ಚಿತ್ರದುರ್ಗ: ವಿವಾಹಿತೆ ಪರ ಸ್ತ್ರೀಯ ಜೊತೆಗೆ ಲಾಡ್ಜಿಗೆ ಹೋದ ವಿವಾಹಿತನೊಬ್ಬ (Illegal Relationship) ಸಂಶಯಾಸ್ಪದವಾಗಿ (UDR Case) ಸಾವಿಗೀಡಾಗಿದ್ದಾನೆ. ಚಿತ್ರದುರ್ಗ ನಗರದ ಸರ್ಕಾರಿ ಬಸ್ ನಿಲ್ದಾಣದ ಎದುರಿನ ಲಾಡ್ಜ್‌ನಲ್ಲಿ ಘಟನೆ ನಡೆದಿದೆ. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹರಿಹರ ಮೂಲದ ಗೋಪಾಲ ಟಿ. ಸಾವನ್ನಪ್ಪಿದ ದುರ್ದೈವಿ. ಈತ ವಿವಾಹಿತೆಯಾದ ಪರಸ್ತ್ರೀ ಪವಿತ್ರ ಎಂಬಾಕೆಯೊಂದಿಗೆ ಲಾಡ್ಜ್‌ಗೆ ಬಂದಿದ್ದ. ಪವಿತ್ರ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮೂಲದವಳು. ಕಳೆದ ಒಂದು ವರ್ಷದ ಹಿಂದೆ ಪವಿತ್ರ-ಗೋಪಾಲ ಪರಸ್ಪರ ಪರಿಚಯವಾಗಿದ್ದರು. ಕಳೆದ 6 ತಿಂಗಳಿಂದ ಪರಸ್ಪರ ದೈಹಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ.
ಗೋಪಾಲ ಕಳೆದ 5 ವರ್ಷದ ಹಿಂದೆ ದಾವಣಗೆರೆಯ ದುರ್ಗಮ್ಮ ಎಂಬವರನ್ನು ವಿವಾಹವಾಗಿದ್ದ. ಹೆಂಡತಿ ಇದ್ದರೂ ಪರಸ್ತ್ರೀ ಸಹವಾಸ ಬಿಡದ ಗೋಪಾಲ, ಪವಿತ್ರ ಜೊತೆಗೆ ಕಳೆದ ಜುಲೈ 4ರ ಮಧ್ಯಾಹ್ನ 3:11ಕ್ಕೆ ಲಾಡ್ಜ್‌ಗೆ ಬಂದಿದ್ದ. ಅದೇ ರಾತ್ರಿ ಲಾಡ್ಜಿನಲ್ಲೇ ಕುಸಿದು ಬಿದ್ದಿದ್ದ. ರಾತ್ರಿ 7:15ಕ್ಕೆ ಎದೆ ನೋವಿನಿಂದ ಕುಸಿದು ಬಿದ್ದಿದ್ದ ಎಂದು ಪವಿತ್ರ ತಿಳಿಸಿದ್ದಾಳೆ.
ಗೋಪಾಲ- ಪವಿತ್ರ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತ ಗೋಪಾಲ ಕುಟುಂಬ ಹೆಚ್ಚಿನ ತನಿಖೆಗೆ ಆಗ್ರಹಿಸಿದೆ. ಪೊಲೀಸರು ಪವಿತ್ರಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರೀತಿಸುವ ನಾಟಕವಾಡಿ ಕೈಕೊಟ್ಟ ಯುವಕನಿಗೆ ಚಳಿ ಬಿಡಿಸಿದ ಗರ್ಭಿಣಿ
ಚಿಕ್ಕಬಳ್ಳಾಪುರ: ಪ್ರಿಯಕರನೊಬ್ಬ ಪ್ರೀತಿಸುವ ನಾಟಕವಾಡಿ ಏಳು ತಿಂಗಳ ಗರ್ಭಿಣಿ ಮಾಡಿ ಕೈಕೊಟ್ಟಿರುವ (Lovers Fighting) ಘಟನೆ ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ನಡೆದಿದೆ. ನಡುರಸ್ತೆಯಲ್ಲೇ ಪ್ರೇಮಿಗಳು ರಂಪಾಟ ನಡೆಸಿದ್ದು, ಬಳಿಕ ಪರಿಸ್ಥಿತಿ ಹೊಡೆದಾಟ ಬಡೆದಾಟಕ್ಕೂ (Cheating Case) ಹೋಗಿದೆ. ಬಾಗೇಪಲ್ಲಿ ತಾಲೂಕಿನ ಮಲ್ಲಸಂದ್ರ ಗ್ರಾಮದ ನಿವಾಸಿಗಳಾದ ಸೂರ್ಯಪ್ರಕಾಶ್, ಗಗನ ಎಂಬುವವರ ರಂಪಾಟವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.
ಸೂರ್ಯಪ್ರಕಾಶ ಹಾಗೂ ಗಗನ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಗಗನ ಯಾವಾಗ ಮದುವೆ ವಿಷಯ ಪ್ರಸ್ತಾಪ ಮಾಡಿದ್ದಳೋ ಆಗ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದ. ಸೂರ್ಯಪ್ರಕಾಶ್ ಮದುವೆಯನ್ನು ನಿರಾಕರಿಸಿದಾಗ ಆತನ ವಿರುದ್ಧ ಗಗನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ದೂರು ದಾಖಲಾಗುತ್ತಿದ್ದಂತೆ ಸೂರ್ಯ ಪ್ರಕಾಶ್ ಪೋಷಕರು ಮದುವೆ ಮಾಡಿಸುವುದಾಗಿ ನಂಬಿಸಿ ಬೇಲ್ ಪೇಪರ್ ಮೇಲೆ ಸಹಿ ಮಾಡಿಸಿಕೊಂಡಿದ್ದರು. ಬೇಲ್ ಪಡೆದ ಬಳಿಕ ಪ್ರಿಯಕರನ ಪೋಷಕರು ಉಲ್ಟಾ ಹೊಡೆದಿದ್ದರು. ಇದರಿಂದ ರೋಸಿ ಹೋದ ಗಗನ ಮದುವೆಯಾಗುವಂತೆ ಸೂರ್ಯನನ್ನು ನಡುಬೀದಿಯಲ್ಲಿ ನಿಲ್ಲಿಸಿದ್ದಳು. ಪ್ರೇಮಿಗಳ ನಡುವಿನ ಮಾತಿನ ಚಕಮಕಿ ಹಾಗೂ ಪರಸ್ಪರ ಹೊಡೆದಾಟ ಬಡೆದಾಟವನ್ನು ಸ್ಥಳೀಯರು ವಿಡಿಯೊ ಮಾಡಿಕೊಂಡಿದ್ದರು.
ಇದನ್ನೂ ಓದಿ: Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!