Site icon Vistara News

Honour Killing: ರಸ್ತೆ ಬದಿಯಲ್ಲೇ ಮಹಿಳೆಯನ್ನು ದರದರನೆ ಎಳೆದು, ತಲೆಗೆ ಹೊಡೆದು ಕೊಲೆ ಮಾಡಿದ್ರು; ಇದೇನು ಮರ್ಯಾದೆ ಹತ್ಯೆಯಾ?

Siriya Crime

ನವದೆಹಲಿ: ಮಹಿಳೆಯೊಬ್ಬಳನ್ನು ರಸ್ತೆ ಬದಿಯಲ್ಲೇ ದರದರನೆ ಎಳೆದು, ಬಳಿಕ ಕಂಡ ಕಂಡವರು ಮನಸೋಇಚ್ಛೆ ದೊಣ್ಣೆಯಿಂದ ತಲೆಗೆ ಹೊಡೆದು ಕೊಲೆ ಮಾಡುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಈ ವಿಡಿಯೊ ನೋಡಿದವರ ಮನಸ್ಸು ಖಂಡಿತವಾಗಿಯೂ ಮರುಕಪಡುತ್ತದೆ. ಯಾಕೆಂದರೆ ಮಹಿಳೆಯೊಬ್ಬಳನ್ನು ಈ ರೀತಿ ಒಬ್ಬೊಬ್ಬರಾಗಿಯೇ ಹೊಡೆದು ಕೊಲ್ಲುವುದು ನಿಜವಾಗಿಯೂ ಅಮಾನವೀಯ ಮತ್ತು ಅನಾಗರಿಕ ಸಂಸ್ಕೃತಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಘಟನೆ ನಡೆದಿರುವುದು ನಮ್ಮ ದೇಶದಲ್ಲಿ ಅಲ್ಲ ಎಂಬುದೇ ಸಮಾಧಾನ. ಇದು ಇಸ್ಲಾಮಿಕ್ ರಾಷ್ಟ್ರ ಹಾಗೂ ಭಯೋತ್ಪಾದನೆಯ ತವರಾಗಿರುವ ಸಿರಿಯಾ ಎಂದು ಹೇಳಲಾಗುತ್ತಿದೆ. ಇದು ಮರ್ಯಾದೆ ಹತ್ಯೆ (Honour Killing) ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಮಹಿಳೆಯರ ಮೇಲಿನ ದೌರ್ಜನ್ಯ ಇಲ್ಲಿ ನಿರೀಕ್ಷಿತ. ಆದರೆ, ಇಂಥ ಘಟನೆಗಳು ಮಾನವ ಕುಲಕ್ಕೆ ಅಪಮಾನ ಎಂಬುದರಲ್ಲಿ ಎರಡು ಮಾತಿಲ್ಲ.

ಈ ಕ್ರೌರ್ಯದ ಘಟನೆ ಸಿರಿಯಾದಲ್ಲಿ ನಡೆದಿದ್ದು, ಏಳು ಮಂದಿ ಪುರುಷರು ಸೇರಿ ಮಹಿಳೆಯೊಬ್ಬಳ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ಘಟನೆಯಲ್ಲಿ ಪುರುಷರು ಮಹಿಳೆಯನ್ನು ಕಾಲುಗಳಲ್ಲಿ ಒದ್ದು, ಕೋಲಿನಿಂದ ಹೊಡೆದು ಅವಳ ಕೂದಲನ್ನು ಹಿಡಿದು ಎಳೆದಾಡಿದ್ದಾರೆ. ಆಕೆ ಕಿರುಚಾಡಿದರೂ ಕೂಡ ಯಾರ ಮನವೂ ಕರಗಿಲ್ಲ. ಈ ಘಟನೆ ಫೆಬ್ರವರಿಯಲ್ಲಿ ನಡೆದಿದ್ದು, ಕ್ಯಾಮರಾದಲ್ಲಿ ಸೆರೆಯಾಗಿ ಇಂದಿಗೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ಕ್ರೌರ್ಯ ನಡೆಸಿದ ಗುಂಪಿನಲ್ಲಿ ಅಪ್ರಾಪ್ತ ಬಾಲಕ ಸೇರಿಕೊಂಡಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ಈ ಘಟನೆಯನ್ನು ವರದಿ ಮಾಡಿದ ಸುದ್ದಿ ಮಾಧ್ಯಮ ಇದನ್ನು ಕುಟುಂಬದ ಗೌರವಕ್ಕಾಗಿ ಮಾಡಿದೆ ಎಂಬುದಾಗಿ ತಿಳಿಸಿದೆ. 20 ವರ್ಷ ವಯಸ್ಸಿನ ಆಕೆಯನ್ನು ಕುಟುಂಬಸ್ಥರು ರಸ್ತೆಬದಿಯಲ್ಲಿ ಅಟ್ಟಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಅದರಲ್ಲಿ ಒಬ್ಬ ವ್ಯಕ್ತಿ ಆಕೆಯ ಕೂದಲನ್ನು ಎಳೆದುಕೊಂಡು ಕೋಲಿನಲ್ಲಿ ಹೊಡೆಯುತ್ತಿದ್ದ ದೃಶ್ಯ ವಿಡಿಯೊ ಪ್ರಾರಂಭದಲ್ಲಿ ಕಂಡುಬರುತ್ತದೆ. ಹೊಡೆತ ತಾಳಲಾರದೇ ಅವಳು ಕಿರುಚಾಡುತ್ತಿದ್ದಳು ಮತ್ತು ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಳು . ಆದರೆ ಆತ ಆಕೆಗೆ ಹಿಗ್ಗಾಮುಗ್ಗಾ ಹೊಡೆಯುತ್ತಿರುವ ದೃಶ್ಯ ಕಂಡುಬಂದಿದೆ.

ಇದನ್ನೂ ಓದಿ: Best Airport: ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣಗಳ ಪಟ್ಟಿ; ಸಿಂಗಾಪುರದ ಚಾಂಗಿಯನ್ನು ಹಿಂದಿಕ್ಕಿದ ದೋಹಾದ ಹಮದ್

ಇಸ್ಲಾಮಿಕ್​ ರಾಷ್ಟ್ರಗಳಲ್ಲಿ ಮಹಿಳೆಯರಿಗೆ ಕನಿಷ್ಠ ಗೌರವ ನೀಡುತ್ತಿಲ್ಲ ಎಂಬ ಆರೋಪಗಳಿವೆ. ಕಟ್ಟರ್​ ಇಸ್ಲಾಮಿಕ್ ಅನುಯಾಯಿಗಳು ಇದನ್ನು ದೇವರ ನಿರ್ಧಾರ ಎಂದು ಸಮರ್ಥಿಸುವುದುಂಟು. ಕೆಲವೊಂದು ಇಸ್ಲಾಮಿಕ್​ ದೇಶಗಳು ಈ ನಿಟ್ಟಿನಲ್ಲಿ ಸಾಕಷ್ಟು ಸುಧಾರಣೆಗಳನ್ನು ತರುತ್ತಿವೆ. ಆದರೆ, ಸಿರಿಯಾದಂಥ ದೇಶಗಳು ಸದ್ಯಕ್ಕೆ ಉದ್ಧಾರವಾಗುವಂತೆ ಕಾಣುತ್ತಿಲ್ಲ. ಅಲ್ಲಿನ ಪುರುಷರ ಕ್ರೌರ್ಯ ನಿಲ್ಲಲಿ ಎಂದು ಸಾಕಷ್ಟು ಮಂದಿ ವಿಡಿಯೊ ನೋಡಿ ಆಗ್ರಹಿಸಿದ್ದಾರೆ.

Exit mobile version