Site icon Vistara News

Drug | ಮಾದಕ ವಸ್ತು ಮಾರುತ್ತಿದ್ದವರ ಬಂಧನ

Drug Peddlers

ಬೆಂಗಳೂರು: ಬೆ೦ಗಳೂರಿನ ಜೀವನ್‌ ಬಿಮಾ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಕಾಲೇಜೊಂದರ ಬಳಿ ಗಾಂಜಾ ಮತ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ Drug Peddler ಗಳನ್ನು ಪೊಲೀಸರು ಬಂಧಿಸಿದ್ದಾರೆ. ಒಂದು ಕಾಲೇಜಿನ ಆಟದ ಮೈದಾನದ ಬಳಿ ವಿದ್ಯಾರ್ಥಿಗೆ ಮಾದಕಸ್ತುಗಳನ್ನು ಮಾರಾಟ ಮಾಡುತ್ತಿದ್ದರು.

ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾರುತ್ತಿದ್ದರು. ಬೆಂಗಳೂರು ನಗರದ ಸಿಸಿಬಿ ಘಟಕದ ಮಾದಕ ವಸ್ತು ನಿಗ್ರಹ ದಳದ ಸಿಬ್ಬಂದಿ ಕೃಯಾಚರಣೆ ನಡೆಸಿದೆ. ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಸುಮಾರು 2 ಲಕ್ಷ ಮೌಲ್ಯದ ನಿಷೇದಿತ ಮನೋಪರಿಣಾಮಕ ಮಾದಕವಸ್ತುವಾದ ಎಂಡಿಎಂಎ ಕ್ರಿಸ್ಟಲ್‌ ಹಾಗೂ 1 ಕೆ.ಜಿ.ಯಷ್ಟು ತಲಾ 100 ಗ್ರಾಂ ತೂಕದ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.

ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ ಹಾಗೂ ತಲೆಮರೆಸಿಕೊಂಡ ಆರೋಪಿಯ ಶೋಧನೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Drug peddler ಬಂಧನ! ₹20 ಲಕ್ಷ ಮೌಲ್ಯದ ಡ್ರಗ್ಸ್‌ ವಶ

Exit mobile version