Site icon Vistara News

Blackmail Case: ಜೈಲಿನಿಂದಲೇ ಬ್ಲ್ಯಾಕ್‌ಮೇಲ್ ಮಾಡಿದ ರೌಡಿ, ಯುವತಿಯ ನಗ್ನ ಫೋಟೊ ಕಳಿಸಿ ಪೀಡನೆ

rowdy manu blackmail

ಬೆಂಗಳೂರು: ಜೈಲಿನಲ್ಲಿದ್ದರೂ ಕಿರಾತಕ ರೌಡಿಯೊಬ್ಬ (Rowdy Sheeter) ಬ್ಲ್ಯಾಕ್‌ಮೇಲ್‌ (Blackmail Case) ಮಾಡಿದ್ದಾನೆ. ಯುವತಿಯೊಬ್ಬಳ ತಿರುಚಿದ ನಗ್ನ ಫೋಟೋ (Morphed nude photo) ಕಳಿಸಿ ಹಣ ನೀಡುವಂತೆ ಪೀಡಿಸಿ ಬೆದರಿಕೆ ಹಾಕಿದ್ದಾನೆ.

ರೌಡಿ ಮನೋಜ್ ಅಲಿಯಾಸ್‌ ಕೆಂಚ ಬೆತ್ತಲೆ ಫೋಟೊ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿದವನು. ಕಳೆದ ಆಗಸ್ಟ್‌ನಲ್ಲಿ ಈ ರೌಡಿ ಮನೋಜ್ ಮತ್ತವನ ಗ್ಯಾಂಗ್ ಯುವತಿಯ ತಾಯಿಗೆ ಫೋಟೊ ಕಳಿಸಿ ಹಣ ಕಿತ್ತಿತ್ತು. ʼಹಣ ಕೊಡದಿದ್ದರೆ ನಿನ್ನ ಮಗಳ ಬೆತ್ತಲೆ ಫೋಟೊ ನಿನ್ನ ಅಳಿಯನಿಗೆ ಕಳಿಸ್ತೀನಿʼ ಎಂದು ಬೆದರಿಕೆ ಹಾಕಿದ್ದ. ಹೀಗೆ ಫೋಟೊ ತೋರಿಸಿ ತಾಯಿಯಿಂದ 40 ಸಾವಿರ ಹಣ ಕಿತ್ತಿದ್ದ.

ಫೆಬ್ರವರಿ 9ರಂದು ಮತ್ತೆ ಮನು ಸಹಚರ ರೌಡಿ ಕಾರ್ತಿಕ್ ಎಂಬಾತ ತಾಯಿಗೆ ಮತ್ತೆ ವಾಟ್ಸ್ಯಾಪ್ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ʼಮನು ಕಡೆಯ ಹುಡುಗ ನಾನು. 5 ಲಕ್ಷ ರೂ. ಹಣ ಕೊಡದಿದ್ದರೆ ಫೋಟೊವನ್ನು ನಿನ್ನ ಅಳಿಯನಿಗೆ ಕಳಿಸ್ತೀನಿʼ ಎಂದು ಅವಾಜ್ ಹಾಕಿದ್ದಾನೆ. ಫೆಬ್ರವರಿ 12ರಂದು ರೌಡಿ ಮನು ಜೈಲಿನಿಂದಲೇ ಕರೆ ಮಾಡಿ ಧಮಕಿ ಹಾಕಿದ್ದಾನೆ.

ವಾಟ್ಸ್ಯಾಪ್ ಹಾಗು ಮೆಸೆಂಜರ್ ಕಾಲ್ ಮಾಡಿ ಮನು ಹಾಗು ಕಾರ್ತಿಕ್‌ ಬೆದರಿಕೆ ಒಡ್ಡಿದ್ದಾರೆ. ಹಣ ನೀಡದಿದ್ರೆ ಫೋಟೊ ಬಹಿರಂಗ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಫೋಟೊ ಮಾರ್ಫ್ ಮಾಡಿ ಬೆದರಿಸುತ್ತಿದ್ದಾರೆ ಎಂದು ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಇನ್‌ಫಾರ್ಮೇಶನ್ ಟೆಕ್ನಾಲಜಿ ಕಾಯಿದೆ-67, ಐಪಿಸಿ 34 ಆಂಡ್ 384 ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಸದ್ಯ ರೌಡಿ ಮನುವನ್ನು ಜೈಲಿನಿಂದ ಬಾಡಿವಾರೆಂಟ್ ಮೇಲೆ ವಶಕ್ಕೆ ಪಡೆಯಲು ಸಿಸಿಬಿ ಸಿದ್ಧತೆ ನಡೆಸಿದೆ.

ಹೆಂಡತಿಯನ್ನು ಇರಿದು ಕೊಂದ ಗಂಡ

ಕೋಲಾರ: ಗಂಡನೇ ಹೆಂಡತಿಯನ್ನು ಚೂರಿಯಿಂದ ಚುಚ್ಚಿ ಕೊಲೆ (murder case) ಮಾಡಿದ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್‌ ಕೋರಮಂಡಲ್‌ನಲ್ಲಿ ನಡೆದಿದೆ. ಸಂಜಯಗಾಂಧಿನಗರ ನಿವಾಸಿ ಪವಿತ್ರ ಮೃತ ದುರ್ದೈವಿ.

ಇಂದು ಸಂಜೆ ಗಾರ್ಮೆಂಟ್ ಕೆಲಸ ಮುಗಿಸಿಕೊಂಡು ಬರುತ್ತಿರುವಾಗ ಘಟನೆ ನಡೆದಿದೆ. ಗಂಡ ಲೋಕೇಶ್‌ ಆಕೆಯನ್ನು ಚೂರಿಯಿಂದ ದೇಹದ ಹಲವು ಭಾಗಗಳಲ್ಲಿ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಆಕೆ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಅಸುನೀಗಿದ್ದಾಳೆ. ಇವರಿಗೆ ಒಂದು ಗಂಡು ಮತ್ತು ಹೆಣ್ಣು ಮಗುವಿದೆ.

ಮೃತ ಮಹಿಳೆ ಗಂಡನ ಮೇಲೆ ಈಚೆಗೆ ಊರಿಗಾಂ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಕುರಿತು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಊರಿಗಾಂ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Murder Case : ಅತಿಥಿ ಶಿಕ್ಷಕನ ಕೊಲೆಗೆ ಬಿಗ್‌ ಟ್ವಿಸ್ಟ್‌; ಹೆಂಡ್ತಿ, ಮಗಳೇ ಹಂತಕರು!

Exit mobile version