ಭೋಪಾಲ್: ನಟ ಯಶ್ ಅಭಿನಯದ ಕೆಜಿಎಫ್ 2 ಕನ್ನಡ ಸಿನಿಮಾ ಸಾವಿರ ಕೋಟಿ ರೂ. ಗಳಿಸಿ ದಾಖಲೆ ಮಾಡಿದೆ. ಆದರೆ, ಇದೇ ಸಿನಿಮಾ ದುರಂತಕ್ಕೂ ಕಾರಣವಾಗಿದೆ! ಕರೆಕ್ಟ್ ನೀವು ಓದುತ್ತಿರುವುದು ನಿಜ, ರಾತ್ರೋರಾತ್ರಿ ಫೆಮಸ್ ಆಗಬೇಕು ಎಂಬ ಕಾರಣಕ್ಕೆ, ಕೆಜಿಎಫ್ ಸಿನಿಮಾದಿಂದ ಪ್ರೇರಿತನಾದ ವ್ಯಕ್ತಿಯೊಬ್ಬ ಐವರು ಸೆಕ್ಯುರಿಟಿ ಗಾರ್ಡ್ಗಳನ್ನು ಕೊಲೆ ಮಾಡಿದ್ದಾನೆ. ಈ ಭೀಭತ್ಸ ಕೊಲೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. 19 ವರ್ಷದ ಯುವಕ ಶಿವಪ್ರಸಾದ್ ಸೀರಿಯಲ್ (Serial Killer) ಕಿಲ್ಲರ್ ಆಗಿ ಬದಲಾಗಿದ್ದಾನೆ.
ಶುಕ್ರವಾರ ಬೆಳಗ್ಗೆ ಈ ಸೀರಿಯಲ್ ಕಿಲ್ಲರ್ ಶಿವಪ್ರಸಾದ್ನನ್ನು ಭೋಪಾಲ್ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಸೆಕ್ಯುರಿಟಿ ಗಾರ್ಡ್ಗಳನ್ನು ಕೊಲೆ ಮಾಡಿ ಅವರ ಬಳಿ ಮೊಬೈಲ್ಫೋನ್ಗಳನ್ನು ತೆಗೆದುಕೊಳ್ಳುತ್ತಿದ್ದ ಎದು ಪೊಲೀಸರು ಹೇಳಿದ್ದಾರೆ.
ಪಾತಕಿ ಶಿವಪ್ರಸಾದ್ ಮಾಡುವ ಕೋಲ್ಡ್ ಬ್ಲಡೆಡ್ ಮರ್ಡರ್ ಸಿಸಿಟಿವಿಗಳಲ್ಲಿ ಸೆರೆಯಾಗಿದೆ. ಶಾರ್ಟ್ಸ್ ಮತ್ತು ಶರ್ಟ್ಸ್ ಹಾಕಿಕೊಂಡಿರುವ ಕಿಲ್ಲರ್ ಕಲ್ಲಿನಿಂದ, ನಿದ್ರೆಯಲ್ಲಿರುವ ಸೆಕ್ಯುರಿಟಿ ಗಾರ್ಡ್ಗಳನ್ನು ಜಜ್ಜಿ ಕೊಲೆ ಮಾಡುತ್ತಿರುವ ಭೀಭತ್ಸ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಲೆಯಾದ ಬಳಿಕ, ಯಾರೂ ತನ್ನನ್ನು ಗಮನಿಸಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡು ಪರಾರಿಯಾಗುವ ದೃಶ್ಯಗಳು ಸೆರೆಯಾಗಿವೆ.
ನೆಕ್ಸ್ಟ್ ಟಾರ್ಗೆಟ್ ಪೊಲೀಸ್!
ವಿಚಾರಣೆ ವೇಳೆ ಸೀರಿಯಲ್ ಕಿಲ್ಲರ್ ಶಿವಪ್ರಸಾದ್ ಬಾಯಿ ಬಿಟ್ಟ ಮಾಹಿತಿಯಿಂದ ಸ್ವತಃ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ನಾಲ್ವರು ಸೆಕ್ಯುರಿಟಿ ಗಾರ್ಡ್ಗಳನ್ನು ಕೊಂದಿರುವ ಈ ಕಿಲ್ಲರ್ವ ನೆಕ್ಸ್ಟ್ ಟಾರ್ಗೆಟ್ ಪೊಲೀಸರಾಗಿದ್ದರಂತೆ! ಬಹುಶಃ ಶುಕ್ರವಾರ ಬೆಳಗ್ಗೆ ಅರೆಸ್ಟ್ ಆಗದೇ ಹೋಗಿದ್ದರೆ ಇಷ್ಟೊತ್ತಿಗೆ ಪೊಲೀಸರು ಹೆಣಗಳು ಬೀಳುತ್ತಿದ್ದವು.
ಕಿಲ್ಲರ್ ಶಿವಪ್ರಸಾದ್, ಸಾಗರದಲ್ಲಿ ಮೂರು ರಾತ್ರಿಗಳಲ್ಲಿ ನಾಲ್ವರು ಸೆಕ್ಯುರಿಟಿ ಗಾರ್ಡ್ಗಳನ್ನು ಕೊಲೆ ಮಾಡಿದ್ದಾನೆ. ಕೊನೆಯ ಕೊಲೆಯನ್ನು ಭೋಪಾಲ್ನಲ್ಲಿ ನಡೆಸಿದ್ದಾನೆ. ತಾಬಡ್ತೋಬಡ್ ಫೇಮಸ್ಸು ಆಗಬೇಕೆಂಬ ಕಾರಣ ಬಿಟ್ಟರೆ ಈ ಕೊಲೆ ಮಾಡಲು ಆತನಿಗೆ ಬೇರೆ ಯಾವುದೇ ಉದ್ದೇಶಗಳೇ ಇರಲಿಲ್ಲ ಎಂಬುದು ಪೊಲೀಸ್ ವಿಚಾರಣೆಯಲ್ಲಿ ಗೊತ್ತಾಗಿದೆ. ಕಿಲ್ಲರ್ ಮಾಡುತ್ತಿದ್ದ ಕೊಲೆ ರೀತಿ ಹಾಗೂ ಕೊಲೆಗೆ ಬಳಸುತ್ತಿದ್ದ ಆಯುಧ ಕಲ್ಲು ಆದ್ದರಿಂದ ಜನರು ಆತನನ್ನು ಸ್ಟೋನ್ಮನ್ ಕಿಲ್ಲರ್ ಎಂದು ಕರೆಯುತ್ತಿದ್ದಾರೆ. ಆತ ರಾತ್ರಿ ವೇಳೆ ಮಾತ್ರವೇ ಕೊಲೆ ಮಾಡುತ್ತಿದ್ದ.
ಇದನ್ನೂ ಓದಿ | Sonali Phogat | ಸಿಬಿಐ ಹೆಗಲೇರಿದ ಸೋನಾಲಿ ಫೋಗಟ್ ಕೊಲೆ ತನಿಖೆ