Site icon Vistara News

Instagram Love Story: ಮೂವರು ಗಂಡರ ಮುದ್ದಿನ ಹೆಂಡತಿ ಮೇಲೆ 2ನೇ ಗಂಡನ ದೂರು

instagram love story

ಚಿಕ್ಕಬಳ್ಳಾಪುರ: ಇನ್‌ಸ್ಟಾಗ್ರಾಂನಲ್ಲಿ ಲವ್‌ (Instagram Love Story) ಆಗಿ ಓಡಿಹೋಗುವ, ಇರುವ ಗಂಡನ/ಹೆಂಡತಿಯ ಬಿಟ್ಟು ಇನ್ನೊಬ್ಬನ/ಳ ಜೊತೆ ಪರಾರಿಯಾಗುವ (Elope) ಪ್ರಕರಣಗಳು ಹೆಚ್ಚುತ್ತಿವೆ. ಇದು ಅಂಥದೇ ಇನ್ನೊಂದು ಪ್ರಕರಣ. ಇದೂ ಕೂಡ ಇನ್‌ಸ್ಟಗ್ರಾಂನಲ್ಲಿ ಹುಟ್ಟಿಕೊಂಡ ಪ್ರೀತಿ ದಾಂಪತ್ಯವನ್ನು (Marriage) ಹಾಳು ಮಾಡಿದ ಕಥೆ. ಮೂವರು ಗಂಡರ ಮುದ್ದಿನ ಹೆಂಡತಿಯ ಪ್ರಕರಣದಲ್ಲಿ ಎರಡನೇ ಗಂಡ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾನೆ.

ಬೆಳಗಾವಿಯಲ್ಲಿ (Belagavi news) ಯುವತಿ ಇನ್‌ಸ್ಟಾಗ್ರಾಮ್‌ನಲ್ಲಿ ಲವ್ ಮಾಡಿ ಇನ್ನೊಬ್ಬನನ್ನು ಮದುವೆ ಆದ ಪ್ರಕರಣದಲ್ಲಿ ಇದೀಗ ಎರಡನೇ ಗಂಡನೇ ಪೋಲೀಸರಿಗೆ ದೂರು ನೀಡಿದ್ದಾನೆ. ಶಿಡ್ಲಘಟ್ಟದಲ್ಲಿ ದೂರು ದಾಖಲಾಗಿದೆ. ಯುವತಿ ಪ್ರಿಯಾಂಕ ಸುಳ್ಳು ಆರೋಪ ಮಾಡಿ ನನ್ನ ತೇಜೋವಧೆ ಮಾಡುತ್ತಿದ್ದಾಳೆ. ಆಕೆ ಕಾರು ಬಾಡಿಗೆ ಹೋಗಿದ್ದ ವೇಳೆ ಪರಿಚಯವಾಗಿದ್ದಳು. ಒಂದು ವಾರ ಫೋನ್‌ನಲ್ಲಿ ಮಾತನಾಡಿ ನಂತರ ನನ್ನ ಜೊತೆಯಲ್ಲಿ ಬಂದಳು. 8 ತಿಂಗಳಿನಿಂದ ನನ್ನ ಜೊತೆಯಲ್ಲಿ ಇದ್ದಳು ಎಂದು ಎರಡನೇ ಗಂಡ ದೂರಿದ್ದಾನೆ.

ಬೆಳಗಾವಿಗೆ ಸ್ನೇಹಿತೆಯ ಮದುವೆಯಿದೆ ಎಂದು ಹೇಳಿ ಹೋದಳು. ಸ್ವಂತ ಮಾವ ನನ್ನ ಕೂಡಿ ಹಾಕಿ ಕಿರುಕುಳ ನೀಡುತ್ತಿದ್ದ ಎಂದು ಆರೋಪ ಮಾಡಿದ್ದಾಳೆ‌. ಆ ಆರೋಪ‌ ಸುಳ್ಳು, ನಾನು ಅವರ ಸೋದರ ಮಾವ ಅಲ್ಲ. ನಮಗೂ ಅವರಿಗೂ ಯಾವುದೇ ರೀತಿ ಸಂಬಂಧ ಇಲ್ಲ. ನನ್ನ ಮದುವೆಗೂ ಮುನ್ನ ಆಕೆಯ ಮೊದಲೇ ಮದುವೆ ಆಗಿತ್ತು. ನನ್ನ ಜೊತೆಯಲ್ಲಿ ಬಂದಾಗ ಅವಳ ಮೊದಲನೇ ಗಂಡ ಮುನಿರಾಜು ಬಂದು ವಾಪಸ್ ಕರೆದುಕೊಂಡು ಹೋಗಿದ್ದರು. ಆಕೆ ಮತ್ತೆ ನಾನೇ ಬೇಕು ಎಂದು ವಾಪಸ್ ಬಂದಳು. ಆರೋಪ ಎಲ್ಲಾ ಸುಳ್ಳು ಎಂದು ಪ್ರಿಯಾಂಕ ವಿರುದ್ಧ ಎರಡನೇ ಗಂಡ ದೂರು ನೀಡಿದ್ದಾನೆ.

ಈಕೆ ಮೊದಲು ಚಿಕ್ಕಬಳ್ಳಾಪುರದ ಮುನಿರಾಜು ಎಂಬವರನ್ನು ಮದುವೆಯಾಗಿದ್ದಳು. ನಂತರ ಶಿಡ್ಲಘಟ್ಟದ ಸುಧಾಕರ್‌ ಜೊತೆಗೆ ಎರಡನೇ ಮದುವೆಯಾಗಿದ್ದಳು. ಈತನ ಜೊತೆಗೆ ಪ್ರೀತಿ ಇನ್‌ಸ್ಟಗ್ರಾಂ ಮೂಲಕ ಹುಟ್ಟಿಕೊಂಡದ್ದು ಎನ್ನಲಾಗಿತ್ತು. ಇದೀಗ ಬೆಳಗಾವಿ ಮೂಲದ ರೋಹಿತ್‌ ಎಂಬಾತನ ಜೊತೆಗೆ ಮೂರನೇ ಮದುವೆಯಾಗಿದೆ ಎನ್ನಲಾಗಿದೆ. ಈ ಪ್ರಕರಣದ ಬೆನ್ನು ಬಿದ್ದಿರುವ ಪೊಲೀಸರಿಗೆ ತಲೆ ಕೆಡುವ ಹಾಗೆ ಆಗುತ್ತಿದೆ.

ಬೆಂಗಳೂರಿನಲ್ಲಿ ಹಾಡಹಗಲೇ ರೌಡಿಶೀಟರ್‌ ಕೊಲೆ

ಬೆಂಗಳೂರು: ಹಾಡಹಗಲೆ ಯುವಕನ ಬರ್ಬರ ಹತ್ಯೆ (Murder case) ನಡೆದಿದೆ. ಬೆಂಗಳೂರಿನ ಶೇಷಾದ್ರಿ ಪುರಂ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲಿ ಘಟನೆ ನಡೆದಿದೆ. ಅಜಿತ್ ಕುಮಾರ್‌ (25) ಕೊಲೆಯಾದವನು.

ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ರಶಿಲ್ಲಾರ್ ಸ್ಟ್ರೀಟ್‌ನಲ್ಲಿ ಅಜಿತ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕೊಲೆಗೆ ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಭೇಟಿ ನೀಡಿದ್ದಾರೆ.

ಸ್ಥಳದಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ನಡೆದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಹಂತಕರಿಗಾಗಿ ಹುಡುಕಾಟ ನಡೆಸಿರುವ ಪೊಲೀಸರು, ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೊಲೆ ಕೇಸ್‌ನಲ್ಲಿ ಆರೋಪಿಯಾಗಿದ್ದ ಅಜಿತ್‌

ಬ್ಲಡ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಅಜಿತ್‌, 2022ರಲ್ಲಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಸಂಜೆ 4:15ರ ವೇಳೆಗೆ ಮನೆಯಿಂದ ಊಟ ಮುಗಿಸಿ ಹೊರಬಂದಿದ್ದ ಅಜಿತ್ ಮೇಲೆ ಏಕಾಏಕಿ ಹಂತಕರ ಗ್ಯಾಂಗ್‌ ಅಟ್ಯಾಕ್‌ ಮಾಡಿದೆ. ಮಚ್ಚು ಬೀಸಿದ ರಭಸಕ್ಕೆ ಅಜಿತ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಶೇಷಾದ್ರಿಪುರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಅಜಿತ್ ಹಾಗೂ ಸೋದರ ಕಾರ್ತಿಕ್ ಇಬ್ಬರು ಗಣೇಶ್ ಎಂಬಾತನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ಏರಿಯಾದಲ್ಲಿ ನಾನೇ ಡಾನ್ ಎಂದು ಅಜಿತ್‌ ಮೆರೆಯುತ್ತಿದ್ದ. ಸಮಯ ಕಾದು ನೋಡಿ ಎದುರಾಳಿಗಳು ಸೇಡು ತೀರಿಸಿಕೊಂಡಿದ್ದಾರೆ.

ಇದನ್ನೂ ಓದಿ: Road Accident : ಬೆಂಗಳೂರಲ್ಲಿ ಮಳೆಗೆ ಬೈಕ್‌ ಸವಾರ ಬಲಿ; ಕಂಟ್ರೋಲ್‌ ತಪ್ಪಿ ಬಿದ್ದವನ ಮೇಲೆ ಹರಿದ ವಾಹನಗಳು!

Exit mobile version