ಭೋಪಾಲ್: ಮದುವೆಯಾಗು ಎಂದು ಹೇಳಿದ 19 ವರ್ಷದ ಪ್ರೇಯಸಿ ಮೇಲೆಯೇ ಮೂರ್ಛೆ ಹೋಗುವಂತೆ ಹಲ್ಲೆ ಮಾಡಿದ್ದ (Man Thrashed Girlfriend) ಮಧ್ಯಪ್ರದೇಶದ ಪಂಕಜ್ ತ್ರಿಪಾಠಿ (24)ಯನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ, ಅಕ್ರಮವಾಗಿ ನಿರ್ಮಿಸಿದ್ದ ಆತನ ಮನೆಯನ್ನೂ ಬುಲ್ಡೋಜರ್ ಮೂಲಕ ಧ್ವಂಸಗೊಳಿಸಿದ್ದಾರೆ.
ಮಧ್ಯಪ್ರದೇಶದ ರೇವಾ ಜಿಲ್ಲೆ ಮೌಗಂಜ್ ಪ್ರದೇಶದಲ್ಲಿ ಡಿಸೆಂಬರ್ 21ರಂದು ಯುವತಿಯ ಮೇಲೆ ತ್ರಿಪಾಠಿ ಹಲ್ಲೆ ಮಾಡಿದ್ದ. ಮದುವೆಯಾಗು ಎಂದು ಹೇಳಿದ ಕಾರಣಕ್ಕೆ ಆಕೆಗೆ ಹೊಡೆದು, ತಲೆಗೆ ಒದ್ದಿದ್ದ. ಇದಾದ ಬಳಿಕ ಮೂರ್ಛೆ ಹೋದ ಆಕೆಯನ್ನು ಬಿಟ್ಟುಹೋಗಿದ್ದ. ಈ ವಿಡಿಯೊ ವೈರಲ್ ಆಗುತ್ತಲೇ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಯುವಕನ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದ್ದರು.
ಸಿಎಂ ಆದೇಶದ ಮೇರೆಗೆ ಪಂಕಜ್ ತ್ರಿಪಾಠಿಯನ್ನು ಬಂಧಿಸಲಾಗಿದೆ. ಆತ ಚಾಲಕನಾಗಿರುವುದರಿಂದ ಚಾಲನಾ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಹಾಗೆಯೇ, ಅಕ್ರಮವಾಗಿ ನಿರ್ಮಿಸಲಾಗಿರುವ ಆತನ ಮನೆಯನ್ನು ಜೆಸಿಬಿಯಿಂದ ಕೆಡವಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಚೌಹಾಣ್, “ಮಧ್ಯಪ್ರದೇಶದಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಯಾರನ್ನೂ ಬಿಡುವುದಿಲ್ಲ” ಎಂದಿದ್ದಾರೆ. ಮನೆ ಧ್ವಂಸಗೊಳಿಸುತ್ತಿರುವ ವಿಡಿಯೊವನ್ನೂ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ | Assault on woman | ರಸ್ತೆ ಮೇಲೆ ಹಾಕಿದ್ದ ಅಡಕೆ ಸಿಪ್ಪೆ ತೆಗೆದಿಲ್ಲ ಎಂದು ಜಗಳ ತೆಗೆದು ಮಹಿಳೆಯ ಮೇಲೆ ಹಲ್ಲೆ