ನವ ದೆಹಲಿ: ಬಹುಕೋಟಿ ವಂಚನೆ ಪ್ರಕರಣದಲ್ಲಿ ಇದುವರೆಗೂ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರನ್ನು ಯಾಕೆ ಬಂಧಿಸಿಲ್ಲ ಎಂದು ಜಾರಿ ನಿರ್ದೇಶನಾಲಯವನ್ನು ದಿಲ್ಲಿ ವಿಶೇಷ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.
ವಂಚಕ ಸುಕೇಶ್ನಿಂದ ಕೋಟ್ಯಂತರ ರೂಪಾಯಿ ಗಿಪ್ಟ್ ಪಡೆದಿರುವ ಆರೋಪ ಹೊತ್ತಿರುವ ನಟಿ ವಂಚನೆ ಪ್ರಕರಣದಲ್ಲಿ ಸಹ ಆರೋಪಿಯಾಗಿದ್ದಾರೆ. ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ 200 ಕೋಟಿ ವಂಚನೆ ಪ್ರಮುಖ ಆರೋಪಿ. ನಟಿ ಜಾಕ್ವೆಲಿನ್ ಈತನಿಂದ ಕೋಟ್ಯಂತರ ಬೆಲೆಯ ಗಿಫ್ಟ್ಗಳನ್ನು ಪಡೆದದ್ದು ರುಜುವಾತಾಗಿದೆ. ಬಾಕಿ ಉಳಿದ ಆರೋಪಿಗಳನ್ನು ಬಂಧಿಸಿ ನಟಿಯನ್ನು ಮಾತ್ರ ಯಾಕೆ ಬಿಡಲಾಗಿದೆ? ಆರೋಪಿಗಳ ಬಂಧನಕ್ಕೆ ಯಾಕೆ ತಾರತಮ್ಯ ಎಂದು ದಿಲ್ಲಿ ವಿಶೇಷ ನ್ಯಾಯಾಲಯ ಇಡಿಗೆ ತರಾಟೆ ತೆಗೆದುಕೊಂಡಿದೆ.
ಇದನ್ನೂ ಓದಿ | Jacqueline Boyfriend | ದಿಲ್ಲಿ ಸಚಿವ ಜೈನ್ಗೆ ಜಾಕ್ವೆಲಿನ್ ಬಾಯ್ಫ್ರೆಂಡ್ನಿಂದ 10 ಕೋಟಿ ರೂ. ಪ್ರೊಟೆಕ್ಷನ್ ಮನಿ!