Site icon Vistara News

Lokayukta Raid : ನೀರಾವರಿ ಇಲಾಖೆ ಎಂಜಿನಿಯರ್‌ ರಘುಪತಿ ಭವ್ಯ ಬಂಗಲೆಯಲ್ಲಿ ಕೋಟಿ ಬಾಳುವ ವುಡನ್‌ ಡಿಸೈನ್‌!

Lokayukta raid at Mysore

Lokayukta raid at Mysore on house of Irrigation department Engineer Raghupati

ಮೈಸೂರು: ರಾಜ್ಯದಲ್ಲಿ ಗುರುವಾರ ದೊಡ್ಡ ಪ್ರಮಾಣದ ಲೋಕಾಯುಕ್ತ ದಾಳಿ (Lokayukta Raid) ನಡೆದಿದೆ. ಕುಶಾಲ ನಗರದಲ್ಲಿ (Raid at Kushalanagara) ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ರಘುಪತಿ (Irrigation dept Executive Engineer Raghupati) ಅವರ ಮೈಸೂರಿನ ಮನೆ ಮತ್ತು ಮಡಿಕೇರಿಯಲ್ಲಿರುವ ಇಲಾಖಾ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ರಘುಪತಿ ಅವರ ನಿವಾಸದಲ್ಲಿ ಶೋಧ ಮತ್ತು ಲೆಕ್ಕಾಚಾರ

ರಘುಪತಿ ಅವರಿಗೆ ಸೇರಿದ ಮೈಸೂರಿನ ವಿಜಯನಗರದ 4ನೇ ಹಂತದಲ್ಲಿರುವ ಭವ್ಯ ಬಂಗಲೆ ಮತ್ತು ಇತರೆ ಆಸ್ತಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿದೆ. ಇವರು ಹಾರಂಗಿ ಡ್ಯಾಂ ಅಧೀಕ್ಷಕರಾಗಿದ್ದಾರೆ.

ಡಿವೈಎಸ್‌ಪಿ ಮಾಲತೇಶ್, ಇನ್ಸ್‌ಪೆಕ್ಟರ್ ಉಮೇಶ್, ಜಯರತ್ನ, ರೂಪಾ ಅವರನ್ನು ಒಳಗೊಂಡ ಲೋಕಾಯುಕ್ತ ತಂಡ ಎರಡು ಜೀಪ್‌ಗಳಲ್ಲಿ ಆಗಮಿಸಿದ್ದು ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಮನೆಯಲ್ಲಿ ನಗದು ಹಾಗೂ ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಪತ್ತೆಯಾಗಿದೆ. ಬೆಲೆ ಬಾಳುವ ಬ್ರಾಂಡೆಡ್ ವ್ಯಾನಿಟಿ ಬ್ಯಾಗ್‌ಗಳು ಕೂಡಾ ಸಿಕ್ಕಿವೆ.

ಕೋಟಿ ಬಾಳುವ ವುಡನ್‌ ಡಿಸೈನ್‌!

ಮೈಸೂರಿನ ವಿಜಯನಗರದಲ್ಲಿರುವ ಪತ್ನಿಯ ಕಡೆಯಿಂದ ಬಂದಿರುವ ಜಮೀನಿನಲ್ಲಿ ಭವ್ಯ ಬಂಗಲೆಯನ್ನು (Palacious house) ರಘುಪತಿ ಅವರು ಕಟ್ಟಿಸಿದ್ದಾರೆ. ಈ ಮನೆಯಲ್ಲಿ ಭಾರಿ ಪ್ರಮಾಣದ ಚಿನ್ನಾಭರಣಗಳು, ಆಸ್ತಿಪತ್ರಗಳು ಪತ್ತೆಯಾಗಿವೆ. ಇಲ್ಲಿ ಸಿಕ್ಕಿರುವ ಚಿನ್ನಾಭರಣಗಳ ಮತ್ತು ಬೆಳ್ಳಿಯ ವಸ್ತುಗಳ ಒಟ್ಟಾರೆ ಮೌಲ್ಯವನ್ನು ಲೆಕ್ಕ ಹಾಕಲು ಅಕ್ಕಸಾಲಿಗರನ್ನು ಕರೆಸಲಾಗಿದೆ.

ರಘುಪತಿ ಅವರ ಮನೆಯಲ್ಲಿರುವ ವೈಭವೋಪೇತ ಇಂಟೀರಿಯರ್‌ ಡಿಸೈನ್‌

ರಘುಪತಿ ಅವರ ಭವ್ಯ ಬಂಗಲೆಯ ಒಳಗೆ ಮಾಡಿರುವ ಇಂಟೀರಿಯರ್‌ ಡಿಸೈನ್‌ ಕೋಟ್ಯಂತರ ರೂ. ಬೆಲೆ ಬಾಳುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಬೆಲೆ ಬಾಳುವ ಮರಗಳಿಂದ ಮಾಡಿರುವ ವುಡನ್‌ ಡಿಸೈನ್‌ (Costly Interior design) ಇದಾಗಿದ್ದು, ಇಲ್ಲಿ ಬಳಸಲಾಗಿರುವ ಕಟ್ಟಿಗೆಯ ಮೌಲ್ಯ ತಿಳಿಯಲು ಅರಣ್ಯ ಇಲಾಖೆ ಅಧಿಕಾರಿಗಳನ್ನು ಕರೆಸಲಾಗಿದೆ.

ಲೋಕಾ ದಾಳಿಗೆ ಒಳಗಾದ ಕೊಡಗು ಎಡಿಸಿ ನಂಜುಂಡೇಗೌಡಗೆ ಹಲವು ಜಿಲ್ಲೆಗಳಲ್ಲಿ ಬೇನಾಮಿ ಆಸ್ತಿ

ಮಡಿಕೇರಿ: ಕೊಡಗಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ದಾಳಿಗೆ ಒಳಗಾಗಿದ್ದಾರೆ. ಅವರಲ್ಲಿ ಒಬ್ಬರು ನೀರಾವರಿ ನಿಗಮದಲ್ಲಿ ಕಾರ್ಯ ನಿರ್ವಾಹಕ ಎಂಜಿನಿಯರ್‌ ಆಗಿರುವ ಹಾರಂಗಿ ಡ್ಯಾಂ ಅಧೀಕ್ಷಕ ರಘುಪತಿ ಮತ್ತು ಇನ್ನೊಬ್ಬರು ಕೊಡಗು ಜಿಲ್ಲಾ ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ.

ಲೋಕಾಯುಕ್ತ ಡಿವೈಎಸ್ಪಿ ಪವನ್ ಕುಮಾರ್ ನೇತೃತ್ವದಲ್ಲಿ ಮಡಿಕೇರಿಯಲ್ಲಿರುವ ನಂಜುಂಡೇಗೌಡ ಅವರ ನಿವಾಸ ಮೇಲೆ ದಾಳಿ ಮಾಡಲಾಗಿದೆ. ಮೂವರು ಇನ್ಸ್‌ಪೆಕ್ಟರ್ ಮತ್ತು 10ಕ್ಕೂ ಹೆಚ್ಚು ಸಿಬ್ಬಂದಿಗಳಿಂದ ಶೋಧ ಕಾರ್ಯ ನಡೆದಿದೆ. ಕೊಡಗು ಮತ್ತು ಮೈಸೂರು ಜಿಲ್ಲೆ ಲೋಕಾಯುಕ್ತ ಪೊಲೀಸರ ಜಂಟಿ ಕಾರ್ಯಾಚರಣೆ ಇದಾಗಿದೆ.

23 ಲಕ್ಷ ರೂ. ನಗದು ಪತ್ತೆ

ಮಡಿಕೇರಿಯಲ್ಲಿರುವ ನಂಜುಂಡೇಗೌಡರ ಕ್ವಾಟ್ರಸ್ ಮೇಲೆ ದಾಳಿ ನಡೆಸಿ ಶೋಧ ನಡೆಸಿದಾಗ 23 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಇದರ ಜತೆಗೆ 385 ಗ್ರಾಂ ಚಿನ್ನಾಭರಣ, 350 ಗ್ರಾಂ ಬೆಳ್ಳಿ ವಸ್ತುಗಳು ಪತ್ತೆಯಾಗಿವೆ. ಚಿನ್ನ, ಬೆಳ್ಳಿ ಆಭರಣಗಳ ಮೌಲ್ಯ ನಿರ್ಣಯಕ್ಕೆ ಅಕ್ಕಸಾಲಿಗರನ್ನು ಕರೆಸಲಾಗಿದೆ. ಪತ್ತೆಯಾದ ಚಿನ್ನಾಭರಣಗಳ ಒಟ್ಟು ಮೌಲ್ಯ 22 ಲಕ್ಷ ರೂ.ಗಳು.

ಮಾವ, ಬಾಮೈದನ ಮನೆಗೂ ಲಗ್ಗೆ ಇಟ್ಟ ಅಧಿಕಾರಿಗಳು

ನಂಜುಂಡೇಗೌಡರ ಮನೆಯಲ್ಲಿ ಪತ್ತೆಯಾಗಿರುವ ಹಣದಲ್ಲಿ ಐದು ಲಕ್ಷ ರೂ. ಬುಧವಾರ ಸಂಜೆ ಬಾಮೈದ ತಂದು ಇಟ್ಟಿದ್ದು ಎಂದು ತಿಳಿಸಲಾಗಿದೆ. ಪೊಲೀಸರು ಆ ಬಳಿಕ ಪಿರಿಯಾಪಟ್ಟಣ ತಾಲೂಕಿನ ಮಾಕನಳ್ಳಿಯಲ್ಲಿರುವ ನಂಜುಂಡೇಗೌಡರ ಮಾವನ ಮನೆ, ಮೈಸೂರಿನಲ್ಲಿರುವ ಬಾಮೈದನ ಮನೆಯಲ್ಲೂ ಶೋಧ ನಡೆಸಿದರು.

ನಂಜುಂಡೇಗೌಡರು ಮಡಿಕೇರಿ ಎಡಿಸಿಯಾಗಿ ಬರುವ ಮೊದಲು ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಸ್ತಿ‌ ಖರೀದಿ ಮಾಡಿದ್ದರು ಎನ್ನಲಾಗಿದೆ. ಕೆಲಸ ಮಾಡಿದ ಎಲ್ಲಾ ಜಿಲ್ಲೆಗಳಲ್ಲಿ ಭೂಮಿ ಹೊಂದಿರುವ ನಂಜುಂಡೇಗೌಡರು ಒಟ್ಟಾರೆ ಸ್ಥಿರಾಸ್ತಿ 80 ಎಕರೆಗಿಂತಲೂ ಹೆಚ್ಚು. ಆದರೆ, ಇದೆಲ್ಲವೂ ಇವರ ಹೆಸರಿನಲ್ಲಿಲ್ಲ. ಬದಲಾಗಿ ಬೇನಾಮಿ ಹೆಸರಿನಲ್ಲಿವೆ ಎನ್ನಲಾಗಿದೆ. ಅವರಿಗೆ ಕೊಡಗು, ಮೈಸೂರು, ಪಿರಿಯಾಪಟ್ಟಣ ಸೇರಿದಂತೆ ಹಲವು ಕಡೆ ಭೂಮಿ‌ ಇದೆ ಎನ್ನಲಾಗಿದೆ.

ನಂಜುಂಡೇಗೌಡ ಒಟ್ಟು ಆಸ್ತಿ ಮೌಲ್ಯ 3.53 ಕೋಟಿ ರೂ.

  1. ನಂಜುಂಡೇಗೌಡರ ಒಟ್ಟು ಆಸ್ತಿ ಮೌಲ್ಯ: 3,53,43,518 ರೂ.
  2. ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ 1 ನಿವೇಶನ
  3. ಭಾಗಮಂಡಲದಲ್ಲಿ 6.80 ಎಕರೆ ಜಾಗ
  4. ಮೈಸೂರು ಜಿಲ್ಲೆಯ ಕೊಳ್ಳೆಗಾಲದಲ್ಲಿ 23 ಎಕರೆ ಜಾಗ
  5. ಪಿರಿಯಾಪಟ್ಟಣದಲ್ಲಿ 19.5 ಎಕರೆ ಜಾಗ ಹಾಗೂ ಒಂದು ಮನೆ
  6. ಮೈಸೂರಿನಲ್ಲಿ ಎರಡು ನಿವೇಶನ, 1.9 ಎಕರೆ ಜಾಗ ಖರೀದಿ
  7. ನಿವೇಶನ ಹಾಗೂ ಜಾಗದ ಒಟ್ಟು ಮೌಲ್ಯ 2 ಕೋಟಿ 55 ಲಕ್ಷ
  8. 23 ಲಕ್ಷ ನಗದು, ಫಿಕ್ಸಡ್ ಡಿಪಾಸಿಟ್ 35 ಲಕ್ಷ
  9. ಬ್ಯಾಂಕ್ ಖಾತೆಯಲ್ಲಿ 4 ಲಕ್ಷ, ಹಾಗೂ 5 ಲಕ್ಷ ಮೌಲ್ಯದ ಕಾರು.
  10. 22 ಲಕ್ಷ ಮೌಲ್ಯದ ಚಿನ್ನಾಭರಣಗಳು

ಇದನ್ನೂ ಓದಿ: Lokayukta raid : ಗಂಡ-ಹೆಂಡ್ತಿ ಇಬ್ಬರೂ ಎಂಜಿನಿಯರ್;‌ ಮನೆಯಲ್ಲಿ ಸಿಕ್ಕಿದ್ದು1 ಕೆಜಿ ಚಿನ್ನ, 15 ಲಕ್ಷ ರೂ. ನಗದು

Exit mobile version