Children Death: ಅವಳಿ ಮಕ್ಕಳಿಗೆ ಮೃತ್ಯುವಾದ ಐಸ್‌ಕ್ರೀಂ; ಸ್ಮೋಕ್‌ ಬಿಸ್ಕೆಟ್‌ ತಿಂದು ಮಗು ಆಸ್ಪತ್ರೆಪಾಲು - Vistara News

ಕ್ರೈಂ

Children Death: ಅವಳಿ ಮಕ್ಕಳಿಗೆ ಮೃತ್ಯುವಾದ ಐಸ್‌ಕ್ರೀಂ; ಸ್ಮೋಕ್‌ ಬಿಸ್ಕೆಟ್‌ ತಿಂದು ಮಗು ಆಸ್ಪತ್ರೆಪಾಲು

Children Death: ಪೂಜಾ ಮತ್ತು ಪ್ರಸನ್ನ ದಂಪತಿಯ ಅವಳಿ ಮಕ್ಕಳು ಮೃತಪಟ್ಟವರು. ನಿನ್ನೆ ಸಂಜೆ ಗ್ರಾಮಕ್ಕೆ ಐಸ್‌ಕ್ರೀಂ ಮಾರಲು ಬಂದಿದ್ದ ವ್ಯಕ್ತಿಯಿಂದ ಐಸ್‌ಕ್ರೀಂ ತಾಯಿ ಮತ್ತು ಮಕ್ಕಳು ಖರೀದಿಸಿ ತಿಂದಿದ್ದರು. ನಂತರ ಅಸ್ವಸ್ಥರಾಗಿದ್ದರು.

VISTARANEWS.COM


on

twin children death
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಮಂಡ್ಯ: ಬೇಸಿಗೆಯಲ್ಲಿ ಸ್ವಚ್ಛತೆಯಿಲ್ಲದ ಬೀದಿ ಬದಿಯ ಆಹಾರ (Road side food) ಸೇವಿಸಿ ಅಸ್ಸಸ್ಥಗೊಳ್ಳುವ ಹಾಗೂ ಮೃತಪಡುವ ಪ್ರಕರಣಗಳು ಕಂಡುಬರುತ್ತಿವೆ. ಮಂಡ್ಯ (Mandy news) ಹಾಗೂ ದಾವಣಗೆರೆಯಲ್ಲಿ (Davanagere news) ಇವು ವರದಿಯಾಗಿವೆ. ಐಸ್ ಕ್ರೀಂ (Ice cream) ತಿಂದು ಒಂದುವರೆ ವರ್ಷದ ಅವಳಿ ಮಕ್ಕಳು (Twin Children death) ಮೃತಪಟ್ಟಿದ್ದು, ತಾಯಿ ಅಸ್ವಸ್ಥಗೊಂಡಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿಯಲ್ಲಿ ಈ ದಾರುಣ ಘಟನೆ ನಡೆದಿದೆ.

ಗ್ರಾಮದ ಪೂಜಾ ಮತ್ತು ಪ್ರಸನ್ನ ದಂಪತಿಯ ಅವಳಿ ಮಕ್ಕಳು ಮೃತಪಟ್ಟವರು. ನಿನ್ನೆ ಸಂಜೆ ಗ್ರಾಮಕ್ಕೆ ಐಸ್‌ಕ್ರೀಂ ಮಾರಲು ಬಂದಿದ್ದ ವ್ಯಕ್ತಿಯಿಂದ ಐಸ್‌ಕ್ರೀಂ ತಾಯಿ ಮತ್ತು ಮಕ್ಕಳು ಖರೀದಿಸಿ ತಿಂದಿದ್ದರು. ನಂತರ ಅಸ್ವಸ್ಥರಾಗಿದ್ದರು. ಮಕ್ಕಳು ಮನೆಯಲ್ಲಿ ಸಾವಿಗೀಡಾದರೆ, ತೀವ್ರ ಅಸ್ವಸ್ಥಗೊಂಡ ತಾಯಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಮಕ್ಕಳ ಮೃತ ದೇಹವನ್ನು ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ತಾಯಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ‌ ಕೊಡಿಸಲಾಗುತ್ತಿದೆ. ಐಸ್‌ಕ್ರೀಂ ಮಾರಲು ಬಂದಿದ್ದ ವ್ಯಕ್ತಿಗಾಗಿ ಪೊಲೀಸರ ಹುಡುಕಾಟ ನಡೆಯುತ್ತಿದೆ. ಅರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಸ್ಮೋಕ್‌ ಬಿಸ್ಕೆಟ್‌ ತಿಂದು ಮಗು ಅಸ್ವಸ್ಥ

ದಾವಣಗೆರೆ: ದಾವಣಗೆರೆಯಲ್ಲಿ ನಡೆಯುತ್ತಿದ್ದ ಎಕ್ಸಿಬಿಷನ್‌ನಲ್ಲಿ ಬಾಲಕನೊಬ್ಬ ಸ್ಮೋಕ್‌ ಬಿಸ್ಕೆಟ್‌ ತಿಂದು ಅಸ್ವಸ್ಥನಾಗಿದ್ದಾನೆ. ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಂಡಿದ್ದಾನೆ. ದಾವಣಗೆರೆ ನಗರದ ಅರುಣ್ ಸರ್ಕಲ್ ಬಳಿಯ ಎಕ್ಸಿಬಿಷನ್‌ನಲ್ಲಿ ಘಟನೆ ನಡೆದಿದೆ. ಮಕ್ಕಳ ಮನರಂಜನೆಗಾಗಿ ನಡೆಯುತ್ತಿರುವ ಎಕ್ಸಿಬಿಷನ್‌ನ ಸ್ಟಾಲ್ ಒಂದರಲ್ಲಿ ಸ್ಮೋಕ್ ಬಿಸ್ಕೆಟ್ ಕೊಡಲಾಗುತ್ತಿತ್ತು. ಅದನ್ನು ಏಕಾಏಕಿ ಸೇವಿಸಿ ಬಾಲಕ ಅಸ್ವಸ್ಥನಾಗಿದ್ದಾನೆ.

ಸ್ಮೋಕ್ ಬಿಸ್ಕೆಟ್ ಸ್ಟಾಲ್ ದೊಡ್ಡವರಿಂದ ಚಿಕ್ಕ‌ ಮಕ್ಕಳವರೆಗೂ ಗಮನ ಸೆಳೆದಿತ್ತು. ಒಂದು ಕಪ್‌ನಲ್ಲಿ 80 ರೂಪಾಯಿಗೆ ಐದು ಚಿಕ್ಕ‌ ಚಿಕ್ಕ ಬಿಸ್ಕೇಟ್ ನೀಡಲಾಗುತ್ತಿತ್ತು. ಹೀಗೆ ಕೊಟ್ಟ ಬಿಸ್ಕೇಟ್ ಅನ್ನು ಮಗು ಒಂದೇ ಸಲ ಬಾಯಿಗೆ ಹಾಕಿಕೊಂಡಿದೆ. ನಂತರ ನುಂಗಲೂ ಆಗದೇ ಉಗಿಯಲೂ ಆಗದೇ ಕಷ್ಟಪಟ್ಟಿದೆ.

ಅಸ್ವಸ್ಥಗೊಂಡ ಮಗುವನ್ನು ಕೂಡಲೇ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿಗೆ ಚಿಕಿತ್ಸೆ ನೀಡಿದ ನಂತರ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಘಟನೆಯಿಂದ ಆಕ್ರೋಶಗೊಂಡ ಪೋಷಕರು ಎಕ್ಸಿಬಿಷನ್‌ನಲ್ಲಿ ಹಾಕಲಾಗಿದ್ದ ಸ್ಟಾಲ್ ಅನ್ನು ಕಿತ್ತು ಬಿಸಾಕಿದ್ದಾರೆ. ಇಂತಹ ಸ್ಮೋಕ್ ಬಿಸ್ಕೆಟ್ ಅನ್ನು ಮಕ್ಕಳಿಗೆ ಕೊಡಬೇಡಿ ಎಂದು ಎಚ್ಚರಿಸುವ ಆಡಿಯೋ ಹರಿಬಿಟ್ಟಿದ್ದಾರೆ. ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಗೆ ಪಾಲಕರು ದೂರು ನೀಡಿದ್ದಾರೆ.

ಇದನ್ನೂ ಓದಿ: Kids Care: ಪ್ರಯಾಣದ ವೇಳೆ ಮಕ್ಕಳು ಅಸ್ವಸ್ಥರಾಗದಂತೆ ನೋಡಿಕೊಳ್ಳಲು ಹೀಗೆ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ಇಡಿ ದಾಳಿ: ನಳಪಾಡ್‌ ಫಸ್ಟ್‌ ರಿಯಾಕ್ಷನ್‌ ಏನಿತ್ತು? ಅವರು ಕೊಟ್ಟ ಸ್ಪಷ್ಟನೆ ಏನು?

VISTARANEWS.COM


on

ಬೆಂಗಳೂರು: ನನ್ನ ಮೇಲೆ ನಡೆದ ಇಡಿ ದಾಳಿಗೂ ನನ್ನ ತಂದೆ, ಶಾಸಕ ಬಿಡಿಎ ಅಧ್ಯಕ್ಷರೂ ಆದ ಎನ್.ಎ. ಹ್ಯಾರಿಸ್‌ ಅವರಿಗೂ ಯಾವುದೇ ಸಂಬಂಧವಿಲ್ಲ. ನನ್ನ ಹಾಗೂ ನನ್ನ ತಮ್ಮನ ಮನೆಗಳ ಮೇಲೆ ದಾಳಿ ನಡೆದಿದೆ ಎಂದು ಯುವ ಕಾಂಗ್ರೆಸ್‌ ಮುಖಂಡ ನಳಪಾಡ್‌ ಸ್ಪಷ್ಟಪಡಿಸಿದ್ದಾರೆ. ಶ್ರೀಕಿ ಜತೆ ಬಿಟ್‌ ಕಾಯಿನ್‌ ಅವ್ಯವಹಾರ ನಡೆಸಿರುವುದಕ್ಕೆ ಸಂಬಂಧಪಟ್ಟಂತೆ ನಿನ್ನೆ ನಳಪಾಡ್‌ ಅವರ ಮೇಲೆ ಜಾರಿ ನಿರ್ಧೇಶನಾಲಯ ದಾಳಿ ನಡೆಸಿತ್ತು. ಇಂದು ಪ್ರತಿಕ್ರಿಯೆ ನೀಡಿದ ಅವರು, ಶ್ರೀಕಿ ನನಗೆ ಪರಿಚಯ ಇಲ್ಲ ಎಂದು ಹೇಳುವುದಿಲ್ಲ. ಶ್ರೀಕಿ ಜತೆಯಲ್ಲಿ ಕುಳಿತು ಊಟ ಮಾಡಿರಬಹುದು ಅಷ್ಟೇ. ನನ್ನ ತಂದೆ ಹ್ಯಾರಿಸ್‌ ಅವರಿಗೆ ಸಚಿವ ಹುದ್ದೆ ತಪ್ಪಿಸಲು ವಿಪಕ್ಷಗಳು ಸುಳ್ಳು ಆರೋಪ ಮಾಡುತ್ತಿವೆ ಎಂದು ಹೇಳಿದ್ದಾರೆ.

Continue Reading

Latest

ಗುಜರಾತ್‌ ನಲ್ಲಿ ಬೃಹತ್‌ ಸೈಬರ್‌ ವಂಚನೆ ಜಾಲ ಪತ್ತೆ: 2,500 ಕೋಟಿ ಹಣ ವಂಚನೆ

VISTARANEWS.COM


on

ಗುಜರಾತ್‌: ಗುಜರಾತ್‌ನಲ್ಲಿ ಪತ್ತೆಯಾದ ಈ ಬೃಹತ್ ಸೈಬರ್ ವಂಚನೆ ಪ್ರಕರಣವು ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಆತಂಕಕ್ಕೆ ತಳ್ಳಿದೆ. ಸುಮಾರು 2,500 ಕೋಟಿ ರೂ. ಮೊತ್ತದ ಈ ಹಗರಣದಲ್ಲಿ ಭಾಗಿಯಾಗಿದ್ದ 20 ಆರೋಪಿಗಳನ್ನು ರಾಜ್‌ಕೋಟ್ ಪೊಲೀಸರು ಬಂಧಿಸಿದ್ದು, ಇವರಲ್ಲಿ ಎಚ್.ಡಿಎಫ್.ಸಿ, ಯೆಸ್ ಮತ್ತು ಆಕ್ಸಿಸ್ ಬ್ಯಾಂಕ್‌ನಂತಹ ಪ್ರತಿಷ್ಠಿತ ಸಂಸ್ಥೆಗಳ ಅಧಿಕಾರಿಗಳೂ ಸೇರಿರುವುದು ಗಂಭೀರ ವಿಚಾರವಾಗಿದೆ.

ಈ ಬ್ಯಾಂಕ್ ಅಧಿಕಾರಿಗಳು ಸೈಬರ್ ಕ್ರಿಮಿನಲ್‌ಗಳೊಂದಿಗೆ ಶಾಮೀಲಾಗಿ, ನಕಲಿ ದಾಖಲೆಗಳನ್ನು ಬಳಸಿ ಸುಮಾರು 85ಕ್ಕೂ ಹೆಚ್ಚು ‘ಮ್ಯೂಲ್ ಅಕೌಂಟ್’ಗಳನ್ನು (ನಕಲಿ ಖಾತೆ) ತೆರೆದಿದ್ದರು. ಆರ್‌ಬಿಐ ನಿಯಮಗಳನ್ನು ಉಲ್ಲಂಘಿಸಿ ದೊಡ್ಡ ಮೊತ್ತದ ಹಣ ವರ್ಗಾವಣೆ ಮಾಡುತ್ತಿದ್ದ ಇವರು, ವ್ಯವಸ್ಥೆಯಲ್ಲಿ ಬರುವ ಎಚ್ಚರಿಕೆಗಳನ್ನು (Internal Alerts) ಬೇಕೆಂದೇ ನಿರ್ಲಕ್ಷಿಸುತ್ತಿದ್ದರು. ಬಳಿಕ ಈ ಹಣವನ್ನು ಹವಾಲಾ ದಂಧೆಯ ಮೂಲಕ ಬೇರೆಡೆ ರವಾನಿಸಿ, ವಂಚಕರಿಂದ ದೊಡ್ಡ ಮೊತ್ತದ ಕಮಿಷನ್ ಪಡೆಯುತ್ತಿದ್ದರು.

ಗೊಂಡಲ್ ಮಾರ್ಕೆಟಿಂಗ್ ಯಾರ್ಡ್‌ನ ಕಂಪನಿಯೊಂದರ ಖಾತೆಯಲ್ಲಿ ನಡೆದ 200 ಕೋಟಿ ರೂ.ಗಳ ಸಂಶಯಾಸ್ಪದ ವ್ಯವಹಾರವು ಈ ಮಹಾ ಹಗರಣವನ್ನು ಬಯಲಿಗೆಳೆದಿದೆ. ಪ್ರಸ್ತುತ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ 535 ದೂರುಗಳು ದಾಖಲಾಗಿದ್ದು, 35 ನಕಲಿ ಸಂಸ್ಥೆಗಳನ್ನು ಪೊಲೀಸರು ಗುರುತಿಸಿದ್ದಾರೆ. ತನಿಖೆ ಮುಂದುವರಿದಂತೆ ಇನ್ನೂ ಹೆಚ್ಚಿನ ಬ್ಯಾಂಕ್ ನೌಕರರು ಸಿಕ್ಕಿಬೀಳುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

Latest

ಇಡಿ ದಾಳಿ; ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ: ಸಚಿವೆ ಶೋಭಾ ಕರಂದ್ಲಾಜೆ

VISTARANEWS.COM


on

ಬೆಂಗಳೂರು: ಬಿಟ್ ಕಾಯಿನ್ ಮೂಲಕ ಬೇರೆ ಬೇರೆ ದೇಶಗಳಲ್ಲಿ ರಾಜಕಾರಣಿಗಳು ಹೂಡಿಕೆ ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ರಾಜಕಾರಣಿಗಳು ಹೂಡಿಕೆ ಮಾಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಗಂಭೀರ ಆರೋಪ ಮಾಡಿದ್ದಾರೆ.
ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎನ್.ಎ. ಹ್ಯಾರಿಸ್ ಅವರ ಮನೆ ಮೇಲೆ ಇಡಿ ದಾಳಿ ಕುರಿತು ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಇವರು, ನಿರಂತರವಾಗಿ ಕಾಂಗ್ರೆಸ್ ಆರ್ಥಿಕ ಅಪರಾಧಗಳನ್ನು ಮಾಡುತ್ತಲೇ ಬರುತ್ತಿದೆ. ಇದರಲ್ಲಿ ಬಿಟ್ ಕಾಯಿನ್ ಸಹ ಒಂದು. ಬಿಟ್ ಕಾಯಿನ್ ನಲ್ಲಿ ಹೂಡಿಕೆ ಆಗಿದೆ ಎಂಬ ಮಾಹಿತಿ ಆಧರಿಸಿ ದಾಳಿ ನಡೆದಿದೆ ಎಂದರು.
ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಯಾವುದೇ ನಿಖರ ಮಾಹಿತಿ ಇಲ್ಲದೆ ದಾಳಿ ನಡೆದಿಲ್ಲ. ಎಲ್ಲದರಲ್ಲೂ ಕಾಂಗ್ರೆಸ್ ನವರು ತಪ್ಪಿಸಿಕೊಳ್ತಾರೆ. ರಾಜ್ಯದಲ್ಲಿನ ಹಣವನ್ನು ಲೂಟಿ ಮಾಡಿ ಬೇರೆ ದೇಶಗಳಿಗೆ ಸಾಗಿಸಿ, ಅಲ್ಲಿ ಹೂಡಿಕೆ ಮಾಡ್ತಾರೆ. ಕಾಂಗ್ರಸ್ ಸರ್ಕಾರ ಭ್ರಷ್ಟ ಸರ್ಕಾರ ಎಂದು ಟೀಕಿಸಿದರು.

Continue Reading

Latest

ಕಾಂಗ್ರೆಸ್‌ ಶಾಸಕ ಹ್ಯಾರಿಸ್‌, ಪುತ್ರ ನಲಪಾಡ್‌ಗೆ ಇಡಿ ಶಾಕ್!

VISTARANEWS.COM


on

ಬೆಂಗಳೂರು: ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಶಾಸಕ, ಬಿಡಿಎ ಅಧ್ಯಕ್ಷ ಎನ್.‌ ಎ. ಹ್ಯಾರಿಸ್‌ ಹಾಗೂ ಅವರ ಪುತ್ರ ಯುವ ಕಾಂಗ್ರೆಸ್‌ ಮುಖಂಡ ನಲಪಾಡ್‌ ಅವರ ನಿವಾಸ ಮತ್ತು ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ. ಬಿಟ್‌ ಕಾಯಿನ್‌ ಪ್ರಕರಣದ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ. ಬಿಟ್‌ ಕಾಯಿನ್‌ ಆರೋಪಿ ಶ್ರೀಕಿ ಜೊತೆಯಲ್ಲಿ ವ್ಯವಹಾರ ನಡೆಸಿರುವ ಸಂಬಂಧ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.
ನಲಪಾಡ್‌ ಶ್ರೀಕಿ ಜೊತೆ ಹಲವು ವರ್ಷಗಳಿಂದ ವ್ಯವಹಾರ ಹೊಂದಿರುವ ಆರೋಪ ಎದುರಿಸುತ್ತಿದ್ದಾರೆ. ಇವರಿಬ್ಬರ ನಡುವೆ ಅಂದಾಜು ರೂ.4.5 ಕೋಟಿ ವ್ಯವಹಾರ ವಹಿವಾಟು ನಡೆದಿರುವುದನ್ನು ಇಡಿ ಪತ್ತೆ ಹಚ್ಚಿದೆ.
ಇಂದು ಬೆಳ್ಳಂಬೆಳಗ್ಗೆ 14 ಇಡಿ ಅಧಿಕಾರಿಗಳು 4 ಕಾರುಗಳಲ್ಲಿ ಆಗಮಿಸಿ ದಾಳಿ ನಡೆಸಿದ್ದಾರೆ. ಈಗಲೂ ದಾಖಲೆಗಳ ಪರಿಶೀಲನೆ ಮುಂದುವರೆದಿದೆ. ಅಶೋಕ ನಗರದಲ್ಲಿರುವ ಹ್ಯಾರಿಸ್ ನಿವಾಸ ಸೇರಿದಂತೆ 17 ಕಡೆ ಶೋಧ ನಡೆದಿದೆ.

Continue Reading
Advertisement
Latest44 minutes ago

ಮಹಿಳಾ ಮೀಸಲಾತಿಗೆ ಬೆಂಬಲ; ಡಿಲಿಮಿಟೇಷನ್‌ ಗೆ ವಿರೋಧ:ಸಿಎಂ ಸಿದ್ದರಾಮಯ್ಯ ಸಷ್ಟನೆ

Latest49 minutes ago

ಕುಮಾರಸ್ವಾಮಿಗೆ ಬೆಂಗಳೂರಿನ ಬಗ್ಗೆ ಅರಿವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌

Latest53 minutes ago

ಪ್ರಧಾನಿ ಮೋದಿ ಅವರನ್ನು ಭಯೋತ್ಪಾದಕ ಎಂದು ಟೀಕಿಸಿದ ಖರ್ಗೆ; ಕ್ಷಮೆ ಯಾಚನೆಗೆ ಯಡಿಯೂರಪ್ಪ ಆಗ್ರಹ

Latest1 hour ago

ಇಡಿ ದಾಳಿ: ನಳಪಾಡ್‌ ಫಸ್ಟ್‌ ರಿಯಾಕ್ಷನ್‌ ಏನಿತ್ತು? ಅವರು ಕೊಟ್ಟ ಸ್ಪಷ್ಟನೆ ಏನು?

Latest1 hour ago

ದಲಿತರಿಗೆ ಒಳ ಮೀಸಲಾತಿ: ಏ.24ರಂದು ವಿಶೇಷ ಸಂಪುಟ ಸಭೆ

Latest1 hour ago

“ಗ್ರೇಟರ್ ಇಸ್ರೇಲ್” ಸಾಕಾರಕ್ಕೆ ನೆತನ್ಯಾಹು ಬಿಗ್‌ ಪ್ಲಾನ್:‌ ಮಧ್ಯ ಪ್ರಾಚ್ಯದಲ್ಲಿ ಶಾಂತಿಗಿಲ್ಲ ನೆಲೆ

Latest2 hours ago

ಜೆಡಿಎಸ್‌ ಗೆ ಮರಳುತ್ತೀರಾ?; ಸಚಿವ ಜಮೀರ್‌ ಅಹಮದ್‌ ಕೊಟ್ಟ ಉತ್ತರ ಏನು?

Latest2 hours ago

ಬೇಸಿಗೆಯಲ್ಲೂ ಸಣ್ಣ ನೀರಾವರಿ ಕೆರೆಗಳಲ್ಲಿ ಸಮೃದ್ದ ನೀರು ಸಂಗ್ರಹ: ಸಚಿವ ಎನ್‌ ಎಸ್‌ ಭೋಸರಾಜು

Latest2 hours ago

ಗುಜರಾತ್‌ ನಲ್ಲಿ ಬೃಹತ್‌ ಸೈಬರ್‌ ವಂಚನೆ ಜಾಲ ಪತ್ತೆ: 2,500 ಕೋಟಿ ಹಣ ವಂಚನೆ

Latest3 hours ago

ಮಹಿಳಾ ಮೀಸಲಾತಿ ವಿರೋಧಿಸಿದ ಕಾಂಗ್ರೆಸ್‌ ವಿರುದ್ಧ ಸಿಎಂ ಯೋಗಿ ಆದಿತ್ಯನಾಥ ಆಕ್ರೋಶ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌