ಮುಂಬೈ: ಡೀಪ್‌ಫೇಕ್ ತಂತ್ರಜ್ಞಾನದ (Deep fake Technology) ದುರ್ಬಳಕೆ ಎಂದರೆ ಇದುವರೆಗೆ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್, ಸಚಿನ್ ತೆಂಡೂಲ್ಕರ್ ಅವರಂತಹ ಸೆಲೆಬ್ರಿಟಿಗಳು, ನಟಿಯರ ತಿರುಚಿದ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ಎಂದಾಗಿತ್ತು. ಆದರೆ, ಡೀಪ್‌ಫೇಕ್ ತಂತ್ರಜ್ಞಾನದ ಕಾವು (Deep fake Scam) ಇದೀ ಉದ್ಯಮ ಮುಖೇಶ್ ಅಂಬಾನಿ(Mukhesh Ambani)ಗೂ ತಟ್ಟಿದೆ. ಮುಖೇಶ್ ಅಂಬಾನಿಯವರ ಡೀಪ್ ಫೇಕ್ ವಿಡಿಯೋ ಬಳಸಿಕೊಂಡು ವಂಚಕರು ಮುಂಬೈ ಮೂಲದ ವೈದ್ಯರೊಬ್ಬರಿಗೆ 7 ಲಕ್ಷ ರೂ. ವಂಚಿಸಿರುವ ಘಟನೆ ವರದಿಯಾಗಿದೆ.
ಮುಂಬೈಯ ಅಂಧೇರಿಯಲ್ಲಿ ಈ ಘಟನೆ ನಡೆದಿದ್ದು, 54 ವರ್ಷದ ಆಯುರ್ವೇದ ವೈದ್ಯ ಕೆ.ಹೆಚ್ ಪಾಟೀಲ್ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ನೋಡಿ ವಂಚನೆಗೊಳಗಾಗಿದ್ದಾರೆ. ಡಾ ಪಾಟೀಲ್ ಆರಂಭದಲ್ಲಿ ಏಪ್ರಿಲ್ 15 ರಂದು ತನ್ನ Instagram ಫೀಡ್ ಮೂಲಕ ಸ್ಕ್ರಾಲ್ ಮಾಡುವಾಗ ಡೀಪ್‌ಫೇಕ್ ವೀಡಿಯೊವನ್ನು ನೋಡಿದರು. ರಾಜೀವ್ ಶರ್ಮಾ ಟ್ರೇಡ್ ಗ್ರೂಪ್ ಎಂಬ ಹೆಸರಿನ ಟ್ರೇಡಿಂಗ್ ಅಕಾಡೆಮಿಯ ಯಶಸ್ಸನ್ನು ಅಂಬಾನಿ ಪ್ರಚಾರ ಮಾಡುತ್ತಿರುವುದನ್ನು ಮತ್ತು ಹೂಡಿಕೆಯ ಮೇಲೆ ಹೆಚ್ಚಿನ ಲಾಭಕ್ಕಾಗಿ ಬಿಸಿಎಫ್ ಅಕಾಡೆಮಿಗೆ ಸೇರುವಂತೆ ಜನರನ್ನು ಪ್ರೇರೇಪಿಸುತ್ತಿರುವ ವೀಡಿಯೊದಲ್ಲಿ ಚಿತ್ರಿಸಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ವಿಡಿಯೋವನ್ನು ನಿಜವೆಂದೇ ನಂಬಿದ ಡಾ ಪಾಟೀಲ್ ಅಕಾಡೆಮಿಯನ್ನು ಆನ್‌ಲೈನ್‌ನಲ್ಲಿ ಸಂಪರ್ಕಿಸಿ ಮೇ ಮತ್ತು ಜೂನ್ ನಡುವೆ ಒಟ್ಟು 7.1 ಲಕ್ಷ ರೂ. ಹೂಡಿಕೆ ಮಾಡಿದ್ದರು. ಅದು ತ್ವರಿತವಾಗಿ 30 ಲಕ್ಷ ರೂಪಾಯಿಗಳ ಲಾಭವನ್ನು ತೋರಿಸಿತು. ಅದನ್ನು ವಿಥ್ ಡ್ರಾ ಮಾಡಿಕೊಳ್ಳುವಾಗ ಪದೇ ಪದೇ ಫೈಲ್ಡ್ ಬರುತ್ತಿತ್ತು. ತಕ್ಷಣ ಆಕೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ ಇದೊಂದು ಡೀಪ್ ಫೇಕ್ ವಿಡಿಯೋ ಎಂಬುದು ಬಯಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ಡೀಪ್‌ಫೇಕ್ ತಂತ್ರಜ್ಞಾನದ (Deepfake Technology) ದುರ್ಬಳಕೆ ಎಂದರೆ ಇದುವರೆಗೆ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್, ಸಚಿನ್ ತೆಂಡೂಲ್ಕರ್ ಅವರಂತಹ ಸೆಲೆಬ್ರಿಟಿಗಳು, ನಟಿಯರ ತಿರುಚಿದ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದು ಎಂದಾಗಿತ್ತು. ಆದರೆ, ಡೀಪ್‌ಫೇಕ್ ತಂತ್ರಜ್ಞಾನವನ್ನೀಗ ನೂರಾರು ಕೋಟಿ ರೂ. ವಂಚಿಸುವ (Deepfake Scam) ಮಟ್ಟಿಗೆ ದುಷ್ಕರ್ಮಿಗಳು ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಹಾಂಕಾಂಗ್‌ನಲ್ಲಿ (Hong Kong) ಬಹುರಾಷ್ಟ್ರೀಯ ಕಂಪನಿಯೊಂದಕ್ಕೆ ಡೀಪ್‌ಫೇಕ್ ಮೂಲಕವೇ ಸುಮಾರು 207 ಕೋಟಿ ರೂ. (25 ದಶಲಕ್ಷ ಡಾಲರ್) ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಹಾಗೆಯೇ, ಇದು ಜಗತ್ತಿನ ಅತಿದೊಡ್ಡ ಡೀಪ್‌ಫೇಕ್ ವಂಚನೆ (Deepfake Fraud) ಎಂದು ಹೇಳಲಾಗುತ್ತಿದೆ.
ಹಾಂಕಾಂಗ್ ಮೂಲದ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿಯೊಬ್ಬರಿಗೆ ಡೀಪ್‌ಫೇಕ್ ಮೂಲಕ ವಂಚಿಸಿದ ದುಷ್ಕರ್ಮಿಗಳು, ಸುಮಾರು 207 ಕೋಟಿ ರೂಪಾಯಿಯನ್ನು ವಂಚಿಸಿದ್ದಾರೆ. ನೂರಾರು ಕೋಟಿ ರೂ. ವಂಚನೆ ಪ್ರಕರಣ ವಿಶ್ವಾದ್ಯಂತ ಸುದ್ದಿಯಾದರೂ ಇದುವರೆಗೆ ಡೀಪ್‌ಫೇಕ್ ತಂತ್ರಜ್ಞಾನದ ಮೂಲಕ ವಂಚಿಸಿದ ದುರುಳರ ಕುರಿತು ಪೊಲೀಸರಿಗೆ ಸ್ವಲ್ಪವೂ ಮಾಹಿತಿ ಲಭ್ಯವಾಗಿಲ್ಲ. ಇದುವರೆಗೆ ಒಬ್ಬನನ್ನೂ ಬಂಧಿಸಲು ಸಾಧ್ಯವಾಗಿಲ್ಲ ಎಂಬುದು ಅಚ್ಚರಿಯ ಸಂಗತಿಯಾಗಿದೆ. ಕಳೆದ ಜನವರಿಯಲ್ಲಿಯೇ ಹಗರಣ ಬೆಳಕಿಗೆ ಬಂದರೂ ಇದುವರೆಗೆ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ.
ಇದನ್ನೂ ಓದಿ:Actor Darshan: ʻಡೆವಿಲ್ ಗ್ಯಾಂಗ್ʼಗೆ ಜೀವಾವಧಿ ಶಿಕ್ಷೆ ಆಗತ್ತಾ? ಕಾನೂನು ತಜ್ಞರು ಹೇಳೋದೇನು?