ವಿಜಯಪುರ: ಜುಗಾರಿ ಆಡುತ್ತಿರುವಾಗ ಪೊಲೀಸರು (Police Attack) ದಾಳಿ ಮಾಡಿದ್ದರಿಂದ ಭಯಭೀತರಾಗಿ ಎಸ್ಕೇಪ್ ಆಗಲು ತೆಪ್ಪ ಏರಿ ಪಲಾಯನ ಮಾಡಿದ ಎಂಟು ಮಂದಿ ಕೃಷ್ಣಾ ನದಿಯಲ್ಲಿ (Krishna River) ತೆಪ್ಪ ಮಗುಚಿಕೊಂಡು (Drowned) ನೀರುಪಾಲಾಗಿದ್ದಾರೆ. ಇವರಲ್ಲಿ ಒಬ್ಬನ ಶವ ದೊರೆತಿದೆ. ಇಬ್ಬರನ್ನು ರಕ್ಷಿಸಲಾಗಿದ್ದು, ಇನ್ನೂ ಐದು ಮಂದಿಗಾಗಿ ಶೋಧ ನಡೆದಿದೆ.
ಆಲಮಟ್ಟಿ ಜಲಾಶಯದ ಕೊಲ್ಹಾರ ಬಳಿಯ ಕೃಷ್ಣಾ ನದಿ ಹಿನ್ನೀರು ಪ್ರದೇಶದ ಬಳೂತಿ ಗ್ರಾಮದ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪುಂಡಲೀಕ ಯಂಕಂಚಿ (35) ಸಾವಿಗೀಡಾದ ವ್ಯಕ್ತಿ.
ನಿನ್ನೆ ಸಂಜೆ ಇವರು ಜೂಜಾಟ ಆಡುತ್ತಿವಾಗ ಕೊಲ್ಹಾರ ಪೊಲೀಸರಿಗೆ ಮಾಹಿತಿ ಬಂದಿತ್ತು. ಪೊಲೀಸರು ದಾಳಿ ನಡೆಸಿದ್ದು ನೋಡಿ ಆರೋಪಿಗಳು ತರಾತುರಿಯಿಂದ ತೆಪ್ಪದ ಮೂಲಕ ಎಸ್ಕೇಪ್ ಆಗಲು ಯತ್ನಿಸಿದ್ದರು. ಗಾಳಿ ವ್ಯತಿರಿಕ್ತವಾಗಿದ್ದುದರಿಂದ ಹಾಗೂ ತೆಪ್ಪದಲ್ಲಿ ಮಿತಿ ಮೀರಿದ ಜನ ತುಂಬಿದ್ದರಿಂದ ತೆಪ್ಪ ನದಿಯೊಳಗೆ ಮುಗುಚಿಕೊಂಡಿದೆ. ಕಾಪಾಡಿ ಕಾಪಾಡಿ ಎಂದು ಕೂಗಿದಾಗ ಸುತ್ತಲಿನ ಜಮೀನಿನಲ್ಲಿದ್ದವರು ಹಾಗೂ ಮೀನುಗಾರರು ಧಾವಿಸಿ ಬಂದಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಇಬ್ಬರನ್ನು ಕಾಪಾಡಲಾಯಿತು. ಒಬ್ಬನ ಶವ ಸಿಕ್ಕಿದೆ. ರಕ್ಷಣೆಯಾದ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ರಾತ್ರಿಯಾದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 6 ಗಂಟೆಯಿಂದ ರಕ್ಷಣಾ ಕಾರ್ಯಾಚರಣೆ ಮರು ಆರಂಭಿಸಲಾಯಿತು. ಕಲಬುರ್ಗಿಯಿಂದ ಎಸ್‌ಡಿಆರ್‌ಎಫ್ ತಂಡ, ಅಗ್ನಿಶಾಮಕ ದಳ ಸಿಬ್ಬಂದಿ ಬಂದು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಸ್ಥಳಕ್ಕೆ ವಿಜಯಪುರ ಎಸ್ಪಿ ಋಷಿಕೇಶ್ ಸೋನಾವಣೆ, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸದ್ಯ ನದಿಯಲ್ಲಿ ಮುಳುಗಿರಬಹುದಾದ ಐವರಿಗಾಗಿ ಶೋಧ ನಡೆಯುತ್ತಿದೆ. ಇವರಲ್ಲಿ ಕೆಲವರು ಈಜಿ ಆಚೆ ದಡ ಸೇರಿರಲೂಬಹುದು ಎಂದು ತರ್ಕಿಸಲಾಗಿದೆ.
ಅಗ್ನಿಶಾಮಕ ಸಿಬ್ಬಂದಿ ನಾಲ್ಕು ಬೋಟ್ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದು, ಸ್ಥಳೀಯ ಮೀನುಗಾರರು ಸಹ ಪಾಲ್ಗೊಂಡಿದ್ದಾರೆ. ಎಸ್ಪಿ ಋಷಿಕೇಶ ಸೋನಾವಣೆ ಸ್ಥಳದಲ್ಲಿಯೇ ಬೀಡುಬಿಟ್ಟಿದ್ದಾರೆ.
ಮಗನ ಕುಡಿತದ ಚಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಅಪ್ಪ, ಅಮ್ಮ
ಬೆಂಗಳೂರು: ಮಗನ ಕುಡಿತದಿಂದ ಉಂಟಾಗಿರುವ ಕೌಟುಂಬಿಕ ಸಮಸ್ಯೆಗಳಿಂದ ಬೇಸತ್ತು ಹಿರಿಯ ವಯಸ್ಸಿನ ಪೋಷಕರು ಆತ್ಮಹತ್ಯೆ (Suicide News ) ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಘಟನೆ ನಡೆದಿದೆ. ಚಂದ್ರಶೇಖರ್ (54) ಹಾಗೂ ಶಾರದಮ್ಮ ಆತ್ಮಹತ್ಯೆ ಮಾಡಿಕೊಂಡ ದಂಪತಿ.
ಮಗ ಪ್ರಶಾಂತನಿಗೆ ವರ್ಷಗಳ ಹಿಂದೆ ಮದುವೆ ಮಾಡಿದ್ದರು. ಆದರೆ ಮಗ ಕುಡಿತದಿಂದ ಮನೆ ಬರೋದು ಕಡಿಮೆ ಮಾಡಿದ್ದ, ಇದರಿಂದ ನೊಂದು ಕಳೆದ ಮೂರು ತಿಂಗಳ ಹಿಂದೆ ಪ್ರಶಾಂತನ ಹೆಂಡತಿ ಮನೆ ಬಿಟ್ಟು ತವರು ಮನೆ ಸೇರಿದ್ದರು. ಇದರಿಂದ ಮಗನ ಬಾಳು ಹೀಗಾಯಿತು ಎಂದು ನೊಂದು ಕೊಂಡಿದ್ದರು.
ಸೋಮವಾ ಎರಡನೇ ಮಗನನ್ನ ಅಂಗಡಿ ಕಳಿಸಿ ದಂಪತಿ ನೇಣಿಗೆ ಶರಣಾಗಿದ್ದರು. ಮಗ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡವರು ಹೊಸಕೋಟೆ ಮೂಲದವರು. ಅವರು ಹಲವು ವರ್ಷಗಳಿಂದ ಹಳೆ ಬೈಯಪ್ಪನಹಳ್ಳಿ ಯಲ್ಲಿ ವಾಸ ಮಾಡಿಕೊಂಡಿದ್ದರು. ಬೆಂಗಳೂರಿನಲ್ಲೊ ಕೂಲಿ ಕೆಲಸ ಮಾಡಿಕೊಂಡಿದ್ದರು. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Hemant Nimbalkar: ವಾರ್ತಾ ಇಲಾಖೆ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಮರು ನೇಮಕ