Site icon Vistara News

Bus Accident: ಪಂಕಜಾ ಮುಂಡೆ ಸೋತರೆ ಸಾಯುತ್ತೇನೆ ಎಂದು ವಿಡಿಯೊ ಮಾಡಿದ್ದ ವ್ಯಕ್ತಿ ಅಪಘಾತದಲ್ಲಿ ಸಾವು!

Bus Accident

ಲಾತೂರ್: ಲೋಕಸಭಾ ಚುನಾವಣೆಯಲ್ಲಿ (lok sabha election) ಮಹಾರಾಷ್ಟ್ರದ (maharastra) ಬೀಡ್ ನಿಂದ ಕಣಕ್ಕೆ ಇಳಿದಿದ್ದ ಬಿಜೆಪಿ (bjp) ನಾಯಕಿ ಪಂಕಜಾ ಮುಂಡೆ (Pankaja Munde) ಅವರು ಸೋತರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಸಾಮಾಜಿಕ ಜಾಲತಾಣದಲ್ಲಿ (social media) ವಿಡಿಯೋ (video) ಅಪ್‌ಲೋಡ್ ಮಾಡಿದ್ದ ವ್ಯಕ್ತಿಯೊಬ್ಬರು ಬಸ್‌ನಡಿ (Bus Accident) ಸಿಲುಕಿ ಮೃತಪಟ್ಟಿದ್ದಾರೆ.

ವಿಡಿಯೋ ಮಾಡಿದ 38 ವರ್ಷದ ಟ್ರಕ್ ಚಾಲಕ ಶುಕ್ರವಾರ ರಾತ್ರಿ ಬಸ್ಸಿನಡಿ ಸಿಲುಕಿ ಮೃತಪಟ್ಟಿದ್ದು, ಇದು ಆತ್ಮಹತ್ಯೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಬೋರ್ಗಾಂವ್ ಪಾಟಿ ಬಳಿಯ ಅಹ್ಮದ್‌ಪುರ- ಅಂಧೋರಿ ರಸ್ತೆಯಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಬಲಿಯಾದವರನ್ನು ಟ್ರಕ್ ಚಾಲಕ ಲಾತೂರ್‌ನ ಅಹ್ಮದ್‌ಪುರದ ಯೆಸ್ಟರ್‌ನ ನಿವಾಸಿ ಸಚಿನ್ ಕೊಂಡಿಬಾ ಮುಂಡೆ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: Farmer Death : ಬ್ಯಾಂಕ್‌ ಅಧಿಕಾರಿಗಳಿಂದ ಮನೆ ಹರಾಜು ನೋಟಿಸ್‌; ವಿದ್ಯುತ್ ಕಂಬಕ್ಕೆ ನೇಣು ಹಾಕಿಕೊಂಡ ರೈತ

ಘಟನೆಗೆ ಸಂಬಂಧಿಸಿ ಬಸ್ ಚಾಲಕನನ್ನು ಬಂಧಿಸಲಾಗಿದ್ದು, ಇದು ಅಪಘಾತವೇ ಅಥವಾ ಆತ್ಮಹತ್ಯೆಯೇ ಎಂದು ತನಿಖೆ ನಡೆಸಲಾಗುತ್ತಿದೆ. ಯಲ್ದರವಾಡಿ ರಾತ್ರಿ ಬಸ್ ನಿಲುಗಡೆ ಮಾಡುತ್ತಿದ್ದಾಗ ಬಸ್ ನ ಹಿಂದೆ ನಿಂತಿದ್ದ ಸಚಿನ್ ಅವರು ಬಸ್ ನ ಚಕ್ರದಡಿ ಬಿದ್ದು ನಜ್ಜುಗುಜ್ಜಾಗಿದ್ದಾರೆ ಎಂದು ಆತನ ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಬಸ್ ಚಾಲಕನನ್ನು ಬಂಧಿಸಲಾಗಿದ್ದು, ಇದು ಅಪಘಾತವೇ ಅಥವಾ ಆತ್ಮಹತ್ಯೆಯೇ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಕಿಂಗಾವ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪತ್ನಿಯನ್ನು ಕೊಂದಿದ್ದ ವ್ಯಕ್ತಿಯ ಬಂಧನ

ಆನೇಕಲ್: ಚಾಕುವಿನಿಂದ ಇರಿದು ಪತ್ನಿಯನ್ನು ಕೊಂದಿದ್ದ ಪತಿಯೊಬ್ಬನನ್ನು ಬಂಧಿಸಲಾಗಿದೆ. ಗಂಗಿರೆಡ್ಡಿ ಬಂಧಿತ ಆರೋಪಿ.
ಮನೆ ಬಾಡಿಗೆ ಹಣ ಪಡೆಯುವ ವಿಚಾರಕ್ಕೆ ನಡೆದ ಗಲಾಟೆಯು ಕೊಲೆಯಲ್ಲಿ ಅಂತ್ಯವಾಗಿತ್ತು. ಬೆಂಗಳೂರಿನ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸೋಂಪುರದಲ್ಲಿ ಕಳೆದ 3ರಂದು ಹತ್ಯೆ ನಡೆದಿತ್ತು.

ಇತ್ತೀಚೆಗೆ ಗಂಗಿರೆಡ್ಡಿ ಬಾಡಿಗೆ ಹಣ ಪಡೆದು ಆ ಹಣದಿಂದ ಕುಡಿದು ಮಜಾ ಮಾಡುತ್ತಿದ್ದ. ಹೀಗಾಗಿ ಸುಜಾತ ಮನೆ ಬಾಡಿಗೆ ಹಣವನ್ನು ಗಂಗಿರೆಡ್ಡಿಗೆ ನೀಡದೆ ತಾನೇ ಪಡೆಯುತ್ತಿದ್ದಳು. ಇತ್ತ ತರಕಾರಿ ಅಂಗಡಿ ಇಟ್ಟುಕೊಂಡಿದ್ದ ಸುಜಾತ ಮೇಲೆ ಗಂಗಿರೆಡ್ಡಿ ಶೀಲ ಶಂಕಿಸಿದ್ದ. ಇಬ್ಬರ ನಡುವೆ ದಿನನಿತ್ಯ ಗಲಾಟೆ ನಡೆಯುತ್ತಿತ್ತು.

ಕಳೆದ 3ರಂದು ಇಬ್ಬರ ನಡುವೆ ಜಗಳ ನಡೆದು ಮನೆಯಲ್ಲಿದ್ದ ಚಾಕುವಿನಿಂದ ಇರಿದು ಸುಜಾತಳನ್ನು ಕೊಂದು ಗಂಗಿರೆಡ್ಡಿ ಪರಾರಿ ಆಗಿದ್ದ. ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಸರ್ಜಾಪುರ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.

Exit mobile version