ಲಖನೌ: ʼಹರ ಹರ ಶಂಭುʼ (Har Har shanbhu) ಹಾಡಿನ ಮೂಲಕ ಖ್ಯಾತಿ ಗಳಿಸಿರುವ ಯೂಟ್ಯೂಬ್ ಗಾಯಕಿ (Youtube Singer) ಫರ್ಮಾನಿ ನಾಜ್ (Farmani Naaz) ಅವರ ಸಹೋದರನನ್ನು ಚಾಕುವಿನಿಂದ ಇರಿದು ಹತ್ಯೆ (murder case) ಮಾಡಲಾಗಿದೆ.
ಈ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯ ಮೊಹಮ್ಮದ್‍ಪುರ ಮಾಫಿ ಗ್ರಾಮದಲ್ಲಿ ನಡೆದಿದೆ. ಮೃತನ ಹೆಸರು ಖುರ್ಷಿದ್(18). ಈತ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಪೊಲೀಸರ ವರದಿ ಪ್ರಕಾರ, ಸಾಲ್ವಾ ರಸ್ತೆ ಬಳಿ ಕೆಲವು ಬೈಕ್ ಸವಾರರು ಖುರ್ಷಿದ್‍ನನ್ನು ಸುತ್ತುವರಿದು ಚಾಕು ತೋರಿಸಿ ಬೆದರಿಕೆ ಹಾಕಿದ್ದರು. ಈ ವೇಳೆ ಖುರ್ಷಿದ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಗ್ಯಾಂಗ್ ಖುರ್ಷಿದ್‍ಗೆ ಚಾಕುವಿನಿಂದ ಇರಿದು ಸ್ಥಳದಿಂದ ಪರಾರಿಯಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಹಾದಿಯಲ್ಲೇ ಖುರ್ಷಿದ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ರತನಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
2022ರಲ್ಲಿ ಹೊರಬಂದ ಫರ್ಮಾನಿ ನಾಜ್ ಅವರ ‘ಹರ್ ಹರ್ ಶಂಭು’ ಗೀತೆ ಯೂಟ್ಯೂಬ್ ಹಾಗೂ ಇತರೆಡೆ ವೈರಲ್ ಆಗಿ ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿತ್ತು. ಫರ್ಮಾನಿ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದಲ್ಲದೆ ಲಕ್ಷಾಂತರ ಜನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಜಿತು ಶರ್ಮಾ ಎಂಬ ಗಾಯಕ ಈ ಹಾಡು ತಮ್ಮದು ಎಂದು ನಾಜ್ ಅವರ ಮೇಲೆ ಹಕ್ಕುಸ್ವಾಮ್ಯದ ತಗಾದೆ ತೆಗೆದಿದ್ದರು. ಇದು ವಿವಾದ ಸೃಷ್ಟಿಸಿತ್ತು. ನಂತರ ಫರ್ಮಾನಿ ತಮ್ಮ ಹಾಡಿನ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಿಂದ ಅಳಿಸಿಹಾಕಿದ್ದರು.
ಮೂಲಗಳ ಪ್ರಕಾರ, ನಾಜ್ ಕುಟುಂಬ ಕಬ್ಬಿಣ ಕಳವು ಜಾಲದಲ್ಲಿ ಸಕ್ರಿಯವಾಗಿದೆ. ಖುರ್ಷಿದ್ ಮೇಲಿನ ಹಲ್ಲೆಯು ಇದರ ಪರಿಣಾಮ ಎಂದು ಶಂಕಿಸಲಾಗಿದೆ.
ಇದನ್ನೂ ಓದಿ: Murder Case : ಮನೆಗೆ ಬಂದವರನ್ನೆಲ್ಲ ಪ್ರಶ್ನಿಸುತ್ತಿದ್ದ ನೆರೆಮನೆ ಅಜ್ಜಿ ಹತ್ಯೆ!