ್ನೇ ನೋಡಿಕೊಳ್ಳುತ್ತಾ ಹಸ್ತಮೈಥುನ ಮಾಡಿಕೊಳ್ಳುವ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಒಂದು ಹಂತದಲ್ಲಿ ಆಕೆಯನ್ನು ಆತ ಬೆನ್ನಟ್ಟಲು ಪ್ರಯತ್ನಿಸಿ, ಇನ್ನೊಂದು ವಾಹನ ಕಣ್ಣಿಗೆ ಬೀಳುತ್ತಿದ್ದಂತೆ ತನ್ನ ಬೈಕ್ ಏರಿ ಓಡಿ ಹೋದ ದೃಶ್ಯಗಳೂ ಕಾಣಸಿಗುತ್ತವೆ.

ಇದನ್ನೂ ಓದಿ: Nita Ambani: ಕಾಶಿಯಲ್ಲಿ ಮದುವೆ ಆಮಂತ್ರಣ ಪೂಜೆ; ಚಾಟ್‌ ಅಂಗಡಿಗೂ ಭೇಟಿ ನೀಡಿದ ನೀತಾ ಅಂಬಾನಿ

ಇದು ಹೀಗೆ ಮುಂದುವರಿದರೆ ಸಾರ್ವಜನಿಕ ರಸ್ತೆಗಳು ಸುರಕ್ಷಿತವಲ್ಲ ಎಂಬ ಭಾವನೆ ನಾಗರಿಕರಿಗೆ ಬರಬಹುದು, ಹಾಗಾಗಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ನೆಟಿಜನ್‌ಗಳು ಪೊಲೀಸರನ್ನು ಒತ್ತಾಯಿಸಿದ್ದಾರೆ.

Continue Reading

ವೈರಲ್ ನ್ಯೂಸ್

Viral Video: ಚಿಕನ್‌ ಲೆಗ್‌ ಪೀಸ್‌ಗಾಗಿ ಮದುವೆ ಮನೆ ಪೀಸ್‌..ಪೀಸ್‌..! ವಿಡಿಯೋ ನೋಡಿದ್ರೆ ಶಾಕ್‌ ಆಗೋದು ಗ್ಯಾರಂಟಿ

Viral Video: ಬರೇಲಿಯಲ್ಲಿ ಈ ಘಟನೆ ನಡೆದಿದ್ದು, ಅದ್ದೂರಿ ಮದುವೆ ಸಮಾರಂಭವೊಂದನ್ನು ಆಯೋಜಿಸಲಾಗಿತ್ತು. ಮದುವೆ ಅಂದ ಮೇಲೆ ಕೇಳಬೇಕೆ? ಎರಡೂ ಕಡೆಗಳ ನೆಂಟರು, ಬಂಧುಗಳು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪರಸ್ಪರ ಸಂತಸ ಸಂಭ್ರಮದಿಂದ ನಡೆಯುತ್ತಿದ್ದ ಮದುವೆ ಮನೆಯಲ್ಲಿ ಏಕಾಏಕಿ ಗಲಾಟೆ ಶುರುವಾಗಿತ್ತು. ಬಂದಿದ್ದ ಅತಿಥಿಗಳು ಪರಸ್ಪರ ಬೈದಾಡಿಕೊಂಡು ಬಡಿದ್ಡಿಕೊಳ್ಳಲು ಶುರು ಮಾಡಿದ್ದರು. ಇದ್ಯಾಕಪ್ಪಾ ಹೀಗಾಯ್ತು ಎಂದು ನೋಡೋವಾಗ ಬಿರಿಯಾನಿಯಲ್ಲಿ ಚಿಕನ್ ಲೆಗ್‌ ಪೀಸ್‌ಗಾಗಿ‌ ಈ ಮಾರಾಮಾರಿ ನಡೆದಿತ್ತು.

VISTARANEWS.COM


on

Viral video
Koo

ಉತ್ತರಪ್ರದೇಶ: ಶುಚಿ-ರುಚಿಯಾದ ಊಟವೆಂದರೆ ಭಾರತೀಯರಿಗೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಮದುವೆ ಸಮಾರಂಭಗಳಲ್ಲಿ ಊಟವೇ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಕೆಲವೊಮ್ಮೆ ಊಟದ ವಿಚಾರಕ್ಕೆ ಸಂಭ್ರಮದ ಮನೆ ಏಕಾಏಕಿ ರಣರಂಗವಾಗಿ ಮಾರ್ಪಾಡಾಗಿದ್ದೂ ಇದೆ. ಇದೀಗ ಅಂತಹದ್ದೇ ಒಂದು ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ. ಬಿರಿಯಾನಿ(Biriyani)ಯಲ್ಲಿ ಚಿಕನ್‌ ಲೆಗ್‌ ಪೀಸ್‌(Chicken Leg piece) ಮಿಸ್‌ ಆದ ವಿಚಾರಕ್ಕೆ ವಧು-ವರರ ಕುಟುಂಬಸ್ಥರ ನಡುವೆ ಮಾರಾಮಾರಿಯೇ ನಡೆದಿದೆ(Viral Video).

ಘಟನೆ ವಿವರ:

ಬರೇಲಿಯಲ್ಲಿ ಈ ಘಟನೆ ನಡೆದಿದ್ದು, ಅದ್ದೂರಿ ಮದುವೆ ಸಮಾರಂಭವೊಂದನ್ನು ಆಯೋಜಿಸಲಾಗಿತ್ತು. ಮದುವೆ ಅಂದ ಮೇಲೆ ಕೇಳಬೇಕೆ? ಎರಡೂ ಕಡೆಗಳ ನೆಂಟರು, ಬಂಧುಗಳು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪರಸ್ಪರ ಸಂತಸ ಸಂಭ್ರಮದಿಂದ ನಡೆಯುತ್ತಿದ್ದ ಮದುವೆ ಮನೆಯಲ್ಲಿ ಏಕಾಏಕಿ ಗಲಾಟೆ ಶುರುವಾಗಿತ್ತು. ಬಂದಿದ್ದ ಅತಿಥಿಗಳು ಪರಸ್ಪರ ಬೈದಾಡಿಕೊಂಡು ಬಡಿದ್ಡಿಕೊಳ್ಳಲು ಶುರು ಮಾಡಿದ್ದರು. ಇದ್ಯಾಕಪ್ಪಾ ಹೀಗಾಯ್ತು ಎಂದು ನೋಡೋವಾಗ ಬಿರಿಯಾನಿಯಲ್ಲಿ ಚಿಕನ್ ಲೆಗ್‌ ಪೀಸ್‌ಗಾಗಿ‌ ಈ ಮಾರಾಮಾರಿ ನಡೆದಿತ್ತು. ಸಣ್ಣ ಮಾತಿನ ಚಕಮಕಿ ಭಾರೀ ಹೊಡೆದಾಟದಲ್ಲಿ ಕೊನೆಯಾಗಿತ್ತು. ವಿಚಿತ್ರವೆಂಬಂತೆ ಈ ಹೊಡೆದಾಟದಲ್ಲಿ ಸ್ವತಃ ಮದುಮಗನೂ ಭಾಗಿಯಾಗಿದ್ದ.

ಇನ್ನು ವಧು ಮತ್ತು ವರನ ಕಡೆಯವರು ಕುರ್ಚಿ, ಕೋಲು ಹೀಗೆ ಕೈಗೆ ಸಿಕ್ಕಿದ ವಸ್ತುಗಳನ್ನು ಹಿಡಿದು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಕೆಲವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಭೀಕರ ಮಾರಾಮಾರಿ ದೃಶ್ಯವನ್ನು ಯಾರೋ ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಎಲ್ಲೆಡೆ ವೈರಲಾಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ. ಇನ್ನು ಘಟನೆ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎನ್ನಲಾಗಿದೆ.

ಕಳೆದ ವರ್ಷ ಜಾರ್ಖಂಡ್‌ನಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ಜಾರ್ಖಂಡ್ ಮದುವೆಯೊಂದರಲ್ಲಿ ಬಿಸಿ ಪೂರಿಗಳನ್ನು ಕೊಡಲು ನಿರಾಕರಿಸಿದ್ದಕ್ಕೆ ಅತಿಥಿಗಳು ಗಲಾಟೆ ನಡೆಸಿದ್ದಾರೆ. ಮಾತ್ರವಲ್ಲ ಕಲ್ಲು ತೂರಾಟ ಕೂಡಾ ಮಾಡಿದ್ದಾರೆ. ಜಾರ್ಖಂಡ್‌ನ ಗಿರಿದಿಹ್‌ನಲ್ಲಿ ಈ ಘಟನೆ ನಡೆದಿತ್ತು. ಕೊನೆಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ಹತೋಟಿಗೆ ತರಲು ಪ್ರಯತ್ನಿಸಿದ್ದ ಘಟನೆಯೂ ನಡೆದಿತ್ತು. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಕೊನೆಗೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.

ಇದನ್ನೂ ಓದಿ: Viral Video: ಹಸು, ನಾಯಿ, ಮೇಕೆ ಮೇಲೆ ಕಿಡಿಗೇಡಿಯಿಂದ ಹೇಯಕೃತ್ಯ; ವಿಡಿಯೋ ವೈರಲ್‌-ಸಿಎಂ ಯೋಗಿಗೆ ಪತ್ರ

Continue Reading

ಕ್ರೀಡೆ

AFG vs BAN: ಕಾಬುಲ್​ನಲ್ಲಿ ಆಫ್ಘನ್ನರ ಮುಗಿಲು ಮುಟ್ಟಿದ ಸಂಭ್ರಮಾಚರಣೆ; ಗುಂಪು ಚದುರಿಸಲು ಜಲಫಿರಂಗಿ ಪ್ರಯೋಗ

AFG vs BAN: ಅಫಘಾನಿಸ್ತಾನ(AFG vs BAN) ತಂಡ ಗೆಲುವು ಸಾಧಿಸುತ್ತಿದ್ದಂತೆ ಕಾಬುಲ್​ನಲ್ಲಿ(Celebrations in Kabul) ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಜನ ಸಾಗರವೇ ರಸ್ತೆಗಿಳಿದು ಪಟಾಕಿ, ಬಣ್ಣದೋಕುಳಿಯೊಂದಿಗೆ ಬೀದಿಗಳಲ್ಲಿ ಯುವಕ-ಯುವತಿಯರು ಕುಣಿದಾಡುತ್ತಾ ಸಂಭ್ರಮಿಸಿದ್ದಾರೆ. ಇದರ ವಿಡಿಯೊಗಳು ವೈರಲ್​ ಆಗಿವೆ.

VISTARANEWS.COM


on

AFG vs BAN
Koo

ಕಾಬುಲ್​: ಬಾಂಗ್ಲಾದೇಶ ವಿರುದ್ಧ ಮಂಗಳವಾರ ನಡೆದ ಟಿ20 ವಿಶ್ವಕಪ್​(T20 World Cup 2024) ಟೂರ್ನಿಯ ಸೂಪರ್​-8 ಪಂದ್ಯದಲ್ಲಿ ಅಫಘಾನಿಸ್ತಾನ(AFG vs BAN) ತಂಡ ರೋಚಕ 8 ರನ್​ಗಳ ಗೆಲುವು ಸಾಧಿಸಿ ಸೆಮಿಫೈನಲ್​ ಪ್ರವೇಶಿಸಿತು. ತಂಡ ಗೆಲುವು ಸಾಧಿಸುತ್ತಿದ್ದಂತೆ ಕಾಬುಲ್​ನಲ್ಲಿ(Celebrations in Kabul) ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಜನ ಸಾಗರವೇ ರಸ್ತೆಗಿಳಿದು ಪಟಾಕಿ, ಬಣ್ಣದೋಕುಳಿಯೊಂದಿಗೆ ಬೀದಿಗಳಲ್ಲಿ ಯುವಕ-ಯುವತಿಯರು ಕುಣಿದಾಡುತ್ತಾ ಸಂಭ್ರಮಿಸಿದರು. ಜನರ ಗುಂಪನ್ನು ಚದುರಿಸಲು ಪೊಲೀಸರು ಕೊನೆಗೆ ಜಲಫಿರಂಗಿ ಪ್ರಯೋಗ ಮಾಡಿದ ಘಟನೆಯೂ ಸಂಭವಿಸಿದೆ. ಇದರ ವಿಡಿಯೊಗಳು ವೈರಲ್​ ಆಗಿವೆ.

ಮಳೆಯಿಂದ ಅಡಚಣೆಯಾದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಅಫಘಾನಿಸ್ತಾನ ರಹಮಾನುಲ್ಲಾ ಗುರ್ಬಾಜ್(43) ಅವರ ಏಕಾಂಗಿ ಬ್ಯಾಟಿಂಗ್​ ಹೋರಾಟದ ನೆರವಿನಿಂದ 5 ವಿಕೆಟ್​ಗೆ 115 ರನ್​ ಬಾರಿಸಿತು. ಬಾಂಗ್ಲಾ ಬ್ಯಾಟಿಂಗ್​ ಸರದಿಯ ವೇಳೆ ಹಲವು ಬಾರಿ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು. ಅಂತಿಮವಾಗಿ ಒಂದು ಓವರ್​ ಕಡಿತಗೊಳಿಸಿ 19 ಓವರ್​ಗೆ 114 ರನ್​ ಗೆಲುವಿನ ಗುರಿ ನೀಡಲಾಯಿತು. ಈ ಮೊತ್ತವನ್ನು ಬಾಂಗ್ಲಾ ಒಂದು ಹಂತದವರೆಗೆ ಯಶಸ್ವಿಯಾಗಿ ಬೆನ್ನಟ್ಟಿಕೊಂಡು ಬಂದರೂ ಕೂಡ ಅಂತಿಮ ಹಂತದಲ್ಲಿ ನಾಟಕೀಯ ಕುಸಿತ ಕಂಡು 17.5 ಓವರ್​ನಲ್ಲಿ 105 ರನ್​ಗೆ ಸರ್ವಪತನ ಕಂಡಿತು.

ರಸೆಯುದ್ದಕ್ಕೂ ನೆರದಿದ್ದ ಜನರನ್ನು ಚದುರಿಸಲು ಇಲ್ಲಿನ ಪೊಲೀಸರು ಹರ ಸಾಹಸ ಪಟ್ಟ ಘಟನೆಯೂ ನಡೆಯಿತು. ಕೆಲವು ಕಡೆ ಪೊಲೀಸರು ಲಘು ಲಾಠಿ ಚಾರ್ಜ್​ ಮತ್ತು ಜಲಫಿರಂಗಿ ಪ್ರಯೋಗ ಪ್ರಯೋಗ ನಡೆಸಿದರು. ಈ ಫೋಟೊಗಳು ವೈರಲ್​ ಆಗಿವೆ. ಅಫಘಾನಿಸ್ತಾನ ಜೂನ್​ 26ರಂದು(ನಾಳೆ) ನಡೆಯುವ ಸೆಮಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿವೆ. ಗೆದ್ದರೆ ಚೊಚ್ಚಲ ಬಾರಿಗೆ ಫೈನಲ್​ ಪ್ರವೇಶಿಸಿದ ಸಾಧನೆ ಜತೆಗೆ ಕಪ್​ ಗೆದ್ದಷ್ಟೇ ಸಂಭ್ರಮ ಆಚರಿಸಲಿದೆ.

ಅಫಘಾನಿಸ್ತಾನ ಪರ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಹೊರತುಪಡಿಸಿ ಉಳಿದ ಯಾವ ಬ್ಯಾಟರ್​ಗಳು ಕೂಡ ನಿರೀಕ್ಷಿತ ಬ್ಯಾಟಿಂಗ್​ ನಡೆಸುವಲ್ಲಿ ಯಶಸ್ಸು ಕಾಣಲಿಲ್ಲ. ಇಬ್ರಾಹಿಂ ಜದ್ರಾನ್(18),ಅಜ್ಮತುಲ್ಲಾ(10), ನಬಿ(1) ರನ್​ ಗಳಿಸಿ ವಿಕೆಟ್​ ಕೈಚೆಲ್ಲಿದರು. ರಹಮಾನುಲ್ಲಾ ಗುರ್ಬಾಜ್ 3 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 43 ರನ್​ ಬಾರಿಸಿದರು. ಇವರ ಈ ಬ್ಯಾಟಿಂಗ್​ ಹೋರಾಟದಿಂದ ತಂಡ 100ರ ಗಡಿ ದಾಟಿತು.  ಬೌಲಿಂಗ್​ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ರಶೀದ್​ ಖಾನ್​ 4 ಓವರ್​ಗೆ 23 ರನ್​ ವೆಚ್ಚದಲ್ಲಿ 4 ವಿಕೆಟ್​ ಕಿತ್ತು ಮಿಂಚಿದರು. ಇವರಿಗೆ ಮಧ್ಯಮ ವೇಗಿ ನವೀನ್​ ಉಲ್​ ಹಕ್​ ಉತ್ತಮ ಸಾಥ್​ ನೀಡಿ 4 ವಿಕೆಟ್​ ಉರುಳಿಸಿದರು. ಜತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

ಇದನ್ನೂ ಓದಿ AFG vs BAN: ಆಫ್ಘನ್​ ತಂಡದ ಐತಿಹಾಸಿಕ ಸಾಧನೆಯನ್ನು ಕೊಂಡಾಡಿದ ಸಚಿನ್​ ತೆಂಡೂಲ್ಕರ್​

ಸಚಿನ್​ ಮೆಚ್ಚುಗೆ

ಐತಿಹಾಸಿಕ ಸಾಧನೆ ಮಾಡಿರುವ ಅಫಘಾನಿಸ್ತಾನ(Afghanistan vs Bangladesh) ತಂಡಕ್ಕೆ ಕ್ರಿಕೆಟ್​ ದೇವರು, ಸಚಿನ್​ ತೆಂಡೂಲ್ಕರ್(Sachin Tendulkar)​ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಟ್ವಿಟರ್​ ಎಕ್ಸ್​ನಲ್ಲಿ ಅಫಘಾನಿಸ್ತಾನ ತಂಡದ ಸಾಧನೆಯನ್ನು ಕೊಂಡಾಡಿದ ಸಚಿನ್​, ನ್ಯೂಜಿಲ್ಯಾಂಡ್​ ಮತ್ತು ಆಸ್ಟ್ರೇಲಿಯದಂತಹ ಬಲಿಷ್ಠ ತಂಡಗಳನ್ನು ಮಣಿಸಿ ಸೆಮಿಫೈನಲ್‌ ಪ್ರವೇಶಿಸಿರುವ ನಿಮ್ಮ ಗೆಲುವಿನ ಹಾದಿಯು ಅದ್ಭುತವಾಗಿದೆ. ಇಂದಿನ ಗೆಲುವು ನಿಮ್ಮ ಕಠಿಣ ಪರಿಶ್ರಮ ಮತ್ತು ಸಂಕಲ್ಪಕ್ಕೆ ಸಾಕ್ಷಿಯಾಗಿದೆ. ನಿಮ್ಮ ಪ್ರಗತಿಯ ಬಗ್ಗೆ ತುಂಬಾ ಹೆಮ್ಮೆ ಇದೆ. ಹೀಗೇ ಮುಂದುವರಿಯಿರಿ ಎಂದು ಶುಭ ಹಾರೈಸಿದ್ದಾರೆ.

Continue Reading
Advertisement
IND vs ENG
ಕ್ರಿಕೆಟ್47 seconds ago

IND vs ENG: ಇಂಗ್ಲೆಂಡ್‌ ಎದುರು ಭಾರತಕ್ಕೆ ಸೇಡಿನ ಪಂದ್ಯ; ನಾಳೆ ದ್ವಿತೀಯ ಸೆಮಿಫೈನಲ್​

VHP leader murder
ದೇಶ4 mins ago

VHP leader murder: VHP ಮುಖಂಡನ ಬರ್ಬರ ಹತ್ಯೆ; ಹಂತಕರ ಪತ್ತೆಗಾಗಿ NIA 10ಲಕ್ಷ ರೂ. ಬಹುಮಾನ ಘೋಷಣೆ

Vinay Gowda acted darshan devil Movie and says Futture cant be predict
ಸ್ಯಾಂಡಲ್ ವುಡ್21 mins ago

Vinay Gowda: ʻಡೆವಿಲ್ʼ ಸಿನಿಮಾದಲ್ಲಿ ನಾನೇ ವಿಲನ್, ಪ್ರಾಜೆಕ್ಟ್‌ ಏನಾಗುತ್ತೋ ಗೊತ್ತಿಲ್ಲ ಎಂದ ʻಬಿಗ್ ಬಾಸ್ʼ ಆನೆ ವಿನಯ್ ಗೌಡ!

Mass Shooting
ವಿದೇಶ40 mins ago

Mass Shooting: ಅಮೆರಿಕದಲ್ಲಿ ಮತ್ತೊಂದು ಸಾಮೂಹಿಕ ಗುಂಡಿನ ದಾಳಿ; ನಾಲ್ವರನ್ನು ಕೊಂದು ಆತ್ಮಹತ್ಯೆಗೆ ಶರಣಾದ ದುಷ್ಕರ್ಮಿ

Inzamam Ul Haq
ಕ್ರೀಡೆ47 mins ago

Inzamam Ul Haq: ಭಾರತ ತಂಡದ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿದ ಪಾಕ್​ ಮಾಜಿ ನಾಯಕ

rain news wall collapse 4 death
ಕ್ರೈಂ48 mins ago

Rain News: ಭಾರಿ ಮಳೆಗೆ ಮನೆ ಗೋಡೆ ಕುಸಿದು ನಾಲ್ವರು ಸಾವು

Sanjith Hegde Nange Allava song Out
ಸ್ಯಾಂಡಲ್ ವುಡ್1 hour ago

Sanjith Hegde: ಸಂಜನಾ ದಾಸ್‌ಗೆ ʻನೀ ನಂಗೆ ಅಲ್ಲವಾʼ ಎಂದ ಸಂಜಿತ್ ಹೆಗಡೆ!

suraj revanna case 1
ಕ್ರೈಂ1 hour ago

Suraj Revanna Case: ಅಮಾವಾಸ್ಯೆ ದಿನ ಸೂರಜ್‌ ಬಳೆ ತೊಡ್ತಾನೆ, ಸೀರೆ ಉಡ್ತಾನೆ! ಬಯಲು ಮಾಡಿದ ಸಂತ್ರಸ್ತ

Lok Sabha Speaker Election
ದೇಶ1 hour ago

Lok Sabha Speaker Election: ಲೋಕಸಭೆ ಸ್ಪೀಕರ್ ಚುನಾವಣೆ ಇಂದು; ಆಡಳಿತ ಪಕ್ಷ-ಪ್ರತಿಪಕ್ಷ ಬಲಾಬಲ ಹೀಗಿದೆ

Albania vs Spain
ಕ್ರೀಡೆ1 hour ago

Albania vs Spain: ಯುರೋ ಕಪ್​ನಲ್ಲಿ ನಾಕೌಟ್‌ ಹಂತಕ್ಕೇರಿದ ಸ್ಪೇನ್‌

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌