Site icon Vistara News

Virat Kohli: ವಿರಾಟ್‌ ಕೊಹ್ಲಿ ಮಾಲಿಕತ್ವದ ಪಬ್‌ ಮೇಲೆ ಎಫ್‌ಐಆರ್, ಅಲ್ಲೇನು ನಡೆದಿತ್ತು?

virat kohli one8 commune pub

ಬೆಂಗಳೂರು: ಅವಧಿ ಮೀರಿ ಕಾರ್ಯಾಚರಿಸಿದ ಕಾರಣ, ಕ್ರಿಕೆಟಿಗ ವಿರಾಟ್ ಕೊಹ್ಲಿ (Cricketer Virat Kohli) ಮಾಲೀಕತ್ವದ ಪಬ್ (Pub) ಮೇಲೆ ಎಫ್ಐಆರ್ (FIR) ದಾಖಲಿಸಲಾಗಿದೆ. ರಾಜಧಾನಿಯ ಕಸ್ತೂರ್‌ಬಾ (Kasturba Road) ರಸ್ತೆಯಲ್ಲಿರುವ ಒನ್ 8 ಕಮ್ಯೂನ್ ಪಬ್ (One8 commune pub) ಮಾಲೀಕತ್ವದ್ದಾಗಿದ್ದು, ರಾತ್ರಿ ಅವಧಿಗೂ ಮೀರಿ ತೆರೆದಿದ್ದುದು ಕಂಡುಬಂದಿತ್ತು.

ಜುಲೈ‌ 6ರಂದು ರಾತ್ರಿ 1.20 ವರೆಗೆ ಪಬ್ ತೆರೆದಿದ್ದು ಕಾರ್ಯಾಚರಿಸುತ್ತಿತ್ತು. ರಾತ್ರಿ ಗಸ್ತಿನಲ್ಲಿದ್ದ ಸಿಬ್ಬಂದಿಗೆ ಪಬ್ ಓಪನ್ ಇರುವುದಾಗಿ ಮಾಹಿತಿ ದೊರೆತಿತ್ತು. ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಗ್ರಾಹಕರು ಇದ್ದುದು ಕಂಡುಬಂದಿತ್ತು. ಹೀಗಾಗಿ ಅವಧಿಗೂ ಮೀರಿ ಅನಧಿಕೃತವಾಗಿ ಪಬ್ ಓಪನ್ ಇಟ್ಟ ಹಿನ್ನೆಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ವಿರಾಟ್ ಕೊಹ್ಲಿ ಅವರ One8 ಕಮ್ಯೂನ್ ರೆಸ್ಟೋರೆಂಟ್ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸ್ವಲ್ಪ ದೂರದಲ್ಲಿದೆ. 2023ರಲ್ಲಿ ಗಾರ್ಡನ್ ಸಿಟಿಯಲ್ಲಿ ಈ ಪಬ್‌ ಓಪನ್‌ ಆಗಿತ್ತು. ಇಲ್ಲಿ ಕಿಟಕಿಯ ಪಕ್ಕದ ಮೇಜಿನ ಬಳಿ ಕುಳಿತರೆ ಕ್ರಿಕೆಟ್ ಸ್ಟೇಡಿಯಂ ಭಾಗಶಃ ಗೋಚರಿಸುತ್ತದೆ. ಈ ಪಬ್‌ನ ಶಾಖೆಗಳು ಮುಂಬೈ, ಪುಣೆ ಮತ್ತು ಕೋಲ್ಕತ್ತಾದಲ್ಲಿವೆ. ಈ ರೆಸ್ಟೋರೆಂಟ್ ಸರಪಳಿಯ ಎಂಟನೇ ಔಟ್‌ಲೆಟ್ ಇದಾಗಿದೆ. ಮೂರು ಮಹಡಿಗಳಲ್ಲಿ ಹರಡಿದ್ದು, ಬೋಹೀಮಿಯನ್ ಅಲಂಕಾರದೊಂದಿಗೆ ಬೆಂಗಳೂರಿನ ವಿಲಾಸಿ ರೆಸ್ಟೋರೆಂಟ್‌ಗಳಲ್ಲಿ ಒಂದಾಗಿದೆ.‌

ರಾಜಧಾನಿಯಲ್ಲಿ ರೋಡ್‌ ರೇಜ್‌, ಯುವತಿಯನ್ನು ಹಿಂಬಾಲಿಸಿದ ಪುಂಡರು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪುಂಡರ ಹಾವಳಿ (Ragging Caseಮಿತಿಮೀರಿದೆ. ಮೀಸೆ ಚಿಗುರದ ಯುವಕರು ಓಡಿಸೋಕ್ಕೆ ಬೈಕ್‌ ಸಿಕ್ಕರೆ ಸಾಕು ರಸ್ತೆಯಲ್ಲಿ ವ್ಹೀಲಿಂಗ್‌ (bike wheeling) ಮಾಡುತ್ತಾ, ಹೆಣ್ಮಕ್ಕಳಿಗೆ ರ‍್ಯಾಗಿಂಗ್‌ ಮಾಡುವುದು ಹೆಚ್ಚಾಗುತ್ತಿದೆ. ಸದ್ಯ ಇಂತಹದ್ದೆ ಘಟನೆಯೊಂದು ನಾಗರಭಾವಿ ಔಟರ್ ರಿಂಗ್ ರೋಡ್ ಬಳಿ ನಡೆದಿದೆ.

ಕುಟುಂಬದವರ ಜತೆ ಹೋಗುತ್ತಿದ್ದ ಮಹಿಳೆಯ ಹಿಂದೆ ಬಿದ್ದ ಕೆಲ ಪೋಲಿ ಹುಡುಗರು, ವ್ಹೀಲಿಂಗ್ ಮಾಡಿ ಭಯ ಪಡಿಸಿದ್ದಲ್ಲದೇ ರ‍್ಯಾಗಿಂಗ್‌ ಮಾಡಿದ್ದಾರೆ. ನಿನ್ನೆ ಭಾನುವಾರ ರಾತ್ರಿ 11.40ರ ಸುಮಾರಿಗೆ ಘಟನೆ ನಡೆದಿದೆ. ನೀತು ಬಳೆಗಾರ್ ಎಂಬಾಕೆ ಪೊಲೀಸರಿಗೆ ದೂರು ನೀಡಿದ್ದಾರೆ.

ನೀತು ಕುಟುಂಬಸ್ಥರ ಜತೆ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಪುಂಡರಿಬ್ಬರು ನಂಬರ್ ಪ್ಲೇಟ್ ಇಲ್ಲದ ಇರುವ ಡ್ಯೂಕ್ ಬೈಕ್‌ನಲ್ಲಿ ಬಂದು ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದಿದ್ದಾರೆ. ಇದನ್ನೂ ಪ್ರಶ್ನೆ ಮಾಡಿದ್ದಕ್ಕೆ ಮಹಿಳೆಯನ್ನು ನಿಂದಿಸಿದ್ದಾರೆ. ಹೀಗಾಗಿ ನೀತು ಫೋಟೋ ಸಮೇತ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಜತೆಗೆ ಸೋಶಿಯಲ್‌ ಮೀಡಿಯಾದಲ್ಲಿ ಟ್ಯಾಗ್‌ ಮಾಡಿ ಬೆಂಗಳೂರಿನಲ್ಲಿ ಸಾಮಾನ್ಯ ಜನರಿಗೆ ಸೇಫ್ಟಿ ಇಲ್ಲ. ದಯಮಾಡಿ ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Exit mobile version