ನವದೆಹಲಿ: ಅಪರಾಧವನ್ನು ವೈಭವೀಕರಿಸುವ ಸಿನಿಮಾಗಳು ಹೇಗೆ ಅಪರಾಧಕ್ಕೆ ದಾರಿ ಮಾಡಿಕೊಡುತ್ತವೆ ಎಂಬುದಕ್ಕೆ ದೆಹಲಿಯಲ್ಲಿ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದ ಯುವತಿಯನ್ನು 35 ಭಾಗಗಳಾಗಿ ತುಂಡರಿಸಿ (Delhi Crime), 18 ದಿನ ದೆಹಲಿಯ ವಿವಿಧೆಡೆ ಎಸೆದ ಪ್ರಕರಣವೇ ಸಾಕ್ಷಿಯಾಗಿದೆ.
ಕಳೆದ ಮೇ ತಿಂಗಳಲ್ಲಿ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆಯೂ ವಾಗ್ವಾದ ನಡೆದಿದೆ. ಇದರಿಂದ ಕುಪಿತಗೊಂಡ ಅಫ್ತಾಬ್ ಅಮೀನ್ ಪೂನಾವಾಲಾ (Aftab Ameen Poonawala), ತನ್ನ ಗೆಳತಿ ಶ್ರದ್ಧಾ ವಾಲ್ಕರ್ (Shraddha Walkar) ಅವರನ್ನು ಕೊಂದು ಹಾಕಿದ್ದಾನೆ. ಅಷ್ಟೇ ಅಲ್ಲ, ದೇಹವನ್ನು 35 ಭಾಗಗಳಾಗಿ ತುಂಡರಿಸಿ, 300 ಲೀಟರ್ ಸಾಮರ್ಥ್ಯದ ಫ್ರಿಡ್ಜ್ ಖರೀದಿಸಿ ಅದರಲ್ಲಿ ದೇಹದ ಭಾಗಗಳನ್ನು ಇಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಫ್ರಿಡ್ಜ್‌ನಲ್ಲಿ ದೇಹದ ಭಾಗಗಳನ್ನು ಇಟ್ಟರೂ ದುರ್ನಾತ ಬರಬಾರದು ಎಂದು ನಿತ್ಯ ಅಗರಬತ್ತಿ ಹಚ್ಚುತ್ತಿದ್ದ. ಹಾಗೆಯೇ, ಅಮೆರಿಕದ ಕ್ರೈಂ ಶೋ “ಡೆಕ್ಸ್‌ಟರ್” (Dexter) ನೋಡಿ ಇಂತಹ ಕೃತ್ಯ ಎಸಗಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ. ಪೊಲೀಸರು ಅಫ್ತಾಬ್‌ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದು, ಇನ್ನಷ್ಟು ಭೀಕರ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ | Delhi Crime | ಲಿವ್ ಇನ್ ಸಂಗಾತಿಯನ್ನು 35 ಭಾಗಗಳಾಗಿ ಕತ್ತರಿಸಿ, 18 ದಿನಗಳ ಕಾಲ ದಿಲ್ಲಿಯ ವಿವಿಧೆಡೆ ಎಸೆದ!