Site icon Vistara News

ಪ್ರಿಯಕರನ ವಿರುದ್ಧ ಸಾಕ್ಷಿ ಹೇಳಲು ಒಪ್ಪದ 8 ತಿಂಗಳ ಗರ್ಭಿಣಿಯನ್ನೇ ಕೊಂದು ನದಿಗೆ ಎಸೆದ ತಂದೆ-ತಾಯಿ!

Physical Abuse

Father of rape victim found hanging from tree days after she died by Suicide In Uttar Pradesh

ಲಖನೌ: ಪ್ರೀತಿಸುತ್ತಿರುವ ಯುವಕನ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು ಒಪ್ಪದ ಕಾರಣ ತಂದೆ-ತಾಯಿಯೇ 19 ವರ್ಷದ ಮಗಳನ್ನು ಕೊಂದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ಪ್ರೀತಿಸಿ, ಓಡಿ ಹೋದಳು ಎಂಬ ಕಾರಣಕ್ಕಾಗಿ ಹಾಗೂ ಯುವಕನ ವಿರುದ್ಧ ಸಾಕ್ಷಿ ಹೇಳಲು ಒಪ್ಪದ ಕಾರಣಕ್ಕಾಗಿ ಗರ್ಭಿಣಿಯನ್ನೇ ಕೊಂದ ಆರೋಪದಲ್ಲಿ ತಂದೆ-ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಮುಜಫ್ಫರ್‌ನಗರದಲ್ಲಿ ಇಂತಹ ಅಮಾನವೀಯ ಘಟನೆ ನಡೆದಿದೆ. 8 ತಿಂಗಳ ತುಂಬು ಗರ್ಭಿಣಿಯಾದ ಮಗಳನ್ನು ಕಳೆದ ಶುಕ್ರವಾರ (ಆಗಸ್ಟ್‌ 25) ರಾತ್ರಿ ಆಕೆಯ ಪೋಷಕರೇ ಕೊಂದಿದ್ದಾರೆ. ತಂದೆ-ತಾಯಿ ಸೇರಿ ಮಗಳ ಕತ್ತು ಹಿಸುಕಿದ್ದಾರೆ. ಮಗಳು ಉಸಿರುಗಟ್ಟಿ ಮೃತಪಟ್ಟ ಬಳಿಕ ಆಕೆಯ ಶವವನ್ನು ಚೀಲದಲ್ಲಿ ಕಟ್ಟಿ ನದಿಗೆ ಎಸೆದಿದ್ದಾರೆ. 19 ವರ್ಷದ ಯುವತಿಯ ಶವವು ನದಿಯಲ್ಲಿ ಪತ್ತೆಯಾಗಿದೆ. ಇದಾದ ಬಳಿಕ ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?

19 ವರ್ಷದ ಯುವತಿಯು ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಮದುವೆಯಾಗುವುದಾಗಿ ತೀರ್ಮಾನಿಸಿದ್ದರು. ಆದರೆ, ಕುಟುಂಬಸ್ಥರ ವಿರೋಧದ ಕಾರಣ ಯುವಕ ಹಾಗೂ ಯುವತಿಯು 2022ರ ಅಕ್ಟೋಬರ್‌ನಲ್ಲಿ ಓಡಿಹೋಗಿದ್ದರು. ಆದರೆ, ಇದೇ ವರ್ಷದ ಡಿಸೆಂಬರ್‌ನಲ್ಲಿ ಪೋಷಕರಿಗೆ ಯುವತಿ ಸಿಕ್ಕಿದ್ದಳು. ಯುವತಿಯ ತಂದೆ-ತಾಯಿಯು ಯುವಕನ ವಿರುದ್ಧ ಕೇಸ್‌ ದಾಖಲಿಸಿದ್ದರು.

ಇದನ್ನೂ ಓದಿ: Murder Case: ಸುಪಾರಿ ಕೊಟ್ಟು ಹೆತ್ತ ಮಗನನ್ನೇ ಕೊಲೆಗೈದ ತಂದೆ; ಸುಣ್ಣದ ಡಬ್ಬಿಯಲ್ಲಿತ್ತು ಹಂತಕನ ನಂಬರ್‌!

ಯುವಕನು ನಮ್ಮ ಮಗಳನ್ನು ಅಪಹರಣ ಮಾಡಿದ್ದಲ್ಲದೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೋಷಕರು ಯುವಕನ ವಿರುದ್ಧ ದೂರು ದಾಖಲಿಸಿದ್ದರು. ಆದರೆ, ನಾವಿಬ್ಬರೂ ಪ್ರೀತಿಸಿಯೇ ಓಡಿ ಹೋಗಿದ್ದು ಎಂದ ಯುವತಿಯು, ಪ್ರಿಯತಮನ ವಿರುದ್ಧ ಕೋರ್ಟ್‌ನಲ್ಲಿ ಸಾಕ್ಷಿ ಹೇಳಲು ನಿರಾಕರಿಸಿದ್ದಳು. ಇದರಿಂದಾಗಿ ಕುಪಿತಗೊಂಡ ತಂದೆ-ತಾಯಿಯು ಮಗಳನ್ನೇ ಕೊಂದಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು ಕೂಡ ಯುವತಿಯ ಪೋಷಕರು ಯುವಕನ ವಿರುದ್ಧ ಕೇಸ್‌ ದಾಖಲಿಸಿದ್ದರು. ಪೊಲೀಸರು ಯುವಕನನ್ನು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.

Exit mobile version