Site icon Vistara News

Child Welfare commission: ಅಕ್ರಮವಾಗಿ ಸಾಗಿಸುತ್ತಿದ್ದ 95 ಮುಸ್ಲಿಂ ಮಕ್ಕಳ ರಕ್ಷಣೆ

ಉತ್ತರಪ್ರದೇಶ: ಬೃಹತ್‌ ಮಾನವ ಕಳ್ಳ ಸಾಗಾಟ(Human trafficking) ದ ಜಾಲವೊಂದು ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಬಿಹಾರದಿಂದ ಉತ್ತರಪ್ರದೇಶಕ್ಕೆ ಸಾಗಾಟವಾಗುತ್ತಿದ್ದ 95ಕ್ಕೂ ಅಧಿಕ ಮಕ್ಕಳನ್ನು ರಕ್ಷಿಸಲಾಗಿದೆ (Children rescued). ಈ ಕುರಿತು ಮಕ್ಕಳ ಹಕ್ಕುಗಳ ಆಯೋಗದ (Child welfare commission) ಅಧ್ಯಕ್ಷ ಸರ್ವೇಶ್‌ ಅವಸ್ಥಿ ಮಾಹಿತಿ ಪ್ರಕಾರ, ಶುಕ್ರವಾರ ಬೆಳಗ್ಗೆ 9 ಗಂಟೆಗೆ ಉತ್ತರಪ್ರದೇಶ ಮಕ್ಕಳ ಹಕ್ಕುಗಳ ಆಯೋಗ ಸದಸ್ಯೆ ಸುಚಿತ್ರಾ ಚತುರ್ವೇದಿ ಕರೆ ಮಾಡಿ, ಬಿಹಾರದಿಂದ ಸಹರಾನ್‌ಪುರಕ್ಕೆ ಮಕ್ಕಳನ್ನು ಅಕ್ರಮವಾಗಿ ಸಾಗಾಟ ಆಗುತ್ತಿದೆ. ಮಕ್ಕಳು ಸದ್ಯ ಗೋರಕ್‌ಪುರದಲ್ಲಿದ್ದು, ಅಯೋಧ್ಯೆ ಮೂಲಕ ಅವರನ್ನು ಬೇರೆಡೆ ಸಾಗಿಸಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು ಎಂದು ತಿಳಿಸಿದರು.

ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಸರ್ವೇಶ್‌ ಅವಸ್ಥಿ ಪೊಲೀಸರ ಸಹಾಯದಿಂದ ಮಕ್ಕಳ ರಕ್ಷಿಸಿದ್ದು, ಅವರಿಗೆ ಆಹಾರ ಮತ್ತು ಔಷಧ ಪೂರೈಕೆ ಮಾಡಿದ್ದಾರೆ. ಇನ್ನು ಈ ಮಕ್ಕಳು 4-12 ವರ್ಷ ವಯೋಮಿತಿಯವರಾಗಿದ್ದು, ಅವರನ್ನು ಕರೆದುಕೊಂಡು ಬಂದವರ ಬಳಿಕ ಮಕ್ಕಳ ಪೋಷಕರ ಒಪ್ಪಿಗೆ ಪತ್ರವಾಗಲೀ, ಇತರೆ ಯಾವುದೇ ದಾಖಲೆಗಳು ಇರಲಿಲ್ಲ. ಅಷ್ಟೇ ಅಲ್ಲದೇ ಮಕ್ಕಳನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ. ಸದ್ಯ ಮಕ್ಕಳ ರಕ್ಷಿಸಲಾಗಿದ್ದು, ಅವರ ಪೋಷಕರನ್ನು ಸಂಪರ್ಕಿಸಿ ಅವರಿಗೆ ಒಪ್ಪಿಸಲಾಗುತ್ತದೆ ಎಂದು ಸರ್ವೇಶ್‌ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಬಿಹಾರದಿಂದ ಮಕ್ಕಳ ಗುಂಪೊಂದನ್ನು ವಿವಿಧ ರಾಜ್ಯಗಳ ಮದರಸಾಗಳಿಗೆ ಕಳುಹಿಸಲಾಗಿತ್ತು. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಗೋರಖ್‌ಪುರದಲ್ಲಿ ಮಕ್ಕಳ ಹಕ್ಕುಗಳ ಆಯೋಗದ ಮಕ್ಕಳನ್ನು ರಕ್ಷಿಸಿತ್ತು. ದೇಶದ ಸಂವಿಧಾನ ಮಕ್ಕಳಿಗೆ ಶಿಕ್ಷಣದ ಹಕ್ಕನ್ನು ನೀಡಿದೆ. ಎಲ್ಲಾ ಮಕ್ಕಳು ಕಡ್ಡಾಯವಾಗಿ ಶಾಲೆಗೆ ಹೋಗಲೇಬೇಕು. ಹೀಗಿರುವಾಗಿ ಮಕ್ಕಳನ್ನು ಕಳ್ಳ ಸಾಗಾಟ ಮಾಡಿ ಮದರಸಾಗಳಿಗೆ ಕೊಂಡೊಯ್ದು ಅಲ್ಲಿ ಅವರ ಹೆಸರಿನಲ್ಲಿ ಸಾವಿರಾರು ರೂಪಾಯಿ ದೇಣಿಗೆ ಪಡೆಯುವುದು ಕಾನೂನು ಬಾಹಿರ ಎಂದು ಸರ್ವೇಶ್‌ ಹೇಳಿದ್ದಾರೆ.

ಇನ್ನು ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ, ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಅವರು X ನಲ್ಲಿ ಪೋಸ್ಟ್‌ನಲ್ಲಿ ಮಕ್ಕಳ ರಕ್ಷಣೆಯ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇಂತಹ ಘಟನೆಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಹಾಗೂ ಘಟನೆಗಳ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಆಯೋಗಕ್ಕೆ ತಿಳಿಸಿವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Jai SriRam Slogan: ಉತ್ತರಪತ್ರಿಕೆಯಲ್ಲಿ `ಜೈ ಶ್ರೀರಾಮ್’ ಬರೆದ ವಿದ್ಯಾರ್ಥಿಗಳು ಪಾಸ್;‌ ಪ್ರಾಧ್ಯಾಪಕರು ವಜಾ!

ರಾಜ್ಯದಲ್ಲೂ ಮಕ್ಕಳನ್ನು ಕದ್ದು ಎಸ್ಕೇಪ್ ಆಗುತ್ತಿದ್ದ ಬಿಹಾರಿ ಗ್ಯಾಂಗ್‌ ಒಂದು ಕೆಲ ದಿನಗಳ ಹಿಂದೆ ಸಿಕ್ಕಿಬಿದ್ದಿತ್ತು. . ಬಿಹಾರದ ಪ್ರಮೀಳಾ ದೇವಿ ಬಲರಾಮ್ ದಂಪತಿ ನೇಪಾಳ ಮೂಲದ ದಂಪತಿಯ ಇಬ್ಬರು ಮಕ್ಕಳನ್ನು ಕದ್ದು ಪರಾರಿಯಾಗಲು ಮುಂದಾಗಿದ್ದರು. ಕೂಲಿ ಕೆಲಸ ಮಾಡುವ ನೇಪಾಳಿ ದಂಪತಿಯ ಇಬ್ಬರು ಮಕ್ಕಳನ್ನು ಕೊಡಿಗೆಹಳ್ಳಿಯಲ್ಲಿ ಕಳ್ಳತನ ಮಾಡಿದ್ದ ಬಿಹಾರಿ ದಂಪತಿ, ಅಲ್ಲಿಂದ ಬಿಹಾರಕ್ಕೆ ತೆರಳಲು ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದರು. ನಂತರ ಕೊಡಿಗೆಹಳ್ಳಿಯಲ್ಲಿ ಕಿಡ್ನ್ಯಾಪ್‌ ಪ್ರಕರಣ ದಾಖಲಾಗಿತ್ತು. ವರ್ಷದ ಬಾಲಕಿ, 8 ತಿಂಗಳ ಮಗುವನ್ನು ಕರೆದೊಯ್ಯುತ್ತಿದ್ದಾಗ ಅನುಮಾನಸ್ಪದವಾಗಿ ಕಂಡ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸರು ಬಿಹಾರಿ ದಂಪತಿಯನ್ನು ವಿಚಾರಿಸಿದ್ದಾರೆ. ಈ ವೇಳೆ ಕಳ್ಳತನದ ಕೃತ್ಯ ಬಯಲಾಗಿತ್ತು.

Exit mobile version