Site icon Vistara News

ದೈಹಿಕ ಸಂಬಂಧ, ಬ್ಲ್ಯಾಕ್‌ಮೇಲ್ ಮಾಡಿದ ಶಿಕ್ಷಕಿಯ ಕೊಲೆ ಮಾಡಿದ ವಿದ್ಯಾರ್ಥಿ

ಹತ್ಯೆ

ಅಯೋಧ್ಯೆ: ದೈಹಿಕ ಸಂಬಂಧ ಮುಂದುವರಿಸಲು ಒಪ್ಪದ ವಿದ್ಯಾರ್ಥಿ ತನ್ನ ಶಿಕ್ಷಕಿಯನ್ನೇ ಕೊಂದುಹಾಕಿದ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದಿದೆ. ಕೊಲೆ ಆರೋಪದಲ್ಲಿ 12ನೇ ತರಗತಿಯ ವಿದ್ಯಾರ್ಥಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಬಂಧಿತ ಹುಡುಗ ಮೃತ ಶಿಕ್ಷಕಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ. ಸಂಬಂಧ ಬಹಿರಂಗಗೊಳ್ಳಬಹುದು ಎಂಬ ಭಯದಿಂದ ಆಕೆಯಿಂದ ದೂರವಾಗುವ ಇಚ್ಛೆ ವ್ಯಕ್ತಪಡಿಸಿದ್ದ. ಆದರೆ ಶಿಕ್ಷಕಿ ಆತನ ಬಗ್ಗೆ ಅವಮಾನಕಾರಿ ವಿವರ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಳು. ಹೀಗಾಗಿ ಅವನು ಶಿಕ್ಷಕಿಯನ್ನು ಕೊಂದಿದ್ದಾನೆ ಎಂದು ಅಯೋಧ್ಯೆಯ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಎಪಿ ಸಿಂಗ್ ಹೇಳಿದ್ದಾರೆ.

ಪ್ರಕರಣದ ಸ್ಥಳಕ್ಕೆ ಸಮೀಪದ ಸಿಸಿ ಕ್ಯಾಮೆರಾ ಫೂಟೇಜ್‌ ಪರಿಶೀಲಿಸಿ, ವಿದ್ಯಾರ್ಥಿಯ ಟೀ ಶರ್ಟ್‌ನಿಂದ ಆತನ ಗುರುತು ಹಿಡಿಯಲಾಗಿದೆ. ತನಿಖೆ ನಡೆಯುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ನೇಣುಬಿಗಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆ; ಪತಿ ವಿರುದ್ಧ ಕೊಲೆ ಆರೋಪ

Exit mobile version