Site icon Vistara News

Dog Attack: ವೃದ್ಧ ತಾಯಿಯನ್ನು ಮನೆಯ ಹೊರಗೆ ಮಲಗಿಸಿದ್ದ ಪುತ್ರರು; ಜೀವಂತವಾಗಿ ತಿಂದು ಹಾಕಿದ ಬೀದಿ ನಾಯಿಗಳು!

Dog attack

ದೀರ್ಘಕಾಲದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ವೃದ್ಧೆಯ ಮೇಲೆ ರಾತ್ರಿ ಬೀದಿ ನಾಯಿಗಳು (street dog) ದಾಳಿ (Dog Attack) ನಡೆಸಿ ಕೊಂದು ಹಾಕಿರುವ ಘಟನೆ ತೆಲಂಗಾಣದ (telangana) ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ಕರೀಂನಗರದಲ್ಲಿ ನಡೆದಿದೆ. 82 ವರ್ಷದ ಪಿಟ್ಲಾ ರಾಜ್ಯಲಕ್ಷ್ಮಿ ಬುಧವಾರ ರಾತ್ರಿ ಗುಡಿಸಿಲಿನಲ್ಲಿ ಮಲಗಿದ್ದ ವೇಳೆ ಬೀದಿ ನಾಯಿಗಳು ದಾಳಿ ನಡೆಸಿದ್ದವು ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮುಸ್ತಾಬಾದ್ ಮಂಡಲದ ಕೇಂದ್ರ ಕಚೇರಿಯ ಸೇವಾಲಾಲ್ ತಾಂಡಾ ಪ್ರದೇಶದಲ್ಲಿನ ಗುಡಿಸಲಿನಲ್ಲಿ ರಾಜ್ಯಲಕ್ಷ್ಮಿ ಮಲಗಿದ್ದರು. ದೀರ್ಘಕಾಲದಿಂದ ಅವರು ಹಾಸಿಗೆ ಹಿಡಿದಿದ್ದರು. ಬೀದಿ ನಾಯಿಗಳ ಗುಂಪೊಂದು ಗುಡಿಸಲಿನೊಳಗೆ ನುಗ್ಗಿ ಅವರ ಮೇಲೆ ದಾಳಿ ಮಾಡಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಖಿಲ್ ಮಹಾಜನ್ ಹೇಳಿದ್ದಾರೆ.

ನಾಯಿಗಳು ಅವರನ್ನು ಕಚ್ಚಿ ಕೊಂದು ಮುಖ ಮತ್ತು ದೇಹದ ಕೆಲವು ಭಾಗಗಳನ್ನು ತಿಂದು ಹಾಕಿವೆ. ಸಮೀಪದಲ್ಲೇ ವಾಸಿಸುವ ಮಹಿಳೆಯ ಕುಟುಂಬ ಸದಸ್ಯರು ಗುರುವಾರ ಬೆಳಗ್ಗೆ ಆಕೆಯ ಶವವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಗ್ರಾಮಸ್ಥರ ಪ್ರಕಾರ, ರಾಜ್ಯಲಕ್ಷ್ಮಿ ಬುಧವಾರ ರಾತ್ರಿ ಮನೆ ಸಮೀಪದ ಗುಡಿಸಲಿನಲ್ಲಿ ಮಲಗಿದ್ದರು. ಯಾವುದೇ ಬಾಗಿಲು ಇಲ್ಲದ ಕಾರಣ ಗಾಢ ನಿದ್ದೆಯಲ್ಲಿದ್ದ ಅವರ ಮೇಲೆ ನಾಯಿಗಳು ಸುಲಭವಾಗಿ ದಾಳಿ ನಡೆಸಿವೆ. ನಾಯಿಗಳು ಅವರ ತಲೆ ಮತ್ತು ಹೊಟ್ಟೆಯ ಭಾಗವನ್ನು ತಿಂದು ಹಾಕಿವೆ ಎಂದು ತಿಳಿಸಿದ್ದಾರೆ.

ಸಂತ್ರಸ್ತೆಯ ಮನೆಯ ಬಳಿ ನಾಯಿಯು ರಸ್ತೆಯಲ್ಲಿ ಮಾಂಸವನ್ನು ವಾಂತಿ ಮಾಡುವುದನ್ನು ಕಂಡ ಸ್ಥಳೀಯರು ಕೋಪಗೊಂಡು ಬೀದಿ ನಾಯಿಯನ್ನು ಕೊಂದು ಹಾಕಿದ್ದರು.

ಇದನ್ನೂ ಓದಿ: Woman Deliver Baby in Auto: ಆಸ್ಪತ್ರೆಗೆ ಹೋಗುವಾಗ ಆಟೋದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಲಕ್ಷ್ಮಿ ಕಳೆದ ನಾಲ್ಕು ವರ್ಷಗಳಿಂದ ಹಾಸಿಗೆ ಹಿಡಿದಿದ್ದು, ಇಬ್ಬರು ಪುತ್ರರಿದ್ದರೂ ತಾಯಿಯನ್ನು ತಮ್ಮ ಮನೆಯ ಹೊರಗೆ ಪ್ರತ್ಯೇಕ ಕೋಣೆಯಲ್ಲಿ ಇರಿಸಿದ್ದರು ಎಂದು ಮುಸ್ತಾಬಾದ್ ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಪುತ್ರನ ದೂರಿನ ಮೇರೆಗೆ ಬಿಎನ್‌ಎಸ್‌ನ ಸೆಕ್ಷನ್ 194ರ ಅಡಿಯಲ್ಲಿ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version