Site icon Vistara News

Cheating Case: ಅಮೆರಿಕದ ಮಹಿಳೆಗೆ ದಿಲ್ಲಿಯ ಯುವಕ 3.3 ಕೋಟಿ ರೂ. ಟೋಪಿ ಹಾಕಿದ್ದು ಹೇಗೆ ನೋಡಿ!

Cheating Case

ನವದೆಹಲಿ: ಅಮೆರಿಕದ ಮಹಿಳೆಯೊಬ್ಬರಿಗೆ (US women) ದೆಹಲಿಯ (delhi) ವ್ಯಕ್ತಿಯೊಬ್ಬ ಬರೋಬ್ಬರಿ 4 ಲಕ್ಷ ಡಾಲರ್ ಅಂದರೆ 3.3 ಕೋಟಿ ರೂ.ಯನ್ನು ಹೈಟೆಕ್‌ ತಂತ್ರ ಬಳಸಿ ವಂಚಿಸಿದ (Cheating Case) ಘಟನೆ ಬೆಳಕಿಗೆ ಬಂದಿದೆ. ಲಿಸಾ ರೋತ್‌ ಎಂಬ ಮಹಿಳೆಗೆ ಮೈಕ್ರೋಸಾಫ್ಟ್‌ನ ಏಜೆಂಟ್ (agent of Microsoft) ಎಂದು ಸುಳ್ಳು ಹೇಳಿ, ಅವರಿಗೆ ಹೆಚ್ಚಿನ ಹಣದ ಆಮಿಷವೊಡ್ಡಿ ಪೂರ್ವ ದೆಹಲಿಯ ದಿಲ್ಶಾದ್ ಗಾರ್ಡನ್‌ನಲ್ಲಿ ಬಳಿಯ ನಿವಾಸಿ ಲಕ್ಷ್ಯ ವಿಜ್ ಎಂಬಾತ ವಂಚಿಸಿದ್ದ.

2023ರ ಜುಲೈ 4ರಂದು ಲಿಸಾ ರೋತ್‌ಗೆ ಲಕ್ಷ್ಯ ವಿಜ್ ಕರೆ ಮಾಡಿ ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ಗೆ 4,00,000 ಡಾಲರ್‌ಗಳನ್ನು ವರ್ಗಾಯಿಸಲು ಕೇಳಿದ್ದಾನೆ ಎನ್ನಲಾಗಿದೆ. ಘಟನೆ ನಡೆದು ಒಂದು ವರ್ಷದ ಬಳಿಕ ಜಾರಿ ನಿರ್ದೇಶನಾಲಯವು ದೆಹಲಿ ಮೂಲದ ಬುಕ್ಕಿ ಮತ್ತು ಕ್ರಿಪ್ಟೋಕರೆನ್ಸಿ ಹ್ಯಾಂಡ್ಲರ್ ಅನ್ನು ಲಕ್ಷ್ಯ ವಿಜ್ ನನ್ನು ಬಂಧಿಸಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಗುಜರಾತ್ ಪೊಲೀಸರು ಪೂರ್ವ ದೆಹಲಿಯ ಕ್ರಾಸ್ ರಿವರ್ ಮಾಲ್‌ ನಲ್ಲಿ ಆತನನ್ನು ಬಂಧಿಸಿದಾಗ ಆತನ ಮಾಹಿತಿ ಬಹಿರಂಗವಾಗಿದೆ. ಬಳಿಕ ದೆಹಲಿ ಪೊಲೀಸ್‌ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ ಅವನನ್ನು ಬಿಡುಗಡೆ ಮಾಡಿದ್ದರು ಎನ್ನಲಾಗಿದೆ.

ವಂಚನೆ ಬೆಳಕಿಗೆ ಬಂದಿದ್ದು ಹೇಗೆ?

ರೋತ್ ವರ್ಗಾವಣೆ ಮಾಡಿದ ಹಣ ಪ್ರಫುಲ್ ಗುಪ್ತಾ ಮತ್ತು ಅವರ ತಾಯಿ ಸರಿತಾ ಗುಪ್ತಾ ಅವರ ವ್ಯಾಲೆಟ್‌ಗಳಿಗೆ ಹೋಗಿತ್ತು. ತನಿಖೆಯ ವೇಳೆ ಕರಣ್ ಚುಗ್ ಎಂಬ ವ್ಯಕ್ತಿ ಗುಪ್ತಾ ಅವರಿಂದ ಈ ಹಣವನ್ನು ಪಡೆದು ಬೇರೆ ಬೇರೆ ವ್ಯಾಲೆಟ್‌ಗಳಲ್ಲಿ ಠೇವಣಿ ಇಟ್ಟಿರುವುದು ಪತ್ತೆಯಾಯಿತು. ಇದರ ಅನಂತರ ಕ್ರಿಪ್ಟೋಕರೆನ್ಸಿಯನ್ನು ಮಾರಾಟ ಮಾಡುವ ಮೂಲಕ ಈ ಮೊತ್ತವನ್ನು ವಿವಿಧ ಭಾರತೀಯ ನಕಲಿ ಖಾತೆಗಳಿಗೆ ವರ್ಗಾಯಿಸಲಾಯಿತು. ಕರಣ್ ಮತ್ತು ಲಕ್ಷ್ಯ ಅವರ ಸೂಚನೆ ಮೇರೆಗೆ ಈ ಹಣವನ್ನು ವರ್ಗಾಯಿಸಲಾಯಿತು. ಅನಂತರ ಅವರು ಫೇರ್ ಪ್ಲೇ 24ನಂತಹ ಬೆಟ್ಟಿಂಗ್ ಅಪ್ಲಿಕೇಶನ್‌ಗಳಲ್ಲಿ ಜನರಿಂದ ಪಡೆದ ಹಣವನ್ನು ಬಳಸಿದರು. ತನಿಖಾ ಸಂಸ್ಥೆಯು ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಕಳೆದ ತಿಂಗಳು ಹಲವು ಸ್ಥಳಗಳಲ್ಲಿ ದಾಳಿ ನಡೆಸಿ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದೆ. ಅಪರಾಧದಲ್ಲಿ ಬಳಸಲಾದ ಕ್ರಿಪ್ಟೋ ವ್ಯಾಲೆಟ್‌ಗಳನ್ನು ಹೊಂದಿರುವವರ ಹೇಳಿಕೆಗಳನ್ನು ಸಹ ದಾಖಲಿಸಲಾಗಿದೆ.

ಇದನ್ನೂ ಓದಿ: Bitcoin Scam: ಬಿಟ್‌‌ ಕಾಯಿನ್ ಹಗರಣ; ಆರೋಪಿಗಳಾದ ಶ್ರೀಕಿ, ಖಂಡೇಲ್ ವಾಲಾ ಜೈಲಿನಿಂದ ಬಿಡುಗಡೆ

ತನಿಖೆಯಲ್ಲಿ ಲಕ್ಷ್ಯ ಅವರ ಆದೇಶದ ಮೇರೆಗೆ ಎಲ್ಲಾ ವ್ಯಾಲೆಟ್‌ಗಳಿಗೆ ಹಣ ವರ್ಗಾವಣೆಯಾಗಿದ್ದು, ಈ ವಂಚನೆಯ ಮಾಸ್ಟರ್‌ಮೈಂಡ್‌ ಎಂದು ತಿಳಿದುಬಂದಿದೆ. ಪ್ರಮುಖ ಆರೋಪಿ ಲಕ್ಷ್ಯ ವಿಜ್ ನನ್ನು ದೆಹಲಿಯ ರೂಸ್ ಅವೆನ್ಯೂ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, 5 ದಿನಗಳ ಜಾರಿ ನಿರ್ದೇಶನಾಲಯದ ಬೇಡಿಕೆಯ ಮೇರೆಗೆ ಆತನನ್ನು ಅವರ ವಶಕ್ಕೆ ಒಪ್ಪಿಸಲಾಗಿದೆ.

Exit mobile version