ಯಾದಗಿರಿ: ನವಿ ಮುಂಬಯಿಯಲ್ಲಿ (Mumbai murder) ಯುವತಿಯೊಬ್ಬಳನ್ನು ಬರ್ಬರವಾಗಿ ಕೊಂದುಹಾಕಿ (Brutal Murder) ಪರಾರಿಯಾಗಿದ್ದ ಕರ್ನಾಟಕದ ಆರೋಪಿ ದಾವೂದ್, ಯಾದಗಿರಿಯಲ್ಲಿ (Yadgir news) ಸಿಕ್ಕಿಬಿದ್ದಿದ್ದಾನೆ. ಮುಂಬಯಿ ಪೊಲೀಸರು (Mumbai Police) ಬಂಧಿಸಿ ಈತನನ್ನು ತನಿಖೆಗಾಗಿ ಕರೆದೊಯ್ದಿದ್ದಾರೆ.
ಕೊಲೆ ಮಾಡಿ ಬಂದು ಯಾದಗಿರಿಯ ಶಹಾಪುರ ತಾಲೂಕಿನ ಆಲ್ದಾಳ ಗ್ರಾಮದಲ್ಲಿ ತನ್ನ ಅಜ್ಜಿ ಮನೆಯಲ್ಲಿ ಅಡಗಿ ಕುಳಿತಿದ್ದ ಆರೋಪಿ ದಾವೂದ್‌ನನ್ನು ಸೆರೆಹಿಡಿಯಲಾಗಿದೆ. ಈತ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹಂಗರಗಾ ಗ್ರಾಮದ ನಿವಾಸಿ. ಜುಲೈ 27ರಂದು ಈತ ಮುಂಬಯಿಯಲ್ಲಿ 25 ವರ್ಷದ ಯಶಶ್ರೀ ಎಂಬ ಯುವತಿಯನ್ನು ಕೊಂದಿದ್ದ.
ಯಶಶ್ರೀಯನ್ನು ಪ್ರೀತಿಸುತ್ತಿದ್ದ ಆರೋಪಿ ದಾವೂದ್, ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಫೇಸ್‌ಬುಕ್ ಮೂಲಕ ಪರಿಚಯವಾಗಿ ಬಳಿಕ ಇಬ್ಬರೂ ಪ್ರೀತಿಸುತ್ತಿದ್ದರು. ನಂತರ ಈತ ಮುಂಬಯಿಯಲ್ಲಿ ಕೆಲ ಕಾಲ ವಾಸವಿದ್ದ. 2019ರಲ್ಲಿಯೇ ಅಪ್ರಾಪ್ತ ವಯಸ್ಸಿನವನಾಗಿದ್ದಾಗಲೇ ಯಶಶ್ರೀಗೆ ಕಿರುಕುಳ ನೀಡಿದ ಆರೋಪ ಈತನ ಮೇಲಿದೆ. ಆತನನ್ನು ಆಗಲೇ ಬಂಧಿಸಲಾಗಿತ್ತು. ಜೈಲಿನಿಂದ ಹೊರಬಂದ ನಂತರ ಅವನು ಕರ್ನಾಟಕದ ತನ್ನ ಊರಿಗೆ ಬಂದಿದ್ದ.
ಆದರೆ ಯಶಶ್ರೀಗೆ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದುದನ್ನು ಪತ್ತೆ ಹಚ್ಚಲಾಗಿದೆ. ಇದೀಗ ಮತ್ತೆ ಮುಂಬಯಿಗೆ ಹೋಗಿ ಕೊಲೆ ಮಾಡಿರುವ ಆರೋಪಿಯ ಪತ್ತೆ ಕಾರ್ಯಕ್ಕೆ ಮುಂಬೈ ಅರ್ಬನ್ ಠಾಣೆ ಪೊಲೀಸರು ನಾಲ್ಕು ತಂಡ ರಚಿಸಿದ್ದರು. ಒಂದು ತಂಡ ಯಾದಗಿರಿಗೆ ಆಗಮಿಸಿ ನಿನ್ನೆ ರಾತ್ರೋರಾತ್ರಿ ಆರೋಪಿಯ ಪತ್ತೆ ಹಚ್ಚಿ ಬಂಧಿಸಿದೆ.
ಹತ್ಯೆ ಪ್ರಕರಣದ ವಿವರ
ಕಳೆದ ಎರಡು ದಿನಗಳಿಂದ ನಿಗೂಢವಾಗಿ ಕಾಣೆಯಾಗಿದ್ದ ಯುವತಿಯ ಮೃತದೇಹ ರಕ್ತದ ಮಡುವಿನಲ್ಲಿ ನಿನ್ನೆ ನವೀ ಮುಂಬೈನಲ್ಲಿ ಪತ್ತೆಯಾಗಿತ್ತು. ಅದನ್ನು ಬೀದಿನಾಯಿಗಳು ತಿಂದುಹಾಕಿದ್ದವು. ಮೃತ ಯುವತಿಯನ್ನು 22 ವರ್ಷದ ಯಶಶ್ರೀ (Yashashree) ಎಂದು ಗುರುತಿಸಲಾಗಿತ್ತು. ಆಕೆಯ ಜನನಾಂಗ ಮತ್ತು ಎದೆಯ ಭಾಗ ಸೇರಿದಂತೆ ಖಾಸಗಿ ಭಾಗಗಳನ್ನು ಬರ್ಬರವಾಗಿ ಇರಿಯಲಾಗಿತ್ತು
ಶುಕ್ರವಾರ (ಜುಲೈ 26) ರಾತ್ರಿ ಮಹಿಳೆಯ ಮೃತದೇಹ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಬೀದಿ ನಾಯಿಗಳು ಅದನ್ನು ತಿನ್ನುತ್ತಿವೆ ಎಂದು ಪೊಲೀಸರಿಗೆ ಕರೆ ಬಂದಿತ್ತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ಹೊರತೆಗೆದಿದ್ದಾರೆ. ಮೃತ ದೇಹವು ಆಕೆಯ ಎದೆ, ಸೊಂಟ, ಬೆನ್ನು ಮತ್ತು ಆಕೆಯ ಖಾಸಗಿ ಭಾಗಗಳಲ್ಲಿ ಹಲವಾರು ಇರಿತದ ಗಾಯಗಳನ್ನು ಹೊಂದಿದೆ ಎಂದು ವರದಿಯಾಗಿದೆ. ಆಕೆಯ ಮೂಳೆಗಳು ಮುರಿದಿವೆ ಎಂದು ಪೊಲೀಸರು ಹೇಳಿದ್ದಾರೆ.
ದಾವೂದ್ ಶೇಖ್ ಎಂಬಾತ ಆಕೆಯನ್ನು ಕೊಂದಿದ್ದಾನೆ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ. ಪೊಲೀಸರ ಪ್ರಕಾರ, ದಾವೂದ್ 2019ರಲ್ಲಿ ಅಪ್ರಾಪ್ತ ವಯಸ್ಸಿನವನಾಗಿದ್ದಾಗ ಯಶಶ್ರೀಗೆ ಕಿರುಕುಳ ನೀಡಿದ ಆರೋಪದ ಮೇಲೆ ಈ ಹಿಂದೆ ಬಂಧಿಸಲಾಗಿತ್ತು. ಜೈಲಿನಿಂದ ಹೊರಬಂದ ನಂತರ ಅವನು ಊರಿಗೆ ಹೋಗಿದ್ದ. ಆದಾಗ್ಯೂ, ಕರೆ ದಾಖಲೆಗಳು ಆರೋಪಿಯೊಂದಿಗೆ ಹಲವಾರು ಗಂಟೆಗಳ ಕಾಲ ಮಾತನಾಡುತ್ತಿದ್ದಳು ಎಂದು ಸೂಚಿಸಿದೆ. ಕೊಲೆ ಕೃತ್ಯದ ಸಂದರ್ಭದಲ್ಲಿ ದಾವೂದ್ ಆ ಸ್ಥಳದಲ್ಲಿ ಇದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಜುಲೈ 25 ರಂದು (ಗುರುವಾರ) ಯಶಶ್ರಿ ಶಿಂಧೆ ನಾಪತ್ತೆಯ ಬಗ್ಗೆ ಮೂಲತಃ ಆಕೆಯ ಪೋಷಕರು ಪ್ರಕರಣವನ್ನು ದಾಖಲಿಸಿದ್ದರು. ಆದರೆ, ಎರಡು ದಿನಗಳ ಬಳಿಕ ಶನಿವಾರ ಆಕೆಯ ಶವ ಅತ್ಯಂತ ಭೀಕರ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಕೆಯ ದೇಹದ ಮೇಲೆ ಹಲವಾರು ಗಾಯದ ಗುರುತುಗಳು ವರದಿಯಾಗಿವೆ. ಆಕೆಯ ಭುಜದ ಮಾಂಸವನ್ನೂ ತಿಂದು ಹಾಕಿದ್ದ ಬೀದಿನಾಯಿಗಳು ಆಕೆಯ ಮುಖವನ್ನೂ ವಿರೂಪಗೊಳಿಸಿವೆ. ಅವಳ ಬಟ್ಟೆ ಮತ್ತು ಆಕೆಯ ಮೈಮೇಲಿದ್ದ ಟ್ಯಾಟೂ ಸಹಾಯದಿಂದ ಆಕೆಯ ಗುರುತು ಪತ್ತೆ ಹಚ್ಚಲಾಯಿತು.
ಇದನ್ನೂ ಓದಿ: Actor Darshan: 80 ವರ್ಷಗಳ ಹಿಂದೆ ನಡೆದಿತ್ತು ದರ್ಶನ್ ಮಾದರಿ ಕ್ರೈಂ! ಜೈಲು ಪಾಲಾಗಿದ್ದರು ತಮಿಳು ಸೂಪರ್ ಸ್ಟಾರ್!