Site icon Vistara News

Greater Noida: ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ ಡೆಲಿವರಿ ಬಾಯ್‌ಗೆ ಪೊಲೀಸ್‌ ಗುಂಡೇಟು!

noida

noida

ನೋಯ್ಡಾ: ದಿನಸಿ ವಸ್ತುಗಳನ್ನು ಡೆಲಿವರಿ ಮಾಡಲು ಹೋಗಿದ್ದ 23 ವರ್ಷದ ಡೆಲಿವರಿ ಬಾಯ್‌ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಆರೋಪಿಯನ್ನು ಗ್ರೇಟರ್‌ ನೋಯ್ಡಾದಲ್ಲಿ (Greater Noida) ಪೊಲೀಸರು ಬಂಧಿಸಿದ್ದಾರೆ. ಗ್ರೇಟರ್ ನೋಯ್ಡಾದ ಬಹುಮಹಡಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಮಹಿಳೆ ಮೊಬೈಲ್ ಅಪ್ಲಿಕೇಶನ್‌ನಿಂದ (Mobile App) ದಿನಸಿ ವಸ್ತುಗಳನ್ನು ಆರ್ಡರ್ ಮಾಡಿದ್ದರು. ಬಂಧಿಸಲು ತೆರಳಿದಾಗ ಆರೋಪಿ ಪೊಲೀಸರ ಪಿಸ್ತೂಲು ಕಸಿದು ಪರಾರಿಯಾಗಲು ಯತ್ನಿಸಿದ್ದು, ಆತನ ಕಾಲಿಗೆ ಗುಂಡು ಹಾರಿಸಲಾಗಿದೆ.

ಆರೋಪಿಯನ್ನು ಸುಮಿತ್‌ ಸಿಂಗ್‌ ಎಂದು ಗುರುತಿಸಲಾಗಿದೆ. ಅಕ್ಟೋಬರ್‌ 27ರಂದು ಆರ್ಡರ್‌ ಸ್ವೀಕರಿಸಿದ ಸುಮಿತ್‌ ಸಿಂಗ್‌ ಮನೆಯಲ್ಲಿ ಮಹಿಳೆ ಒಬ್ಬರೇ ಇರುವುದನ್ನು ಗಮನಿಸಿ ಈ ಕೃತ್ಯ ಎಸಗಿದ್ದಾನೆ. ಅತ್ಯಾಚಾರ ಎಸಗಿ ಪರಾರಿಯಾದ ಆತನ ವಿರುದ್ಧ ಮಹಿಳೆ ಅಂದೇ ದೂರು ದಾಖಲಿಸಿದ್ದರು. ಆರೋಪಿಯ ಪತ್ತೆಗಾಗಿ ಪೊಲೀಸರು ವಿವಿಧ ತಂಡಗಳನ್ನು ರಚಿಸಿದ್ದರು. ಕೊನೆಗೆ ಆತ ಗ್ರೇಟರ್‌ ನೋಯ್ಡಾದಲ್ಲಿ ಸಿಕ್ಕಿ ಬಿದ್ದಿದ್ದ.

ಹೈಡ್ರಾಮಾ

ಸುಮಿತ್‌ ಸಿಂಗ್‌ನಲ್ಲಿ ಬಂಧಿಸಲು ಪೊಲೀಸರು ಸ್ಥಳಕ್ಕೆ ತೆರಳಿದಾಗ ಹೈಡ್ರಾಮವೇ ನಡೆಯಿತು. ಪೊಲೀಸ್‌ ತಂಡದಲ್ಲಿದ್ದ ಕಾನ್‌ಸ್ಟೇಬಲ್‌ ಒಬ್ಬರ ಪಿಸ್ತೂಲ್‌ ಎಳೆದು ಪರಾರಿಯಾಗಲು ಯತ್ನಿಸಿದ್ದ. ಕೂಡಲೇ ಈ ಪ್ರದೇಶವನ್ನು ಶೋಧಿಸಲು ಮತ್ತು ಸುಮಿತ್‌ನನ್ನು ಸೆರೆ ಹಿಡಿಯಲು ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಯಿತು. ಪೊಲೀಸರು ಆತನ ಸಮೀಪಕ್ಕೆ ಹೋದಾಗ ಗುಂಡು ಹಾರಿಸತೊಡಗಿದ್ದ. ಪೊಲೀಸರು ಪ್ರತಿದಾಳಿ ನಡೆಸಿ ಆತನ ಕಾಲಿಗೆ ಶೂಟ್‌ ಮಾಡಿದರು. ಬಳಿಕ ಆತನನ್ನು ಬಂಧಿಸಲಾಯಿತು. ಸದ್ಯ ಸುಮಿತ್‌ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡಿದ ಆರೋಪದಲ್ಲಿ ಹಿಂದೆಯೂ ಸುಮಿತ್‌ನನ್ನು ಬಂಧಿಸಲಾಗತ್ತು ಎಂದು ಮೂಲಗಳು ತಿಳಿಸಿವೆ.

ವಿಡಿಯೊ ವೈರಲ್‌

ಪೊಲೀಸರು ಗಾಯಗೊಂಡಿದ್ದ ಆರೋಪಿಯನ್ನು ಕರೆದುಕೊಂಡು ಹೋಗುತ್ತಿರುವ ವಿಡಿಯೊ ಇದೀಗ ವೈರಲ್‌ ಆಗಿದೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಡಿಯೊವನ್ನು ಪೋಸ್ಟ್‌ ಮಾಡಲಾಗಿದೆ. ಗುಂಡೇಟಿನಿಂದ ಕಾಲಿಗೆ ಗಾಯವಾಗಿರುವ ಸುಮಿತ್‌ನನ್ನು ಪೊಲೀಸರು ತಮ್ಮೊಂದಿಗೆ ಜೀಪಿಗೆ ಕರೆದೊಯ್ಯುವುದನ್ನು ವಿಡಿಯೊದಲ್ಲಿ ಕಾಣಬಹುದು ಮತ್ತು ಕಾಲಿಗೆ ಬಟ್ಟೆಯನ್ನು ಸುತ್ತಿರುವುದು ಸಹ ಕಂಡು ಬರುತ್ತಿದೆ.

ಸದ್ಯ ಸುಮಿತ್‌ ಸ್ಥಿತಿ ಸ್ಥಿರವಾಗಿದೆ. ಆತ ಅಪಾಯದಿಂದ ಪಾರಾಗಿದ್ದಾನೆ. ʼʼಅತ್ಯಾಚಾರಿ ಆರೋಪಿ ಸುಮಿತ್‌ನನ್ನು ಬಂಧಿಸಲು ತೆರಳಿದಾಗ ಆತ ಪಿಸ್ತೂಲ್‌ ಕಸಿದುಕೊಂಡು ಪೊಲೀಸರ ಮೇಲೆ ಫೈರ್‌ ಮಾಡಿದ್ದಾನೆ. ಈ ವೇಳೆ ಸ್ವಯಂ ರಕ್ಷಣೆಗಾಗಿ ಪೊಲೀಸರು ಪ್ರತಿ ದಾಳಿ ನಡೆಸಿದ್ದಾರೆ. ಈ ವೇಳೆ ಸುಮಿತ್‌ ಕಾಲಿಗೆ ಗಾಯವಾಗಿದೆ. ಆತನ ಬಳಿಯಿಂದ ಪಿಸ್ತೂಲ್‌ ವಶಕ್ಕೆ ಪಡೆಯಲಾಗಿದೆʼʼ ಎಂದು ಪೊಲೀಸರು ತಿಳಿಸಿದ್ದಾರೆ.

ಮಗಳ ಮೇಲೆಯೇ ಅತ್ಯಾಚಾರ ಮಾಡಿದ್ದ ತಂದೆಗೆ 20 ವರ್ಷ ಜೈಲು ಶಿಕ್ಷೆ

ಬೆಂಗಳೂರು: ತನ್ನ ಮಗಳೂ ಎಂಬ ಮಮಕಾರವಿಲ್ಲದೆ ಕಾಮದ ಕಣ್ಣಿಂದ ನೋಡಿದ ಧೂರ್ತನೊಬ್ಬನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಆತ ಆ ಪುಟ್ಟ ಬಾಲಕಿಯ ಮೇಲೆ ಪೈಶಾಚಿಕವಾಗಿ ಅತ್ಯಾಚಾರ ಮಾಡಿದ್ದು ಮಾತ್ರವಲ್ಲ, ಆಕೆ ಗರ್ಭ ಧರಿಸುವಂತೆ ಮಾಡಿದ್ದ. ಈ ಘಟನೆ ನಡೆದಿರುವುದು ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ. 2022ರಲ್ಲಿ. ಪತ್ನಿ ಮನೆಯಲ್ಲಿಲ್ಲದ ಸಮಯ ನೋಡಿ ಅಮಾಯಕ ಮಗಳನ್ನು ಆ ಧೂರ್ತ ತಂದೆ ಲೈಂಗಿಕವಾಗಿ ಹಿಂಸಿಸುತ್ತಿದ್ದ. ಯಾರಿಗಾದರೂ ಹೇಳಿದರೆ ಕೊಲೆ ಮಾಡುವ, ಅವರಿಗೆ ಹಿಂಸೆ ಕೊಡುವ ಬೆದರಿಕೆಗಳನ್ನು ಒಡ್ಡಿ ಆಕೆಯನ್ನು ತನಗೆ ಬೇಕಾದ ಹಾಗೆ ಬಳಸಿಕೊಂಡಿದ್ದ ಎನ್ನಲಾಗಿದೆ. ಸದ್ಯ ನ್ಯಾಯಾಧೀಶರು ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದ್ದಾರೆ.

ಇದನ್ನೂ ಓದಿ: ಅತ್ಯಾಚಾರ, ದರೋಡೆ, ಲೂಟಿಯಲ್ಲಿ ಮುಸ್ಲಿಮರೇ ನಂ.1; ಮುಸ್ಲಿಂ ಮುಖಂಡನಿಂದಲೇ ಹೇಳಿಕೆ

Exit mobile version