Site icon Vistara News

Californium Stone: ಪೊಲೀಸರಿಂದ ಭರ್ಜರಿ ಬೇಟೆ; 850 ಕೋಟಿ ರೂ. ಮೌಲ್ಯದ ಅಪರೂಪದ ವಿಕಿರಣಶೀಲ ಹರಳು ವಶ

Californium Stone

ಪಾಟ್ನಾ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 850 ಕೋಟಿ ರೂ. ಮೌಲ್ಯ ಹೊಂದಿರುವ ವಿಕಿರಣಶೀಲ ವಸ್ತು ಅಪರೂಪದ ಕ್ಯಾಲಿಫೋರ್ನಿಯಂ ಹರಳನ್ನು(Californium Stone) ಬಿಹಾರದ ಗೋಪಾಲ್‌ಗಂಜ್‌ ಪೊಲೀಸರು ವಶಕ್ಕೆ ಪಡೆದು ಮೂವರನ್ನು ಬಂಧಿಸಿದ್ದಾರೆ (Crime News).

ಗೋಪಾಲ್‌ಗಂಜ್‌ ಎಸ್‌ಪಿ ಸ್ವರ್ಣ್ ಪ್ರಭಾತ್ ಈ ಅಪರೂಪದ ಹರಳು ವಶಪಡಿಸಿಕೊಂಡಿರುವುದನ್ನು ದೃಢಪಡಿಸಿದ್ದಾರೆ. ಆರೋಪಿಗಳು 50 ಗ್ರಾಂ ತೂಕದ ವಸ್ತುವನ್ನು ಕಳ್ಳ ಸಾಗಣೆ ಮಾಡುತ್ತಿದ್ದರು ಎಂದು ಅವರು ಹೇಳಿದ್ದಾರೆ. “ಜಿಲ್ಲೆಯಲ್ಲಿ ಬೆಲೆಬಾಳುವ ವಸ್ತುವನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎನ್ನುವ ಬಗ್ಗೆ ನಮಗೆ ನಿರ್ದಿಷ್ಟ ಸುಳಿವು ಸಿಕ್ಕಿತು. ಅದರಂತೆ ನಾವು ಜಿಲ್ಲಾ ತನಿಖಾ ಘಟಕ (DIU), ವಿಶೇಷ ಕಾರ್ಯಾಚರಣೆ ಗುಂಪು -7 (SOG -7) ಮತ್ತು ವಿಶೇಷ ಕಾರ್ಯಪಡೆ (STF) ಸೇರಿದಂತೆ ವಿವಿಧ ವಿಶೇಷ ಘಟಕಗಳ ಸದಸ್ಯರನ್ನು ಒಳಗೊಂಡ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿದ್ದೇವೆ. ತಂಡಗಳನ್ನು ಬಿಹಾರ-ಉತ್ತರ ಪ್ರದೇಶ-ಬಾಲ್ತಾರಿ ಗಡಿಯಲ್ಲಿ ನಿಯೋಜಿಸಿದ್ದೇವೆʼʼ ಎಂದು ತಿಳಿಸಿದ್ದಾರೆ.

“ಅಪರಾಧಿಗಳು ಮೋಟಾರ್ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವರನ್ನು ಬಂಧಿಸಲಾಗಿದೆ ಮತ್ತು ಅವರಿಂದ 4 ಮೊಬೈಲ್ ಫೋನ್‌ಗಳು ಮತ್ತು 50 ಗ್ರಾಂ ಕ್ಯಾಲಿಫೋರ್ನಿಯಾ ಕಲ್ಲು ವಶಕ್ಕೆ ಪಡೆಯಲಾಗಿದೆʼʼ ಎಂದು ವಿವರಿಸಿದ್ದಾರೆ. ʼʼಕ್ಯಾಲಿಫೋರ್ನಿಯಂ ಕಲ್ಲು ಎನ್ನುವುದು ಅತ್ಯಂತ ದುಬಾರಿ ವಿಕಿರಣಶೀಲ ವಸ್ತುವಾಗಿದ್ದು, ಪ್ರತಿ ಗ್ರಾಂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 17 ಕೋಟಿ ರೂ.ಗಳ ಮೌಲ್ಯವನ್ನು ಹೊಂದಿದೆ. ಒಟ್ಟು 50 ಗ್ರಾಂ ಕಲ್ಲನ್ನು ವಶಕ್ಕೆ ಪಡೆಯಲಾಗಿದ್ದು, ಇದರ ಒಟ್ಟು ಮೌಲ್ಯವು ಸುಮಾರು 850 ಕೋಟಿ ರೂ.ʼʼ ಎಂದು ಹೇಳಿದ್ದಾರೆ.

ಬಂಧಿತರು

ಈ ಪ್ರಕರಣದ ಬಂಧಿತರನ್ನು ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ತಮ್ಕುಹಿ ರಾಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪರ್ಸೌನಿ ಬುಜುರ್ಗ್ ಗ್ರಾಮದ ನಿವಾಸಿ ಛೋಟೆ ಲಾಲ್ ಪ್ರಸಾದ್ (40), ಗೋಪಾಲ್‌ಗಂಜ್‌ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 22ರ ಕೌಸಲ್ಯ ಚೌಕ್ ನಿವಾಸಿ ಚಂದನ್ ಗುಪ್ತಾ (40) ಮತ್ತು ಗೋಪಾಲ್‌ಗಂಜ್‌ನ ಕುಶಾಹರ್ ಮಥಿಯಾ ನಿವಾಸಿ ಚಂದನ್ ರಾಮ್ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ ಬಂಧಿತರು ಈ ಬೆಲೆಬಾಳುವ ಹರಳನ್ನು ಹಲವು ತೊಂಗಳಿಂದ ಮಾರಾಟ ಮಾಡಲು ಯತ್ನಿಸುತ್ತಿದ್ದರು.

ಕ್ಯಾಲಿಫೋರ್ನಿಯಾ ಕಲ್ಲಿನ ಬಗ್ಗೆ ಹೆಚ್ಚಿನ ವಿವರ ಕಲೆ ಹಾಕಲು ವಿಧಿವಿಜ್ಞಾನ ಪ್ರಯೋಗಾಲಯದಿಂದ ವಿಶೇಷ ತಂಡವನ್ನು ಕರೆಸಲಾಗಿದೆ. ವಸ್ತುವಿನ ನಿರ್ಣಾಯಕ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಸಮಗ್ರ ತನಿಖೆಗಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು ಪರಮಾಣು ಶಕ್ತಿ ಇಲಾಖೆಗೆ (Department of Atomic Energy) ಸೂಚನೆ ನೀಡಿದ್ದಾರೆ. ಇವರಿಗೆ ಇಲ್ಲಿ ಎಲ್ಲಿಂದ ಲಭಿದೆ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತದೆ.

ಇದನ್ನೂ ಓದಿ: ED Raid: ಬೆಂಗಳೂರು, ಧಾರವಾಡದಲ್ಲಿ ಕೆಐಎಡಿಬಿ ಕಚೇರಿಗಳಿಗೆ ಇಡಿ ದಾಳಿ; 26 ಗಂಟೆ ಪರಿಶೀಲಿಸಿದರೂ ಮುಗಿಯದ ಹಗರಣದ ದಾಖಲೆ!

ಪ್ರೇಯಸಿಗಾಗಿ ಕಳ್ಳತನಕ್ಕೆ ಇಳಿದ ಪ್ರಿಯತಮ!

ಬೆಂಗಳೂರು: ಅವರಿಬ್ಬರು ಜೋಡಿ ಆ್ಯಪ್‌ನಲ್ಲಿ ಪರಿಚಯವಾಗಿದ್ದರು. ಪರಿಚಯವು ಪ್ರೀತಿಗೂ ತಿರುಗಿತ್ತು. ಪ್ರೇಯಸಿಗಾಗಿ ಖದೀಮನಾದ ಪ್ರಿಯಕರ ಕಳ್ಳತನ (Theft Case) ಮಾಡಿ ಇದೀಗ ಪೊಲೀಸರಿಗೆ ಲಾಕ್‌ ಆಗಿದ್ದಾನೆ. ಪ್ರಿಯಕರನಿಗೆ ಕಳ್ಳತನದ ಐಡಿಯಾ ಕೊಟ್ಟಿದ್ದ ಪ್ರಿಯತಮೆಯೂ ಜೈಲುಪಾಲಾಗಿದ್ದಾಳೆ. ನಾರಾಯಣಸ್ವಾಮಿ (34) ಹಾಗೂ ನವೀನ (39) ಈ ಇಬ್ಬರು ಖತರ್ನಾಕ್ ಪ್ರೇಮಿಗಳನ್ನು ಬೆಂಗಳೂರಿನ ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.

Exit mobile version