ಮಂಗಳೂರು: ನನಗೆ ಅವಳ ಜತೆಗೆ ಯಾವ ಸಂಬಂಧವೂ ಇಲ್ಲ (I dont have relationship with her). ಇವರೆಲ್ಲ ಸುಮ್ಮನೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಹೀಗೆ ಇವರ ಕೈಯಲ್ಲಿ ಹೇಳಿಸಿಕೊಂಡು ಬದುಕುವುದಕ್ಕಿಂತ ಸಾಯುವುದೇ ಮೇಲು: ಹೀಗೆಂದು ಮೊಬೈಲ್ನಲ್ಲಿ ಲೈವ್ ವಿಡಿಯೊ (Live Self Harming) ಮಾಡುತ್ತಾ ವಿಷ ಸೇವಿಸಿದ್ದಾನೆ ಒಬ್ಬ ಯುವಕ. ಇದೀಗ ಆತ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೀಗೆ ಅವನು ಹೇಳುವಾಗ ಮೂರ್ನಾಲ್ಕು ಮಂದಿ ಸುತ್ತ ನಿಂತಿದ್ದಾರೆ.
ಈ ಲೈವ್ ಆಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುವ ಘಟನೆ ನಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಟ್ಟತ್ತಾರಿನಲ್ಲಿ. ಇಲ್ಲಿನ ನಿವಾಸಿ ಅಬ್ದುಲ್ ನಾಸಿರ್ ಅವರೇ ಆತ್ಮಹತ್ಯೆಗೆ ಯತ್ನಿಸಿದವರು. ವಿಷ ಕುಡಿದಿರುವ ಅವರು ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅವರು ವೃತ್ತಿಯಲ್ಲಿ ಚಾಲಕರಾಗಿದ್ದು, ವಾಹನವೊಂದರಲ್ಲಿ ಕುಳಿತು ಅಳುತ್ತಾ, ಬ್ಯಾರಿ ಭಾಷೆಯಲ್ಲಿ ತನ್ನ ಕಷ್ಟವನ್ನು ಹೇಳಿಕೊಂಡು ಆತ್ಮಹತ್ಯೆ ಪ್ರಯತ್ನ ಮಾಡಿದ್ದಾರೆ.
ಏನಿದು ವಿವಾದ? ಯಾಕೆ ಆತ್ಮಹತ್ಯೆ ಯತ್ನ?
ನಾನು ಸಾಯುತ್ತೇನೆ, ಆದರೆ ಸಾಯುವ ಮೊದಲು ನಾನು ಯಾಕೆ ಸಾಯುತ್ತಿದ್ದೇನೆ ಎಂದು ಹೇಳಿ ಸಾಯುತ್ತೇನೆ ಎಂದು ನಾಸಿರ್ ಹೇಳಿದ್ದಾರೆ.
ಇಲ್ಲಿನ ಅದ್ರಾಮ ಎಂಬವರ ಮನೆಯಲ್ಲಿ ಅಬ್ದುಲ್ ನಾಸಿರ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಮನೆ ಮಂದಿ ಜತೆ ಉತ್ತಮ ಬಾಂಧವ್ಯ ಹೊಂದಿರುವ ನಾಸಿರ್ನ ಮೇಲೆ ಆ ಮನೆಯ ವಿವಾಹಿತ ಹೆಣ್ಮಗಳೊಬ್ಬಳ ಜತೆ ಅವನಿಗೆ ಸಂಬಂಧವಿದೆ ಎಂಬ ಸುದ್ದಿ ಹರಡುತ್ತದೆ. ಮನೆಯವರು ಅಬ್ದುಲ್ ನಾಸಿರ್ ಮೇಲೆ ಹಲ್ಲೆ ನಡೆಸಿ ವಿಚಾರಣೆ ನಡೆಸುತ್ತಾರೆ. ಈ ವಿಚಾರವನ್ನು ಉಲ್ಲೇಖಿಸುತ್ತಾ ನಾಸಿರ್ ಇದಕ್ಕಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎನ್ನುತ್ತಾನೆ.
ಇದನ್ನೂ ಓದಿ: Physical Abuse: ಲೈಂಗಿಕ ದೌರ್ಜನ್ಯ ಎಸಗುವ ಮೊದ್ಲು ಬಾಲಕಿಗೆ ಡ್ರಗ್ಸ್ ನೀಡುತ್ತಿದ್ದ ಕಾಮುಕ ಅಧಿಕಾರಿ!
ʻʻಅದ್ರಾಮ ಮತ್ತು ಅವನ ಕುಟುಂಬಸ್ಥರೇ ನನ್ನ ಸಾವಿಗೆ ಕಾರಣ. ನನಗೆ ಅದ್ರಾಮನ ಕುಟುಂಬದ ಮಹಿಳೆಯ ಜೊತೆಗೆ ಸಂಬಂಧ ಇದೆಯೆಂದು ಹೇಳಿ ಹಲ್ಲೆ ಮಾಡಿದ್ದಾರೆ. ನನಗೆ ಯಾವುದೇ ಹುಡುಗಿಯ ಸಂಬಂಧ ಇಲ್ಲ, ಆಕೆಯ ಗಂಡನೇ ಈ ಕಾರಿನಲ್ಲಿದ್ದಾನೆʼʼ ಎಂದು ಆತ ಹೇಳುತ್ತಾನೆ.
ಕಾರಿನಲ್ಲಿರುವ ಇತರ ನಾಲ್ವರನ್ನು ತೋರಿಸಿ ಆತ ನೇಣಿಗೆ ಶರಣಾಗುತ್ತೇನೆಂದು ಹೇಳಿ ವಿಡಿಯೋ ಸ್ಟಾಪ್ ಮಾಡಲಾಗಿದೆ. ಬಳಿಕ ವಿಷ ಕುಡಿದಿರುವ ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಆತ ಚಿಂತಾಜನಕ ಸ್ಥಿತಿಯಲ್ಲಿದ್ದಾನೆ ಎಂದು ಹೇಳಲಾಗಿದೆ.