Site icon Vistara News

Crime News: ಪತ್ನಿಯ ರುಂಡ ಕಡಿದು ಕೈಯಲ್ಲೇ ಹಿಡಿದು ಓಡಾಡಿದ!

Three including warden arrested in PSI recruitment scam case

arrest

ಕೋಲ್ಕತ್ತಾ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಲ್ಲದೆ ಆಕೆಯ ತಲೆ ಕಡಿದು ವಿಕೃತಿ ಮೆರೆದಿದ್ದಾನೆ. ಅಷ್ಟಕ್ಕೇ ಸುಮ್ಮನಾಗದ ಆತ ರಕ್ತ ತೊಟ್ಟಿಕ್ಕುವ ಪತ್ನಿಯ ರುಂಡವನ್ನು ಒಂದು ಕೈಯಲ್ಲಿ, ಇನ್ನೊಂದು ಕೈಯಲ್ಲಿ ಕತ್ತಿ ಹಿಡಿದುಕೊಂಡು ರಸ್ತೆಯಲ್ಲಿ ಓಡಾಡಿದ್ದಾನೆ. ಈ ಬೀಭತ್ಸ ಘಟನೆ ಫೆಬ್ರವರಿ 14ರಂದು ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯಲ್ಲಿ ನಡೆದಿದೆ (Crime News).

ಏನಿದು ಘಟನೆ?

ʼʼಪ್ರೇಮಿಗಳ ದಿನವಾದ ಫೆಬ್ರವರಿ 14ರಂದು ಸರಸ್ವತಿ ಪೂಜೆಯನ್ನೂ ಆಯೋಜಿಸಲಾಗಿತ್ತು. ಪುರ್ಬಾ ಮೇದಿನಿಪುರದ ಜನತೆ ಪೂಜೆಯ ಖರೀದಿಯಲ್ಲಿ ನಿರತರಾಗಿದ್ದರು. ಈ ವೇಳೆ ರಕ್ತಸಿಕ್ತನಾಗಿ‌ ಕೊಲೆಗಾರ, 40 ವರ್ಷದ ಗೌತಮ್ ಗುಚೈತ್ ಜನರ ಮಧ್ಯೆ ಕಾಣಿಸಿಕೊಂಡಿದ್ದ. ಕೂಡಲೇ ಸಾರ್ವಜನಿಕರು ಮಾಹಿತಿ ನೀಡಿದ್ದರು. ಸದ್ಯ ಆತನನ್ನು ಬಂಧಿಸಲಾಗಿದೆʼʼ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಭಯಾನಕ ದೃಶ್ಯ ಮೊಬೈಲ್‌ನಲ್ಲಿ ಸೆರೆ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗೌತಮ್ ಗುಚೈತ್ ಪತ್ನಿಯ ಶಿರಚ್ಛೇದ ಮಾಡಿದ್ದ. ನಂತರ ಅವನು ಹತ್ತಿರದ ಬಸ್ ನಿಲ್ದಾಣಕ್ಕೆ ತೆರಳಿ ಕತ್ತರಿಸಿದ ತಲೆಯೊಂದಿಗೆ ಅಲೆದಾಡುತ್ತಿದ್ದ. ಈ ಭಯಾನಕ ದೃಶ್ಯವನ್ನು ಸ್ಥಳೀಯರು ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆ ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯ ಈ ವಿಡಿಯೊ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದ್ದು, ವೈರಲ್‌ ಆಗಿದೆ.

ಮಾಹಿತಿ ತಿಳಿದ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗೌತಮ್ ಗುಚೈತ್‌ನ ಪತ್ನಿ ಫುಲ್ರಾನಿ ಗುಚೈತ್ (35) ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಫುಲ್ರಾನಿ ಪೋಷಕರನ್ನು ಸಹ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ.

ಮಾನಸಿಕ ಅಸ್ವಸ್ಥ

ಪತ್ನಿಯನ್ನು ಕೊಲೆ ಮಾಡಿರುವ ಗೌತಮ್ ಗುಚೈತ್‌ ಕೆಲವು ವರ್ಷಗಳಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂದು ಫುಲ್ರಾನಿ ಗುಚೈತ್ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ʼʼಕೆಲವು ವರ್ಷಗಳ ಹಿಂದೆಯೇ ಆತ ಮಾನಸಿಕ ಸ್ಥಿರತೆ ಕಳೆದುಕೊಂಡಿದ್ದಾನೆ. ಮೂರು ವರ್ಷಗಳ ಹಿಂದೆ ಆತ ಕೋಲ್ಕತ್ತಾದ ಅಲಿಪೋರ್ ಮೃಗಾಲಯದಲ್ಲಿ ಸಿಂಹದ ಬೋನಿಗೆ ಜಿಗಿದಿದ್ದ. ಈ ವೇಳೆ ಗಂಭೀರ ಗಾಯಗೊಂಡಿದ್ದ. 14 ಅಡಿ ಗಡಿ ಗೋಡೆಯನ್ನು ಹತ್ತಿ ಆವರಣದೊಳಗೆ ಹೋಗಲು ಎರಡು ಬಲೆ ಬೇಲಿಗಳನ್ನು ದಾಟಿದ್ದ. ನಂತರ ಅವನು ತನ್ನ ಗುಹೆಯಿಂದ ಹೊರಬಂದ ಸಿಂಹದ ಬಳಿಗೆ ತಲುಪಲು ನೆಲದ ಮೇಲೆ ತೆವಳುತ್ತಾ ತೆರಳಿದ್ದ. ಅಂದು ಹೇಗೋ ಆತನ ಪ್ರಾಣ ಕಾಪಾಡಲಾಗಿತ್ತುʼʼ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Crime News: ಕಾಸಿಲ್ಲದ ಸಿಟ್ಟಿಗೆ ಕೈಲಾಸಪತಿಯ ಮೇಲೆಯೇ ಅಟ್ಯಾಕ್‌!

ಇದೇ ಮಾದರಿಯ ಇನ್ನೊಂದು ಘಟನೆ

ಇದೇ ಮಾದರಿಯ ಇನ್ನೊಂದು ಘಟನೆ ಉತ್ತರ ಪ್ರದೇಶದ ಬಾರಾ ಬಾರಾಬಂಕಿಯಲ್ಲಿ ನಡೆದಿದೆ. ಪತ್ನಿಗೆ ಬೇರೊಬ್ಬ ಪುರುಷನ ಜತೆಗೆ ಅನೈತಿಕ ಸಂಬಂಧ ಇರುವುದನ್ನು ಗಮನಿಸಿದ ಪತಿ ಆಕೆಯನ್ನು ಕೊಲೆ ಮಾಡಿದ್ದ. ಬಳಿಕ ಆಕೆಯ ರುಂಡವನ್ನು ಕೈಯಲ್ಲಿ ಹಿಡಿದು ರಸ್ತೆಯಲ್ಲಿ ಓಡಾಡಿದ್ದ. ಆತನನ್ನು ಕುಮಾರ್ ಕನೌಜಿಯಾ ಎಂದು ಗುರುತಿಸಲಾಗಿದ್ದು ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಆತನ ಪತ್ನಿ ವಂದನಾ ಕೊಲೆಯಾದಾಕೆ. ಎಂಟು ವರ್ಷದ ಹಿಂದೆ ಮದುವೆಯಾದ ಇವರಿಗೆ ನಾಲ್ಕು ವರ್ಷದ ಮಗನಿದ್ದಾನೆ. ಕುಮಾರ್ ಕನೌಜಿಯಾ ಕೃತ್ಯವೂ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version