Site icon Vistara News

IPs Officer: ಮಹಿಳೆ ಜೊತೆಗೆ ಅನುಚಿತ ವರ್ತನೆ, ಕರ್ನಾಟಕದ ಐಪಿಎಸ್‌ ಅಧಿಕಾರಿ ತಮಿಳುನಾಡಿನಲ್ಲಿ ಬಂಧನ

IPS Arun arrested

ಕಲಬುರಗಿ: ಮಹಿಳಾ ಪೊಲೀಸ್ ಸಿಬ್ಬಂದಿ ಜೊತೆಗೆ ಅನುಚಿತವಾಗಿ ವರ್ತಿಸಿದ (inappropriate behaviour) ಹಿನ್ನೆಲೆಯಲ್ಲಿ ಕರ್ನಾಟಕದ ಐಪಿಎಸ್ ಅಧಿಕಾರಿಯೊಬ್ಬರನ್ನು ತಮಿಳುನಾಡಿನಲ್ಲಿ (IPs Officer detained) ಬಂಧಿಸಲಾಗಿದೆ.

ಐಪಿಎಸ್‌ ಅಧಿಕಾರಿ ಅರುಣ್ ರಂಗರಾಜನ್ ಕಿರಿಕ್‌ ಮಾಡಿಕೊಂಡಿದ್ದು, ತಮಿಳುನಾಡಿನ ಗೋಬಿ ಪೊಲೀಸ್ ಠಾಣೆಯಲ್ಲಿ ಅರುಣ್‌ ವಿರುದ್ಧ ಜಿಲ್ಲೆಯ ಮಹಿಳಾ ಪೊಲೀಸ್ ಒಬ್ಬರು ದೂರು ದಾಖಲು ಮಾಡಿದ್ದರಿಂದ ಐಪಿಎಸ್ ಅಧಿಕಾರಿಯನ್ನು ತಮಿಳುನಾಡು ಪೊಲೀಸರು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕದ ಅರುಣ್ ರಂಗರಾಜನ್ ಬಂಧಿತ ಅಧಿಕಾರಿ ಎಂದು ಹೇಳಲಾಗುತ್ತಿದ್ದು, ದೂರು ನೀಡಿದ ಮಹಿಳೆ ಚಿಂಚೋಳಿ ತಾಲೂಕಿನ ಪೊಲೀಸ್ ಠಾಣೆಯೊಂದರಲ್ಲಿ ಕಾರ್ಯ ನಿರ್ವಹಿಸುವವರು ಎಂದು ಮೂಲಗಳು ತಿಳಿಸಿವೆ. ಕೆಲವು ದಿನಗಳ ಹಿಂದೆ ಈ ಮಹಿಳೆ ಜತೆ ಐಪಿಎಸ್ ಅಧಿಕಾರಿ ಅರುಣ ರಂಗರಾಜನ್ ತಮಿಳುನಾಡಿನ ತಿರುಚ್ಚಿಗೆ ತೆರಳಿದ್ದರು. ಈ ವೇಳೆ ಅವರಿಬ್ಬರ ಮಧ್ಯೆ ಜಗಳವಾಗಿದೆ. ಸ್ಥಳೀಯ ಪೊಲೀಸರು ರಾಜಿ ಮಾಡಿ ಕಳಿಸಿದ್ದರು.

ಅರುಣ್ ಅವರು ತಮ್ಮ ಹುಟ್ಟೂರು ತಿರುಚ್ಚಿಯ ಶ್ರೀರಂಗಂಗೆ ತಮ್ಮನ್ನು ಕರೆದೊಯ್ದಿದ್ದು, ಹಲ್ಲೆ ನಡೆಸಿದ್ದಾರೆ ಎಂದು ಕಲಬುರಗಿ ಮಹಿಳಾ ಪೊಲೀಸ್‌ ಗೋಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರನ್ವಯ ಅರುಣ್ ಅವರನ್ನು ಬಂಧಿಸಲಾಗಿತ್ತು.

ಕಲಬುರಗಿಯಲ್ಲಿ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ತಮ್ಮ ಪತ್ನಿಯನ್ನು ಅಕ್ರಮವಾಗಿ ಬಂಧನಲ್ಲಿಟ್ಟುಕೊಂಡು ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಮಹಿಳೆಯ ಪತಿ ಕಳೆದ
ಮಾರ್ಚ್‌ನಲ್ಲಿ ದೂರು ದಾಖಲು ಮಾಡಿದ್ದರು. ಈ ಕುರಿತು ಸ್ಟೇಷನ್ ಬಜಾರ್ ಠಾಣೆಯ ಪಿಐ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Budget 2024: ದೇಶ ಒಡೆಯುವ ಕೂಗು; ಡಿ.ಕೆ.ಸುರೇಶ್‌ರನ್ನು ಕಾಂಗ್ರೆಸ್‌ ವಜಾಗೊಳಿಸಲಿ ಎಂದ ಪ್ರಲ್ಹಾದ್‌ ಜೋಶಿ

Exit mobile version