ಪಣಜಿ: ಅತಿ ವೇಗದ ಜತೆಗೆ ಓವರ್ ಟೇಕ್ ಮಾಡಲು ಹೋಗಿ ಪಣಜಿಯ ಝವಾರಿ ನದಿ ಸೇತುವೆಗೆ ಎಸ್‌ಯುವಿ ಕಾರೊಂದು ಡಿಕ್ಕಿ ಹೊಡೆದು (Car accident) ನದಿಗೆ ಬಿದ್ದಿದೆ. ಕಾರನ್ನು ಯುವತಿಯೊಬ್ಬಳು ಚಲಾಯಿಸುತ್ತಿದ್ದಳು ಎಂದು ತಿಳಿದು ಬಂದಿದ್ದು, ಕಾರಿನೊಳಗೆ ನ್ವಾಲರು ಇರುವುದಾಗಿ ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ನಾಪತ್ತೆಯಾದವರ ಬಗ್ಗೆ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರಿಗೆ ಇನ್ನು ಸುಳಿವು ಸಿಕ್ಕಿಲ್ಲ. ಬುಧವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಶೋಧ ಕಾರ್ಯಕ್ಕೆ ಭಾರತೀಯ ಕರಾವಳಿ ಪಡೆ, ನೌಕದಳ, ಅಗ್ನಿಶಾಮಕ ದಳ ಹಾಗೂ ಗೋವಾ ಪೊಲೀಸರು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.
ಝವಾರಿ ನದಿಯಲ್ಲಿ ನೀರಿನ ರಭಸ ಹೆಚ್ಚಿದ್ದು, ಕಾರು ಕೊಚ್ಚಿಕೊಂಡು ಹೋಗಿರಬಹುದು ಎಂಬ ಅನುಮಾನ ಇದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ. ನಾಪತ್ತೆಯಾದವರು ಯಾರೆಂದು ತಿಳಿದು ಬಂದಿಲ್ಲ. ಹೀಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ | Bike Accident | ಮೂರು ಪ್ರತ್ಯೇಕ ಅಪಘಾತ; ಮೂವರು ಸ್ಥಳದಲ್ಲೇ ಸಾವು