ಬೆಂಗಳೂರು: ಉತ್ತರ ಪ್ರದೇಶದ ಬರೇಲಿಯಲ್ಲಿ ಹಿಂದು ವಿದ್ಯಾರ್ಥಿನಿಯನ್ನು ಬೆದರಿಸಿ ಇಸ್ಲಾಂಗೆ ಮತಾಂತರಗೊಳಿಸಲು ಮುಂದಾದ ಆಘಾತಕಾರಿ ಘಟನೆ ನಡೆದಿದೆ. ಮತಾಂತರಗೊಂಡು ಮದುವೆಯಾಗುವಂತೆ ಫೈಜಲ್ ಮತ್ತು ಅಮೀನ್ ಅವರಿಂದ ಬೆದರಿಕೆಗಳು ಬರುತ್ತಿವೆ ಎಂದು ವಿದ್ಯಾರ್ಥಿನಿ ತಿಳಿಸಿದ್ದಾಳೆ. ಆರೋಪಿಗಳು ಎಐ ತಂತ್ರಜ್ಞಾನ (AI tool) ಬಳಸಿಕೊಂಡು ವಿದ್ಯಾರ್ಥಿನಿಯ ಅಶ್ಲೀಲ ವಿಡಿಯೊವನ್ನು ರಚಿಸಿದ್ದು, ಇದನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಒಡ್ಡಿ ಮತಾಂತರ ನಡೆಸಲು ಯತ್ನಿಸುತ್ತಿದ್ದಾರೆ. ಈ ಸಂಬಂಧ ಮೇ 20ರಂದು ಸಂತ್ರಸ್ತೆಯ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ (Cyber Crime).
ಬರೇಲಿಯ ಭೋಜಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ತನ್ನ ಮಗಳು ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದಾಳೆ ಎಂದು ಆಕೆಯ ತಂದೆ ತಿಳಿಸಿದ್ದಾರೆ. ʼʼಮೇ 7ರಂದು ಫೈಜಲ್ ಮಗಳ ವಾಟ್ಸ್‌ಆ್ಯಪ್ ನಂಬರ್‌ಗೆ ʼಹಾಯ್ʼ ಎನ್ನುವ ಸಂದೇಶ ಕಳುಹಿಸಿದ್ದ. ಅಪರಿಚಿತ ನಂಬರ್ ಆಗಿರುವುದರಿಂದ ಮಗಳು ಇದಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಆತ ಕರೆ ಮಾಡಿ ಬಲವಂತವಾಗಿ ಮಾತನಾಡಲು ಪ್ರಯತ್ನಿಸಿದ್ದ. ಈ ವೇಳೆ ಫೈಜಲ್ ತಾನು ಆಕೆಯನ್ನು ಇಷ್ಟಪಡುವುದಾಗಿ ಹೇಳಿದ್ದ. ಜತೆಗೆ ಇಸ್ಲಾಂಗೆ ಮತಾಂತರವಾಗು. ಆಗ ನಾನು ಯಾವಾಗಲೂ ನಿನ್ನನ್ನು ಸಂತೋಷವಾಗಿರಿಸುತ್ತೇನೆ ಎಂದು ಹೇಳಿದ್ದʼʼ ಎನ್ನುವುದು ಸಂತ್ರಸ್ತೆಯ ತಂದೆ ನೀಡಿದ ವಿವರಣೆ.
#बरेली के थाना भोजीपुरा क्षेत्र में मुस्लिम युवक ने हिदू छात्रा को धर्म परिवर्तन करने के लिए किया मजबूर।छात्रा के व्हाट्सएप पर भेजी अश्लील वीडियो और छात्रा के फोटो को एडिट करके अश्लील बनाकर वायरल करने की धमकी।@igrangebareilly @bareillypolice @Uppolice https://t.co/qHknPKFF2Z
— हिमांशु पटेल (@himanshupatelrs) May 21, 2024
ʼʼಇದನ್ನು ಕೇಳಿದ ನಂತರ ಮಗಳು ಯಾವುದೇ ಪ್ರತಿಕ್ರಿಯೆ ನೀಡದೆ ಫೋನ್ ಸಂಪರ್ಕ ಕಡಿತಗೊಳಿಸಿದ್ದಳು. ಮೇ 19ರಂದು ಮತ್ತೆ ಆಕೆಗೆ ಅದೇ ಸಂಖ್ಯೆಯಿಂದ ಮತ್ತೊಮ್ಮೆ ಮೆಸೇಜ್ ಬಂದಿದೆ. ಆಕೆ ಯಾರೆಂದು ಕೇಳಿದಾಗ ವಿಡಿಯೊ ಫೈಜಲ್ ಕರೆ ಮಾಡಲು ಆರಂಭಿಸಿದ್ದ. ಆಕೆ ರಿಸೀವ್ ಮಾಡದೇ ಇದ್ದಾಗ ಅಶ್ಲೀಲ ಸಂದೇಶಗಳು ಮತ್ತು ಅಶ್ಲೀಲ ವಿಡಿಯೊಗಳನ್ನು ಕಳುಹಿಸಿದ್ದ. ಇದಕ್ಕೆ ಆಕ್ಷೇಪ ಸಲ್ಲಿಸಿದಾಗ ಆತ ಮನೆಗೆ ಬಂದು ಅಪಹರಿಸುವುದಾಗಿ ಬೆದರಿಕೆ ಹಾಕಿದ್ದ. ಮಾತ್ರವಲ್ಲ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿಯೂ ಹೆದರಿಸಿದ್ದʼʼ ಎಂದು ವಿದ್ಯಾರ್ಥಿನಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ.
ಜತೆಗೆ ಫೈಜಲ್, ಮತಾಂತರಗೊಳ್ಳಲಿದಿದ್ದರೆ ಎಐ ತಂತ್ರಜ್ಞಾನ ಬಳಿಸಿ ಯುವತಿಯ ಅಶ್ಲೀಲ ಫೋಟೊ, ವಿಡಿಯೊ ರಚಿಸುವುದಾಗಿಯೂ ಬೆದರಿಕೆ ಹಾಕಿದ್ದಾನೆ. ಇದು ಹೊರ ಬಂದರೆ ಮತ್ತೆ ಆಕೆಗೆ ತಲೆ ಎತ್ತು ನಡೆಯಲೂ ಸಾಧ್ಯವಿಲ್ಲ ಎಂದು ಹೇಳಿದ್ದಾಗಿ ದೂರಿನಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: Attempting to Convert: ಯೋಗಿ ನಾಡಿನಲ್ಲಿ ಮತಾಂತರಕ್ಕೆ ಯತ್ನ; ಪಾದ್ರಿ ಸೇರಿ 10 ಮಂದಿಯ ಬಂಧನ
ಇದಾದ ಬಳಿಕ ಸಂತ್ರಸ್ತೆ ತಮ್ಮ ಮನೆಯವರಿಗೆ ವಿಷಯ ತಿಳಿಸಿದ್ದಳು. ತನಿಖೆ ನಡೆಸಿದಾಗ ಬೆದರಿಕೆಯ ಕರೆ ಬಂದ ಫೋನ್ ನಂಬರ್ ಬರೇಲಿಯ ಭೋಜಿಪುರ ಪೊಲೀಸ್ ಠಾಣೆ ಪ್ರದೇಶದಲ್ಲಿ ವಾಸಿಸುವ ಫೈಜಲ್‌ನದ್ದು ಎಂದು ತಿಳಿದು ಬಂತು. ಹೆಚ್ಚಿನ ವಿಚಾರಣೆ ವೇಳೆ ಪ್ರಕರಣದಲ್ಲಿ ಫೈಜಲ್‌ನ ತಂದೆ ಅಮೀನ್‌ನ ಕೈವಾಡ ಇರುವುದು ಕೂಡ ಕಂಡುಬಂತು. ಇಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತೆಯ ತಂದೆ ಆಗ್ರಹಿಸಿದ್ದಾರೆ.