Site icon Vistara News

Defrauding Apple | ಆ್ಯಪಲ್‌ ಕಂಪನಿಯಲ್ಲಿ ಕಳವು, ಲಂಚ, 140 ಕೋಟಿ ರೂ. ವಂಚನೆ ಒಪ್ಪಿಕೊಂಡ ಎನ್‌ಆರ್‌ಐ

Apple iPhone: Tata Group will assemble Apple's iPhone 15, iPhone 15 Plus

ವಾಷಿಂಗ್ಟನ್‌: ಟೆಕ್‌ ದಿಗ್ಗಜ ಆ್ಯಪಲ್‌ ಕಂಪನಿಗೆ ಸುಮಾರು 140 ಕೋಟಿ ರೂ. (17 ದಶಲಕ್ಷ ಡಾಲರ್) ವಂಚನೆ ಮಾಡಿದ್ದನ್ನು (Defrauding Apple) ಭಾರತ ಮೂಲದ (NRI) ಮಾಜಿ ಉದ್ಯೋಗಿ ಧೀರೇಂದ್ರ ಪ್ರಸಾದ್‌ ಒಪ್ಪಿಕೊಂಡಿದ್ದಾರೆ. ‌ಧೀರೇಂದ್ರ ಪ್ರಸಾದ್‌ ಅವರು ತಪ್ಪೊಪ್ಪಿಕೊಂಡ ಕಾರಣ ಅಮೆರಿಕದ ಫೆಡರಲ್‌ ನ್ಯಾಯಾಲಯವು ಅವರನ್ನು ದೋಷಿ ಎಂದು ತೀರ್ಪು ನೀಡಿದೆ.

52 ವರ್ಷದ ಧೀರೇಂದ್ರ ಪ್ರಸಾದ್‌, ಆ್ಯಪಲ್‌ ಕಂಪನಿಯಲ್ಲಿ 2008ರಿಂದ 2018ರವರೆಗೆ ಕಾರ್ಯನಿರ್ವಹಿಸಿದ್ದರು. ಇದೇ ವೇಳೆ ಅವರು, 2011ರಿಂದಲೂ ಲಂಚ ಪಡೆಯುವುದು, ಇನ್‌ವಾಯ್ಸ್‌ ಹೆಚ್ಚಿಸುವುದು, ಕಂಪನಿಗಳ ಹಲವು ಭಾಗಗಳನ್ನು ಕದ್ದು ಮಾರಾಟ ಮಾಡುವುದು, ಆ್ಯಪಲ್‌ ಕಂಪನಿಯ ಸೇವೆಗಳಿಗೂ ಶುಲ್ಕ ಪಡೆಯುವುದು ಸೇರಿ ವಿವಿಧ ರೀತಿಯಲ್ಲಿ ಕಂಪನಿಗೆ 140 ಕೋಟಿ ರೂ. ನಷ್ಟ ಮಾಡಿದ್ದಾರೆ. ಇದನ್ನು ನ್ಯಾಯಾಲಯದಲ್ಲಿಯೇ ಅವರು ಒಪ್ಪಿಕೊಂಡಿದ್ದಾರೆ.

ಧೀರೇಂದ್ರ ಪ್ರಸಾದ್‌ ಮಾತ್ರವಲ್ಲ, ಕ್ಯಾಲಿಫೋರ್ನಿಯಾ ನಿವಾಸಿಗಳಾದ ರಾಬರ್ಟ್‌ ಗ್ಯಾರಿ ಹನ್ಸೆನ್‌ ಹಾಗೂ ಡಾನ್‌ ಎಂ. ಬೇಕರ್‌ ಎಂಬುವರು ಕೂಡ ವಂಚನೆಯ ಪಿತೂರಿದಾರರಾಗಿದ್ದಾರೆ. ಇವರಿಬ್ಬರೂ ತಪ್ಪೊಪ್ಪಿಕೊಂಡಿದ್ದಾರೆ. ಮೂವರ ವಿರುದ್ಧ ಪ್ರತ್ಯೇಕ ಕೇಸ್‌ಗಳನ್ನು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಇವರಿಗೆ ಶಿಕ್ಷೆ ವಿಧಿಸುವ ಕುರಿತು 2023ರ ಮಾರ್ಚ್‌ 14ರಂದು ವಿಚಾರಣೆ ನಡೆಯಲಿದೆ.

ಇದನ್ನೂ ಓದಿ | Apple iPhone | ಚಾರ್ಜರ್‌ ಇಲ್ಲದೆ ಐಫೋನ್‌ ಮಾರಾಟಕ್ಕೆ, ಬ್ರೆಜಿಲ್‌ನಲ್ಲಿ ಆ್ಯಪಲ್‌ಗೆ ಬಿತ್ತು 156 ಕೋಟಿ ರೂ. ದಂಡ!

Exit mobile version