ಬೆಂಗಳೂರು: ರಾಜಧಾನಿಯ ಅಮೃತಹಳ್ಳಿ ಠಾಣಾ ವ್ಯಾಪ್ತಿಯ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆ ಇಮೇಲ್ (Bomb Hoax, bomb threat Email) ಬಂದಿದೆ. ಅಮೃತಹಳ್ಳಿಯ ಕೆಂಪಾಪುರದಲ್ಲಿರುವ ಜೈನ್ ಹೆರಿಟೇಜ್ ಶಾಲೆಗೆ ಬಾಂಬ್ ಬೆದರಿಕೆ ಮೇಲ್ ಬಂದಿದ್ದು, ನಿನ್ನೆ ಮಧ್ಯರಾತ್ರಿ ಬಾಂಬ್ ಬೆದರಿಕೆ ಇಮೇಲ್ ಅನ್ನು ದುಷ್ಕರ್ಮಿಗಳು (miscreants) ಕಳಿಸಿದ್ದಾರೆ.
ಇಂದು ಬೆಳಗ್ಗೆ ಏಳೂವರೆಗೆ ಶಾಲಾ ಸಿಬ್ಬಂದಿ ಕಚೇರಿ ಒಪನ್ ಮಾಡಿದ್ದರು. ಈ ವೇಳೆ ಮೇಲ್ ಬಂದಿರುವುದು ಪತ್ತೆಯಾಗಿದೆ. ಕೂಡಲೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ರಾತ್ರಿ ಸುಮಾರು 12.20ರ ಸುಮಾರಿಗೆ ಬಾಂಬ್ ಬೆದರಿಕೆಯ ಮೇಲ್ ರವಾನೆಯಾಗಿದೆ. ಶಾಲೆಗೆ ಸ್ಥಳೀಯ ಪೊಲೀಸರು, ಡಾಗ್ ಸ್ಕ್ವಾಡ್, ಬಾಂಬ್ ಸ್ಕ್ವಾಡ್ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಸದ್ಯ ಪೊಲೀಸರಿಂದ ಪರಿಶೀಲನೆ ಮುಂದುವರಿದಿದೆ. ಪರಿಶೀಲನೆಯಲ್ಲಿ ಇದೊಂದು ಹುಸಿ ಬಾಂಬ್ ಮೇಲ್ ಎನ್ನುವುದು ಧೃಢವಾಗಿದೆ.
ಕಳೆದ ವರ್ಷ ಹಲವು ಪ್ರತಿಷ್ಠಿತ ಶಾಲೆಗಳಿಗೆ ಇದೇ ರೀತಿಯ ಬಾಂಬ್ ಬೆದರಿಕೆ ಇಮೇಲ್ ಬಂದಿತ್ತು. ಇದು ಕೂಡ ಹುಸಿಯಾಗಿತ್ತು. ಇತ್ತೀಚೆಗೆ ಹೊಸದಿಲ್ಲಿಯ ಹತ್ತಾರು ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ಆ ಎಲ್ಲ ಶಾಲೆಗಳ ಮಕ್ಕಳಿಗೂ ರಜೆ ನೀಡಿ ಆವರಣ ತಲಾಶ್ ಮಾಡಲಾಗಿತ್ತು. ಇದು ಕೂಡ ಹುಸಿ ಎಂದು ಕಂಡುಬಂದಿತ್ತು. ಹೀಗೆ ಬೆದರಿಕೆ ಇಮೇಲ್ ಮಾಡಿದ ವ್ಯಕ್ತಿ ಅಪ್ರಾಪ್ತ ವಯಸ್ಕ ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಇತ್ತೀಚೆಗೆ ಕಿಡಿಗೇಡಿಗಳ ಕೃತ್ಯ ಎಂದು ಶಂಕಿಸಲಾಗಿದೆ. ಹೀಗೆ ಬೆದರಿಕೆ ಮೇಲ್ ಮಾಡುತ್ತಿರುವವರ ತಂತ್ರಜ್ಞಾನದಲ್ಲಿ ಪರಿಣಿತರಾಗಿದ್ದು, ದೇಶದ ಸರ್ವರ್ ಕನೆಕ್ಷನ್ ತಪ್ಪಿಸಿ ವಿಪಿಎನ್ ಮೂಲಕ ಕಾರ್ಯಾಚರಿಸಿ ವಿದೇಶಗಳ ಸರ್ವರ್‌ನಿಂದ ಬಂದಂತೆ ತೋರಿಸುವ ಕಲೆಯಲ್ಲಿ ನಿಷ್ಣಾತರಾಗಿದ್ದಾರೆ. ಹೀಗಾಗಿ ಇದನ್ನು ಭೇದಿಸುವುದು ಪೊಲೀಸರಿಗೆ ಕಷ್ಟವಾಗುತ್ತಿದೆ. ಒಂದು ಶಾಲೆಗೆ ಮಾತ್ರ ಬೆದರಿಕೆ ಮೇಲ್ ಬಂದಿರುವ ಹಿನ್ನೆಲೆಯಲ್ಲಿ, ವೈಯಕ್ತಿಕ ದ್ವೇಷ ಕಾರ್ಯಾಚರಿಸಿರಬಹುದು ಎಂದು ಶಂಕಿಸಲಾಗಿದೆ.
ಕೋರ್ಟ್ ಇಂಜಂಕ್ಷನ್ ಇರುವ ಜಮೀನಿಗೆ ಕಾಲಿಟ್ಟಿದ್ದಕ್ಕೆ ಕುಡುಗೋಲಿನಿಂದ ಕಡಿದು ಕೊಂದರು!
ಶಿವಮೊಗ್ಗ: ತಾಲೂಕಿನ ದುಮ್ಮಳ್ಳಿ ಗ್ರಾಮದ ಒಂದು ಜಮೀನು (Land dispute) ಹಲವು ವರ್ಷಗಳಿಂದ ವಿವಾದದಲ್ಲಿತ್ತು. ಈ ಹಿನ್ನೆಲೆಯಲ್ಲಿ ಇಂಜಂಕ್ಷನ್ ಆರ್ಡರ್ (Injenction Order) ಅನ್ನು ಸಹ ತರಲಾಗಿತ್ತು. ಇಷ್ಟಾದರೂ ಈ ಜಮೀನಿಗೆ ಪ್ರವೇಶ ಮಾಡಿದ್ದಾನೆ ಎಂಬ ಕಾರಣಕ್ಕೆ ಇನ್ನೊಂದು ಕಡೆಯ ಗುಂಪಿನವರು ದಾಳಿ ನಡೆಸಿ ಕುಡುಗೋಲು ಬೀಸಿ ಕೊಂದು (Murder case) ಹಾಕಿದ್ದಾರೆ.
ಜಮೀನು ವಿವಾದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಹಾಡಹಗಲೇ ಕೊಲೆ ನಡೆದಿದೆ. ಇಂಜಂಕ್ಷನ್ ಆರ್ಡರ್ ಇದ್ದ ಜಮೀನಿಗೆ ತೆರಳಿದ್ದ ಸತೀಶ್ ನಾಯ್ಕ (28) ಕೊಲೆಯಾದ ದುರ್ದೈವಿ. ದೂರದ ಸಂಬಂಧಿ ಅಖಿಲೇಶ್ (27) ಸೇರಿದಂತೆ ಹಲವರ ಗುಂಪಿನಿಂದ ಮಾರಣಾಂತಿಕ ಹಲ್ಲೆ ನಡೆದಿದೆ.
ಕಳೆದ ಹಲವಾರು ವರ್ಷಗಳಿಂದ ಈ ಜಮೀನು ವಿವಾದದಲ್ಲಿತ್ತು. ಯಾರೂ ಕೂಡ ಜಮೀನಿನೊಳಗೆ ತೆರಳದಂತೆ ಇಂಜಂಕ್ಷನ್ ಆದೇಶವನ್ನು ತರಲಾಗಿತ್ತು. ಆದರೆ, ಸೋಮವಾರ ಬೆಳಗ್ಗೆ ಸತೀಶ್ ನಾಯ್ಕ ಜಮೀನಿಗೆ ತೆರಳಿದ್ದರು. ಈ ವೇಳೆ ಅಖಿಲೇಶ್ ಹಾಗೂ ಕೆಲವರು ಇದನ್ನು ಪ್ರಶ್ನೆ ಮಾಡಿದ್ದಾರೆ. ಆಗ ಪರಸ್ಪರ ಮಾತಿಗೆ ಮಾತು ಬೆಳೆದಿದೆ. ತೀವ್ರ ವಾಗ್ವಾದಗಳು ನಡೆದಿದ್ದು, ಪರಸ್ಪರ ಹೊಡೆದಾಡಿಕೊಳ್ಳುವ ಮಟ್ಟಕ್ಕೆ ಹೋಗಿದೆ.
ಗಲಾಟೆ ಜೋರಾಗುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ಅಖಿಲೇಶ್ ಗುಂಪಿನವರಲ್ಲೊಬ್ಬರು ಸ್ಥಳದಲ್ಲಿದ್ದ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾರೆ. ಮತ್ತೆ ಕೆಲವರು ಕೈಯಿಂದಲೇ ಗುದ್ದಿದ್ದಾರೆ. ಬಹಳಷ್ಟು ಜನ ಏಕಾಏಕಿ ದಾಳಿ ನಡೆಸಿದ್ದರಿಂದ ತೀವ್ರವಾಗಿ ಗಾಯಗೊಂಡ ಸತೀಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂರು ಮಂದಿಯನ್ನು ಕೊಂದು ಅಬ್ಬರಿಸಿದ ರೌಡಿ ಶೀಟರ್ ಕಾಲಿಗೆ ಗುಂಡೇಟು, ಬಂಧನ
ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದಿದ್ದ ಗ್ಯಾಂಗ್ ವಾರ್ (Shimogga Gang War) ಪ್ರಕರಣದಲ್ಲಿ ಮೂವರನ್ನು ನಡುಬೀದಿಯಲ್ಲಿ ಕೊಚ್ಚಿ ಕೊಲೆ (Triple Murder Case) ಮಾಡಿದ್ದ ಆರೋಪಿಗಳಲ್ಲಿ ಒಬ್ಬ ರೌಡಿ ಶೀಟರ್ (Rowdy Sheeter) ಕಾಲಿಗೆ ಪೊಲೀಸರು ಗುಂಡು ಹಾರಿಸಿ (Shoot out) ಬಂಧಿಸಿದ್ದಾರೆ.
ತ್ರಿಬಲ್ ಮರ್ಡರ್ ಪ್ರಕರಣದ ಆರೋಪಿ, ರೌಡಿ ಶೀಟರ್ ಶೋಹಿಬ್ ಕಾಲಿಗೆ ಪೊಲೀಸರು ಶೂಟ್ ಮಾಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬೀರನಕೆರೆ ಬಳಿ ರೌಡಿ ಶೀಟರ್ ಶೋಹಿಬ್‌ನನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ. ಪಿಎಸ್ಐ ಕುಮಾರ್ ಹಾಗೂ ಹೆಡ್ ಕಾನ್ಸ್‌ಟೇಬಲ್ ಅಣ್ಣಪ್ಪ ಮೇಲೆ ಹಲ್ಲೆಗೆ ಯತ್ನಿಸಿದ್ದ ಶೋಹಿಬ್ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.
ಶಿವಮೊಗ್ಗ ನಗರದ ಲಷ್ಕರ್ ಮೊಹಲ್ಲಾ ಸರ್ಕಲ್ ಬಳಿ ಗ್ಯಾಂಗ್ ವಾರ್ ನಡೆದಿತ್ತು. ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್‌ಗಳನ್ನು ಕೊಚ್ಚಿ ಕೊಲೆ (Murder Case) ಮಾಡಲಾಗಿತ್ತು. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಚಪ್ಪಡಿ ಕಲ್ಲು, ಸೈಕಲ್ ಎತ್ತಿಹಾಕಿ ಭೀಕರವಾಗಿ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ತುಂಗಾನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಶೋಯೆಬ್ ಅಲಿಯಾಸ್ ಸೇಬು, ದೊಡ್ಡಪೇಟೆ ಠಾಣಾ ವ್ಯಾಪ್ತಿಯ ರೌಡಿಶೀಟರ್ ಗೌಸ್ ಹತ್ಯೆಯಾಗಿತ್ತು. ಚಾಕುವಿನಿಂದ ತಿವಿತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ಯಾಸೀನ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.
ಮೊದಲಿಗೆ ಮೃತ ಯುವಕರ ಕಡೆಯ ಗುಂಪು ರೌಡಿ ಶೀಟರ್ ಯಾಸೀನ್ ಕುರೇಶಿ ಎಂಬಾತನ ಮೇಲೆ ದಾಳಿ ಮಾಡಿದೆ. ಹೀಗಾಗಿ ಯಾಸೀನ್ ಕುರೇಶಿ ಗ್ಯಾಂಗ್ ಪ್ರತಿದಾಳಿ ನಡೆಸಿ, ಹಲ್ಲೆ ಮಾಡಲು ಬಂದಿದ್ದ ಶೋಯೆಬ್, ಗೌಸ್‌ನನ್ನು ಕೊಲೆ ಮಾಡಿದ್ದಾರೆ. ಬ್ಯಾಟ್, ಲಾಂಗುಗಳಿಂದ ಹೊಡೆದು, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಇದನ್ನೂ ಓದಿ: Murder Case: ರಸ್ತೆ ಬದಿ ಮಲಗಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ