ಬೆಂಗಳೂರು: ಕೋರಮಂಗಲದ ಪಿಜಿಯೊಂದರಲ್ಲಿ (Murder in PG) ನಡೆದ ಕೃತಿ ಕುಮಾರಿ ಎಂಬ ಯುವತಿಯ ಮರ್ಡರ್ (Krithi Kumari Murder Case) ವಿಡಿಯೋ ಸಿಸಿಟಿವಿಯಲ್ಲಿ (CCTV Footage) ಲಭ್ಯವಾಗಿದ್ದು, ಇದೀಗ ವೈರಲ್ (Viral video) ಆಗಿದೆ. ಯುವತಿ ರಕ್ತದ ಮಡುವಿನಲ್ಲಿ ಬಿದ್ದು ಸಹಾಯಕ್ಕಾಗಿ (Help) ಆರ್ತನಾದ ಮಾಡುತ್ತಿದ್ದರೂ ಅಲ್ಲಿದ್ದ ಇತರ ಯುವತಿಯರು ಆಕೆಯ ಸಹಾಯಕ್ಕೆ ಬರದೆ ತಮ್ಮಷ್ಟಕ್ಕೇ ಹೋಗಿದ್ದುದು ಕೂಡ ಈ ವಿಡಿಯೋದಲ್ಲಿ ದಾಖಲಾಗಿದೆ.
ಜು.23ರಂದು ಕೋರಮಂಗಲದ ಪಿಜಿಯಲ್ಲಿ ಕೃತಿ ಕುಮಾರಿ ಕೊಲೆ ನಡೆದಿತ್ತು. ಆರೋಪಿ ಅಭಿಷೇಕ್ ಕೃತಿ ಕುಮಾರಿಯನ್ನು ಎರಡೇ ನಿಮಿಷದಲ್ಲಿ ಕೊಲೆಮಾಡಿ ಪರಾರಿಯಾಗಿದ್ದಾನೆ. ಕತ್ತು, ಎದೆ, ಹೊಟ್ಟೆ ಭಾಗ ಸೇರಿ ಹಲವು ಕಡೆ ಇರಿದಿದ್ದಾನೆ. ಕತ್ತನ್ನು ಕೋಳಿ ಕತ್ತಿನಂತೆ ಕೊಯಿದಿದ್ದಾನೆ. ಮೊದಲು ಪಿಜಿ ರೂಮಿನ ಬಾಗಿಲು ಬಡಿದ ಕೊಲೆಗಾರ, ಆಕೆ ಬಾಗಿಲು ತೆರೆದ ಕೂಡಲೇ ಒಳಹೋಗಿದ್ದಾನೆ. ನಂತರ ಕೆಲವು ಸೆಕೆಂಡ್‌ನಲ್ಲಿ ಆಕೆ ಆತನಿಂದ ಪಾರಾಗಲು ಹೊರಗೋಡಿ ಬಂದಿದ್ದು, ಆಕೆಯನ್ನು ಕಾರಿಡಾರ್‌ನಲ್ಲೇ ತಡೆದ ಪಾತಕಿ ಮನಬಂದಂತೆ ಇರಿದಿದ್ದಾನೆ.
ಪ್ರಾಣ ಉಳಿಸಿಕೊಳ್ಳಲು ಕೃತಿ ಕುಮಾರಿ ಒದ್ದಾಡಿದ್ದಾಳೆ. ರಕ್ತದ ಮಡುವಿನಲ್ಲಿದ್ದ ಕೃತಿ ಕುಮಾರಿ ಆರ್ತನಾದ ಮಾಡಿದರೂ ಪಿಜಿಯಲ್ಲಿದ್ದ ಮೂವರು ಯುವತಿಯರು ಮಾತ್ರ ಹತ್ತಿರ ಬಂದಿಲ್ಲ. ಮಾನವೀಯತೆಯನ್ನೇ ಮರೆತಂತೆ ವರ್ತಿಸಿದ ಇವರು ಕೃತಿ ಕುಮಾರಿಯ ಹತ್ತಿರ ಕೂಡ ಹೋಗಿಲ್ಲ. ಕೈಯಲ್ಲಿದ್ದ ಮೊಬೈಲ್ ಫೋನ್ ನೋಡ್ತಾ ಆಚೆ ಹೋಗಿದ್ದಾರೆ. ಈ ಎಲ್ಲಾ ದೃಶ್ಯಗಳು ಪಿಜಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಅಭಿಷೇಕ್‌ಗಾಗಿ ಹುಡುಕಾಟ ಆರಂಭಿಸಿದ್ದಾರೆ. ಕೊಲೆಮಾಡಿದ ಬಳಿಕ ಆರೋಪಿ ಅಭಿಷೇಕ್ ಬಟ್ಟೆ ಬದಲಿಸಿಕೊಂಡು ಪರಾರಿಯಾಗಿದ್ದಾನೆ. ಆತ ಭೋಪಾಲ್‌ಗೆ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಕೋರಮಂಗಲ ಪೊಲೀಸರು ಆರೋಪಿಯನ್ನ ಆರೆಸ್ಟ್ ಮಾಡಲು ಭೋಪಾಲ್‌ಗೆ ತೆರಳಿದ್ದಾರೆ.
ಯಾರು ಕೊಲೆಗಾರ?
ʼʼಕೃತಿ ಕುಮಾರಿ ತಾನು ಪ್ರೀತಿಸುತ್ತಿದ್ದ ಯುವಕನಿಂದಲೇ ಕೊಲೆಯಾಗಿದ್ದಾರೆ. ರಾತ್ರಿ 11:30ಕ್ಕೆ ಕೃತಿ ಕುಮಾರಿಯೇ ಯುವಕನನ್ನು ಕರೆದುಕೊಂಡು ಬಂದಿರುವ ಬಗ್ಗೆ ಮೇಲ್ನೋಟಕ್ಕೆ ಮಾಹಿತಿ ಸಿಕ್ಕಿದೆ. ಪಿಜಿಯಿಂದ ಹೊರ ಬಂದ ಕೃತಿ ತನ್ನ ಪ್ರಿಯತಮನ ಜತೆ ರಾತ್ರಿ ಊಟ ಮಾಡಿದ್ದರು. ಊಟ ಮುಗಿಸಿದ ಕೃತಿ ತನ್ನೊಂದಿಗೆ ಯುವಕನ್ನು ಪಿಜಿಗೆ ಕರೆತಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆʼʼ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೃತಿಯ ರೂಂಗೆ ಆಗಮಿಸಿದ್ದ ವೇಳೆ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ಇದೆ. ಕೊರಮಂಗಲ ಪೊಲೀಸರು ಸದ್ಯ ಆರೋಪಿಯ ಮಾಹಿತಿ ಕಲೆ ಹಾಕುತ್ತಿದ್ದಾರೆ. ಎರಡು ದಿನದ ಹಿಂದೆಯಷ್ಟೇ ಕೃತಿ ಪಿಜಿಗೆ ಸೇರಿದ್ದರು. ಆಕೆ ಪಿಜಿಗೆ ಆಗಮಿಸುವ ವೇಳೆಯೂ ಈ ಯುವಕ ಲಗೇಜ್ ತೆಗದುಕೊಂಡು ಬಂದಿದ್ದ. ಆಗ ಯುವಕನನ್ನು ಒಳ ಬಿಡುವುದಿಲ್ಲ ಎಂದು ಪಿಜಿ ಸೆಕ್ಯೂರಿಟಿ ತಡೆದಿದ್ದರು. ಪಿಜಿ ಸೆಕ್ಯುರಿಟಿ ಬಳಿ, ಆತ ತನ್ನ ಸಹೋದರ ಎಂದು ಹೇಳಿ ಬೇಗ ಕಳುಹಿಸುತ್ತೇನೆ ಎಂದು ಕೃತಿ ಒಳ ಕರೆದುಕೊಂಡು ಹೋಗಿದ್ದರು ಎನ್ನಲಾಗಿದೆ.
ಇದನ್ನೂ ಓದಿ: Murder Case: ಲೇಡಿಸ್ ಪಿಜಿಗೆ ನುಗ್ಗಿ ಯುವತಿಯ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್; ಪ್ರಿಯತಮನೇ ಕೊಲೆಗಾರ