Site icon Vistara News

Fraud Case: ಮದುವೆಯಾಗುವುದಾಗಿ ನಂಬಿಸಿ ಪ್ರಿಯಕರ ಎಸ್ಕೇಪ್, ಗರ್ಭಿಣಿಯಿಂದ ಪೊಲೀಸ್‌ಗೆ ದೂರು

fraud case bagepalli

ಚಿಕ್ಕಬಳ್ಳಾಪುರ: ಪ್ರೀತಿ ಹೆಸರಲ್ಲಿ ತನ್ನನ್ನು ಗರ್ಭಿಣಿ (Pregnant) ಮಾಡಿ ವಂಚಿಸಿ (Fraud Case) ಪ್ರಿಯಕರ ಪರಾರಿಯಾಗಿದ್ದಾನೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಯುವತಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಆಕೆ ಗರ್ಭಿಣಿ ಆಗಿದ್ದು, ಪ್ರಿಯಕರನನ್ನು ಹುಡುಕಿ ಕೊಡುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಇಬ್ಬರೂ ಬಾಗೇಪಲ್ಲಿ ತಾಲ್ಲೂಕಿನ ದೇವರಗುಡಿಪಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಲ್ಲಸಂದ್ರ ಗ್ರಾಮದ ನಿವಾಸಿಗಳು. ಸೂರ್ಯಪ್ರಕಾಶ್ ಪ್ರೀತಿಸಿ ಗರ್ಭಿಣಿ ಮಾಡಿ ಕೈ ಕೊಟ್ಟ ಪ್ರಿಯಕರ. ಗಗನ ಪ್ರೀತಿಯ ಹೆಸರಲ್ಲಿ ಮೋಸ ಹೋದ ಪ್ರಿಯತಮೆ. ಕಾಲೇಜಿನಲ್ಲಿ ಓದುವಾಗಲೇ ಈ ಜೋಡಿ ಪರಸ್ಪರ ಪ್ರೀತಿಸಿದ್ದರು. ತನ್ನನ್ನು ವಿವಾಹ ಆಗುವುದಾಗಿ ನಂಬಿಸಿ ತನ್ನನ್ನು ಬಳಸಿಕೊಂಡಿದ್ದು, ಇದೀಗ ತಾನು ಗರ್ಭಿಣಿಯಾಗಿದ್ದೇನೆ. ಆತನನ್ನು ಹುಡುಕಿಕೊಡಿ ಎಂದು ಗಗನ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಗುದದ್ವಾರದಲ್ಲಿ 2 ಮೊಬೈಲ್‌ ಇಟ್ಟುಕೊಂಡು ಜೈಲಿನೊಳಗೆ ಹೋಗಲು ಯತ್ನಿಸಿದ ಕೈದಿ

ಬೆಂಗಳೂರು: ಪರಪ್ಪನ ಅಗ್ರಹಾರ (Parappana Agrahara Jail) ಜೈಲಿನಲ್ಲಿ ಕೈದಿಗಳ (Prison inmates) ಕಳ್ಳಾಟ ನಿಲ್ಲುತ್ತಿಲ್ಲ. ಕೈದಿಗಳಿಂದಲೇ ರಾಜಾರೋಷವಾಗಿ ಜೈಲಿನಲ್ಲಿ ಮೊಬೈಲ್ ಮಾರಾಟ (mobile phone sale) ನಡೆಯುತ್ತಿದ್ದು, ಜೈಲಿನಲ್ಲಿಯೇ ಇದರಿಂದ ಕೆಲವರು ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಈ ವರದಿ ಓದಿದರೆ, ಮೊಬೈಲ್‌ ಸಾಗಿಸಲು ಇಂಥ ಹಾದಿ ಹಿಡಿಯುವವರೂ ಇರ್ತಾರಾ ಎಂದು ನಿಮಗೆ ಸೋಜಿಗ ಆಗಬಹುದು.

ಹೀಗೆ ಒಬ್ಬ ಕೈದಿ ಕದ್ದು ಮುಚ್ಚಿ ಜೈಲಿಗೆ ಮೊಬೈಲ್ ತೆಗೆದುಕೊಂಡು ಹೋಗಲು ಯತ್ನಿಸಿದ್ದು, ಈತ ಮೊಬೈಲ್ ಇಟ್ಟುಕೊಂಡ ಜಾಗ ಮಾತ್ರ ಪತ್ತೆ ಮಾಡಿದ್ದೇ ರೋಚಕ. ಕೋರ್ಟ್‌ಗೆ ಹೋಗಿ ಮರಳುತ್ತಿದ್ದ ಕೈದಿಯೊಬ್ಬನ ಗುದದ್ವಾರದಲ್ಲಿ ಎರಡು ಮೊಬೈಲ್ ಸಿಕ್ಕಿವೆ! ಜೈಲಿನ ಒಳಗೆ ಬರುವಾಗ ಸ್ಕ್ಯಾನ್ ಮಾಡಿದಾಗ ಈ ವಿಚಾರ ಪತ್ತೆಯಾಗಿದೆ. ರಘುವೀರ್ ಎಂಬ ವಿಚಾರಣಾಧೀನ ಕೈದಿಯ ಗುದದ್ವಾರದಲ್ಲಿ ಎರಡು ಮೊಬೈಲ್ ಹಾಗೂ ಬ್ಯಾಟರಿ ಪತ್ತೆಯಾಗಿವೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಿದ್ದ ಪೊಲೀಸರು ವಾಪಸ್ ಬರುವಾಗ ಯಾರಿಂದಲೋ ಹೇಗೋ ಕಣ್ಣು ತಪ್ಪಿಸಿ ಈತ ಮೊಬೈಲ್ ಪಡೆದಿದ್ದ. ಶ್ರೀಕೃಷ್ಣ ಎಂಬ ಪೊಲೀಸ್ ಪೇದೆ ರಘುವೀರ್‌ನನ್ನು ಕರೆದುಕೊಂಡು ಹೋಗಿದ್ದ. ವಾಪಸ್ ಬಂದಾಗ ಜೈಲಿನ ತಪಾಸಣೆ ವೇಳೆ ಸ್ಕ್ಯಾನ್ ಸೈರನ್ ಮಾಡಿತ್ತು. ಕೂಡಲೇ ರಘುವೀರ್‌ನನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದು ಎಕ್ಸರೇ ಮಾಡಿದಾಗ ಪೊಲೀಸರಿಗೇ ಶಾಕ್ ಆಗಿತ್ತು.

ಹೊಟ್ಟೆಯೊಳಗೆ ಎರಡು ಮೊಬೈಲ್ ಇದ್ದವು. ಹೊಟ್ಟೆಯೊಳಗೆ ಮೊಬೈಲ್ ಹಾಕಿಕೊಂಡು, ಸೆಲ್ಲೋ ಟೇಪ್ ಗುದದ್ವಾರದಲ್ಲಿ ಕೆಳಗೆ ಬಿಟ್ಟಿದ್ದ. ಜೈಲಿನೊಳಗೆ ಹೋಗಿ ಅದನ್ನು ತೆಗೆದು ಲಕ್ಷ ಲಕ್ಷಕ್ಕೆ ಮಾರಾಟ ಮಾಡಲು ಪ್ಲಾನ್‌ ಮಾಡಿಕೊಂಡಿದ್ದ. ಆದರೆ ಪೊಲೀಸರ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ, ಆತ ಯಾರಿಗೆ ಮಾರಲು ಮೊಬೈಲ್‌ ಒಯ್ದಿದ್ದ ಎಂಬ ಕುತೂಹಲ ಮೂಡಿದೆ. ಹೈ ಪ್ರೊಫೈಲ್, ವಿಐಪಿ ಕೈದಿಗಳು ಕೂಡ ಜೈಲಿನಲ್ಲಿರುವುದರಿಂದ ಈ ಕುತೂಹಲ.

ಇದನ್ನೂ ಓದಿ: Arun Somanna: ವಂಚನೆ, ಜೀವ ಬೆದರಿಕೆ; ಕೇಂದ್ರ ಸಚಿವ ಸೋಮಣ್ಣ ಪುತ್ರನ ಮೇಲೆ ಎಫ್‌ಐಆ‌ರ್

Exit mobile version