Site icon Vistara News

Love, Sex and Dokha: ಸಂಸದ ಪುತ್ರನ ಲವ್‌, ಸೆಕ್ಸ್‌, ದೋಖಾ ಪ್ರಕರಣ; ಮತ್ತೊಂದು ಆಡಿಯೊ ವೈರಲ್

Dr Ranganath love case

ಬೆಂಗಳೂರು: ಬಳ್ಳಾರಿ ಸಂಸದ ದೇವೇಂದ್ರಪ್ಪ (Ballary MP Devendrappa) ಅವರ ಪುತ್ರ, ಮೈಸೂರು ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಡಾ. ರಂಗನಾಥ್‌ (Dr Ranganath) ಅವರು ಬೆಂಗಳೂರಿನ ಯುವತಿಯೊಬ್ಬಳಿಗೆ ವಂಚನೆ ಮಾಡಿದ್ದಾರೆಂದು (Love, Sex and Dokha) ಆರೋಪಿಸಿ ಬಸವನಗುಡಿ ಮಹಿಳಾ ಠಾಣೆಯಲ್ಲಿ (Basavanagudi Station) ದಾಖಲಾಗಿರವ ಪ್ರಕರಣವನ್ನು ಮೈಸೂರಿನ ಠಾಣೆಗೆ (Mysore police station) ವರ್ಗಾಯಿಸಲು ತಯಾರಿ ನಡೆದಿದೆ.‌ ಇದರ ನಡುವೆಯೇ ಯುವತಿ ಮತ್ತು ಡಾ. ರಂಗನಾಥ್‌ ನಡುವಿನ ಮಾತುಕತೆಯ ಮತ್ತೊಂದು ಆಡಿಯೊ ವೈರಲ್‌ ಆಗಿದೆ.

ಡಾ. ರಂಗನಾಥ್‌ ಮತ್ತು ಯುವತಿ ನಡುವಿನ ಸಂಭಾಷಣೆ

https://vistaranews.com/wp-content/uploads/2023/11/WhatsApp-Audio-2023-11-08-at-09.44.59-1.mp3

ಮೈಸೂರು ಠಾಣೆಯಲ್ಲಿ ಡಾ. ರಂಗನಾಥ್‌ ಅವರು ನಾಲ್ಕು ದಿನದ ಹಿಂದೆ ಯುವತಿ ವಿರುದ್ಧ ಬ್ಲ್ಯಾಕ್‌ಮೇಲ್‌ ಪ್ರಕರಣವೊಂದನ್ನು ದಾಖಲಿಸಿದ್ದರು. ಅದರ ಬೆನ್ನಿಗೇ ಬಸವನಗುಡಿಯ ಮಹಿಳಾ ಠಾಣೆಯಲ್ಲಿ ಯುವತಿ ವಂಚನೆ ಕೇಸು ದಾಖಲಿಸಿದ್ದರು. ಈ ಪ್ರಕರಣದ ಹೆಚ್ಚಿನ ಘಟನಾವಳಿಗಳು ನಡೆದಿರುವುದು ಮೈಸೂರಿನಲ್ಲಿ. ಬ್ಲ್ಯಾಕ್‌ಮೇಲ್‌ ಮತ್ತು ಅದಕ್ಕೆ ಸಂಬಂಧಿಸಿದ ಮಾತುಕತೆಗಳು ಹಾಗೂ ಯುವತಿಯನ್ನು ಮೊದಲ ಬಾರಿ ಲೈಂಗಿಕವಾಗಿ ಬಳಸಿಕೊಂಡಿರುವುದು ಮೈಸೂರಿನ ಹೋಟೆಲ್‌ನಲ್ಲಿ. ಈ ಕಾರಣಕ್ಕಾಗಿ ಒಂದೇ ಠಾಣೆಯಲ್ಲಿ ಎರಡೂ ಪ್ರಕರಣಗಳ ವಿಚಾರಣೆ ನಡೆಸುವುದು ಸೂಕ್ತ ಎಂಬ ನೆಲೆಯಲ್ಲಿ ಪ್ರಕರಣದ ವರ್ಗಾವಣೆಗೆ ಮುಂದಾಗಿದ್ದಾರೆ ಬಸವನಗುಡಿ ಪೊಲೀಸರು.

ಉಪನ್ಯಾಸಕ ರಂಗನಾಥ್ ಹಾಗೂ ಸಂತ್ರಸ್ತ ಯುವತಿಯ ಮೊದಲ ಭೇಟಿ ನಡೆದಿದ್ದು ಹೆಚ್ಚು ಒಡನಾಟವಿದ್ದದ್ದು ಮೈಸೂರಿನಲ್ಲಿ. ಬೆಂಗಳೂರಿನಲ್ಲಿ ಆರೋಪ ಸಂಬಂಧ ಯಾವುದೇ ದಾಖಲೆಗಳಿಲ್ಲ.. ಹೀಗಾಗಿ ಅದಕ್ಕಾಗಿ ಹಿರಿಯ ಅಧಿಕಾರಿಗಳ ಸೂಚನೆ ಹಿನ್ನಲೆ ಕೇಸ್ ವರ್ಗಾವಣೆ ಮಾಡಲು ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಮುಂದಾಗಿದ್ದಾರೆ.

ಏನಿದು ಲವ್‌, ಸೆಕ್ಸ್‌ ಎಂಡ್‌ ದೋಖಾ ಪ್ರಕರಣ?

2022ರಲ್ಲಿ ಮೈಸೂರಿನಲ್ಲಿ ನಡೆದ ಪಾರ್ಟಿಯೊಂದರಲ್ಲಿ ಡಾ. ರಂಗನಾಥ್‌ ಮತ್ತು ಯುವತಿಯ ಭೇಟಿಯಾಗಿದ್ದು, ಭೇಟಿಯ ದಿನವೇ ಅವರಿಬ್ಬರ ನಡುವೆ ಸಂಬಂಧದ ಮಾತುಕತೆ ನಡೆದಿದೆ ಎಂದು ಯುವತಿ ಒಪ್ಪಿಕೊಂಡಿದ್ದಾಳೆ. ತನಗೆ ಮಗು ಇಲ್ಲ, ನೀವು ಸಹಕಾರ ಕೊಡಬೇಕು ಎಂದು ರಂಗನಾಥ್‌ ಮೊದಲ ದಿನವೇ ಕೇಳಿದ್ದ, ಮಗು ಎನ್ನುವ ಎಮೋಷನಲ್‌ ಮಾತಿಗೆ ಕಟ್ಟುಬಿದ್ದೆ ಎಂದು ಯುವತಿ ಹೇಳಿಕೊಂಡಿದ್ದಾಳೆ. ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿದ ರಂಗನಾಥ್‌ ಬಳಿಕ ದೂರ ಮಾಡಲು ಪ್ರಯತ್ನಿಸಿದ್ದೇ ಯುವತಿಯ ಆಕ್ರೋಶಕ್ಕೆ ಕಾರಣ. ಈಗಲಾದರೂ ಸರಿ ಎರಡನೇ ಪತ್ನಿಯಾಗಿ ಸ್ವೀಕರಿಸಿ ಎನ್ನುವುದು ಯುವತಿಯ ಬೇಡಿಕೆ.

ಇತ್ತ ಡಾ. ರಂಗನಾಥ್‌ ಈ ಯುವತಿ ತನ್ನನ್ನು ಬ್ಲ್ಯಾಕ್‌ ಮೇಲ್‌ ಮಾಡುತ್ತಿದ್ದಾಳೆ. ಆಕೆ ಒಂದು ಗ್ಯಾಂಗ್‌ ಕಟ್ಟಿಕೊಂಡಿದ್ದು ಕಲ್ಲೇಶ್‌ ಎಂಬಾತನನ್ನು ಮುಂದಿಟ್ಟುಕೊಂಡು ಹಣ ವಸೂಲಿಗೆ ಮುಂದಾಗಿದ್ದಾಳೆ ಎಂದು ದೂರು ನೀಡಿದ್ದಾರೆ. ತಾನು ಸಾಕಷ್ಟು ಹಣವನ್ನು ಕಳೆದುಕೊಂಡಿದ್ದಾಗಿಯೂ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Physical Abuse : 2ನೇ ಪತ್ನಿಯಾದರೂ ಓಕೆ; ಸಂಸದ ದೇವೇಂದ್ರಪ್ಪ ಪುತ್ರನೇ ಬೇಕು ಎಂದ ಯುವತಿ

ಹೊಸ ಆಡಿಯೊದಲ್ಲಿ ಹಣದ ವಿಷಯ ಪ್ರಸ್ತಾಪ, ಕಲ್ಲೇಶ್‌ ಯಾರು?

ಈ ನಡುವೆ ಅವರಿಬ್ಬರ ನಡುವಿನ ಹೊಸ ಆಡಿಯೊವೊಂದು ಬಿಡುಗಡೆಯಾಗಿದ್ದು, ಅದರಲ್ಲಿ ಕೂಡಾ ಹಣದ ವಿಚಾರ ಚರ್ಚೆ ನಡೆದಿದೆ. ರಂಗನಾಥ್‌ ಪ್ರತಿ ತಿಂಗಳು 15 ಸಾವಿರ ರೂ. ಕೊಡುವುದಾಗಿ ಒಪ್ಪಿಕೊಂಡಿದ್ದರು, ಅದಕ್ಕೆ ಬದಲಾಗಿ ಕೇವಲ 10 ಸಾವಿರ ಮಾತ್ರ ಕಳುಹಿಸಿದ್ದರ ಬಗ್ಗೆ ಚರ್ಚೆಯಾಗಿದೆ. ಅದರಲ್ಲಿ ಕಲ್ಲೇಶ್‌ನ ಉಲ್ಲೇಖವೂ ಬರುತ್ತದೆ. ಕಾನ್ಫರೆನ್ಸ್‌ ಕಾಲ್‌ನಲ್ಲಿ ಅವರಿಬ್ಬರ ಜತೆ ಮೂರನೇ ವ್ಯಕ್ತಿಯೊಬ್ಬರು ಮಾತನಾಡಿದ್ದಾರೆ.

Exit mobile version