Site icon Vistara News

Murder Attempt: ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ ಪುತ್ರನ ಹತ್ಯೆಗೆ ಸಂಚು ಪತ್ತೆ

murder attempt bk sangameshwara son

ಶಿವಮೊಗ್ಗ : ಭದ್ರಾವತಿ ಶಾಸಕ (Bhadravathi MLA) ಬಿ.ಕೆ ಸಂಗಮೇಶ್ವರ (BK Sangameshwara) ಅವರ ಪುತ್ರನ ಹತ್ಯೆಗೆ ಸಂಚು (Murder attempt) ಎಸಗಿರುವುದು ಪತ್ತೆಯಾಗಿದೆ. ಶಾಸಕನ ಪುತ್ರ ಬಸವರಾಜ್ ಸ್ವಲ್ಪದರಲ್ಲೇ ಹತ್ಯೆಯಿಂದ ಪಾರಾಗಿದ್ದು, ಆರೋಪಿಗಳ ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ.

ಶಾಸಕ ಬಿ.ಕೆ.ಸಂಗಮೇಶ್ವರ್ ಪುತ್ರ ಬಸವರಾಜು ಹತ್ಯೆಗೆ ಸಂಚು ರೂಪಿಸಿರುವ ಕುರಿತು ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಚ್ಚಿ ಮುಬಾರಕ್‌, ಟಿಪ್ಪು ಮತ್ತು ಇತರೆ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇವರು ಜೈಲಿನಿಂದಲೇ ಸ್ಕೆಚ್‌ ರೂಪಿಸಿದ್ದ ಕುರಿತು ಆರೋಪವಿದೆ.

ಮುಬಾರಕ್‌ ಅಲಿಯಾಸ್‌ ಡಿಚ್ಚಿ ಮುಬಾರಕ್‌ ಎಂಬಾತ ಜೈಲಿನಿಂದ ಭದ್ರಾವತಿಯ ಟಿಪ್ಪು ಎಂಬಾತನಿಗೆ ಕರೆ ಮಾಡಿ ಸುಫಾರಿ ನೀಡಿದ್ದ. ಭದ್ರಾವತಿ ಗಾಂಧಿ ಸರ್ಕಲ್‌ ಬಳಿ ಬಸವರಾಜ್ ಅವರನ್ನು ಹತ್ಯೆ ಮಾಡುವಂತೆ ಟಿಪ್ಪು ಮತ್ತು ಇತರೆ ನಾಲ್ವರನ್ನು ಮುಬಾರಕ್ ಕಳುಹಿಸಿದ್ದ. ಸುಫಾರಿ ಪಡೆದಿದ್ದ ಟಿಪ್ಪುನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸಂಬಂಧ ಗುತ್ತಿಗೆದಾರ ಸುನಿಲ್‌ ಎಂಬವರು ದೂರು ನೀಡಿದ್ದಾರೆ. ಟಿಪ್ಪುವನ್ನು ಗುತ್ತಿಗೆದಾರ ಸುನಿಲ್‌ ಭೇಟಿಯಾದಾಗ ಆತನಿಗೆ ಕೂಡ ಡಿಚ್ಚಿ ಮುಬಾರಕ್‌ ಕರೆ ಮಾಡಿದ್ದಾನೆ. ಕಾರು ಮತ್ತು ನಾಲ್ವರನ್ನು ಕಳುಹಿಸುತ್ತಿರುವುದಾಗಿ ಮುಬಾರಕ್ ಹೇಳಿದ್ದಾನೆ. ಭದ್ರಾವತಿ ಹಳೆ‌‌ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.

ಚಿಕಿತ್ಸೆಗೆ ಬಂದ ವೃದ್ಧೆಯನ್ನೂ ಬಿಡದೆ ಅತ್ಯಾಚಾರ ಎಸಗಿದ ಕಾಮುಕ

ಚಿಕ್ಕಬಳ್ಳಾಪುರ: ಆಸ್ಪತ್ರೆ ಆವರಣದಲ್ಲೇ 65 ವರ್ಷದ ವೃದ್ಧೆಯೊಬ್ಬರ ಮೇಲೆ ಕಾಮಪಿಶಾಚಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ ಕೃತ್ಯ ನಡೆದಿದ್ದು, ಇರ್ಫಾನ್ (24) ಎಂಬಾತ ವೃದ್ಧೆಯನ್ನೂ ಬಿಡದ ಕಾಮುಕ.

ಇರ್ಫಾನ್ ಚಿಂತಾಮಣಿ ನಗರದ ಹೈದರಾಲಿ ನಗರದ ನಿವಾಸಿಯಾಗಿದ್ದು, ಚಿಕಿತ್ಸೆಗೆಂದು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದ ವೃದ್ಧೆಯ ಮೇಲೆ ಕೃತ್ಯ ಎಸಗಿದ್ದಾನೆ. ಆಕ್ಸಿಜನ್ ಪ್ಲಾಂಟ್ ಪಕ್ಕದ ಶೆಡ್‌ನಲ್ಲಿ ಮಲಗಿದ್ದ ಮಹಿಳೆಯ ಮೇಲೆ ಈತ ಅತ್ಯಾಚಾರ ಎಸಗಿದ್ದು, ಈತನನ್ನು ಬಂಧಿಸಲಾಗಿದೆ.

ಸ್ಥಳಕ್ಕೆ ಡಿವೈಎಸ್ಪಿ ಮುರುಳೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಲ್ಕತಾ ಆರ್‌ಜಿ ಕರ್‌ ಆಸ್ಪತ್ರೆಯಲ್ಲಿ ನಡೆದ ಜೂನಿಯರ್‌ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಳಿಕ ಸರಕಾರಿ ಆಸ್ಪತ್ರೆಗಳಲ್ಲಿನ ಸುರಕ್ಷಿತತೆಯ ಬಗೆಗೆ ಕಳವಳ ಮೂಡಿದ್ದು, ಇದಕ್ಕೆ ಈ ಘಟನೆ ಇನ್ನೊಂದು ಸೇರ್ಪಡೆಯಾಗಿದೆ.

ಇದನ್ನೂ ಓದಿ: Bomb Threat: ಏರ್‌ ಇಂಡಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆ, ತಿರುವನಂತಪುರಂ ಏರ್‌ಪೋರ್ಟ್‌ನಲ್ಲಿ ತುರ್ತುಸ್ಥಿತಿ

Exit mobile version