ಕೊಪ್ಪಳ: ಕೊಪ್ಪಳದಲ್ಲೊಂದು ಲವ್ ಸೆಕ್ಸ್ ದೋಖಾ (love dhoka) ಪ್ರಕರಣ (Fraud Case) ನಡೆದಿದೆ. ಪ್ರೀತಿಸುವ ನಾಟಕವಾಡಿ ಅತ್ಯಾಚಾರ (Physical abuse) ಎಸಗಿ ಕೈ ಕೊಟ್ಟ ಯುವಕನನ್ನು ಬಂಧಿಸಲು ಆಗ್ರಹಿಸಿ ಯುವತಿಯೊಬ್ಬಳು ಪೊಲೀಸ್ ಠಾಣೆ ಮುಂದೆ ಧರಣಿ ಕೂತಿದ್ದಾಳೆ.
ಕಾರಟಗಿಯ ರವಿರಾಜ್ ಎಂಬ ಯುವಕ ಮದುವೆ ಆಗ್ತೀನಿ ಎಂದು ನಂಬಿಸಿ ತನ್ನ ಮೇಲೆ ಎರಡು ವರ್ಷದಿಂದ ಅತ್ಯಾಚಾರವೆಸಗಿದ್ದಾನೆ. ಈತನನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಯುವತಿ ಪಾಲಕರೊಂದಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಮೊಸ ಮಾಡಿದ ಯುವಕನ ವಿರುದ್ಧ ದೂರು ದಾಖಲಿಸಿದ್ದಳು. ಪ್ರಕರಣ ದಾಖಲಾದರೂ ಯುವಕನನ್ನು ಆರೆಸ್ಟ್ ಮಾಡಲು ಪೊಲೀಸರು ಮೀನಮೇಷ ಎಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಾರಟಗಿ ಪೊಲೀಸ್ ಠಾಣೆ ಮುಂದೆ ಯುವತಿ ಮತ್ತು ಆಕೆಯ ಕುಟುಂಬ ಧರಣಿ ಕುಳಿತಿವೆ.
ಯುವಕ ಹಾಗೂ ಯುವತಿ ಕಾಲೇಜ್‌ಮೇಟ್ ಆಗಿದ್ದರು ಎಂದು ತಿಳಿದುಬಂದಿದೆ. ಪ್ರೀತಿಸುವ ನಾಟಕವಾಡಿ ಸತತ ಎರಡು ವರ್ಷ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮದುವೆಯಾಗುವ ಆಮಿಷವೊಡ್ಡಿ ಮೋಸ ಮಾಡಿದ್ದಾನೆ. ತನ್ನ ಖಾಸಗಿ ವಿಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ. ನನ್ನ ವಿಡಿಯೋ ಇಟ್ಟುಕೊಂಡು ಮತ್ತೆ ಮತ್ತೆ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಕ್ಷುಲ್ಲಕ ಕಾರಣಕ್ಕೆ ಗಲಾಟೆ, ಮನೆಗಳಿಗೆ ನುಗ್ಗಿ ದೊಣ್ಣೆ, ಬಡಿಗೆಗಳಿಂದ ಹಲ್ಲೆ
ಗದಗ : ಕ್ಷುಲ್ಲಕ ಕಾರಣವೊಂದಕ್ಕೆ ಮನೆಗಳಿಗೆ ನುಗ್ಗಿ ಮಹಿಳೆಯರು ಸೇರಿದಂತೆ ಮನೆ ಮಂದಿಗೆಲ್ಲ ಡೊಣ್ಣೆ, ಬಡಿಗೆಗಳಿಂದ ಹಲ್ಲೆ ನಡೆಸಿದ ಪ್ರಕರಣವೊಂದು ದಾಖಲಾಗಿದೆ. ಗದಗ (Gadag News) ತಾಲೂಕಿನ ಅಡವಿಸೋಮಾಪೂರ ಸಣ್ಣ ತಾಂಡಾದಲ್ಲಿ ಘಟನೆ ನಡೆದಿದೆ. ಇಬ್ಬರು ಮಹಿಳೆಯರು ಸೇರಿ ಐವರ ಮೇಲೆ ಹಲ್ಲೆ ನಡೆದಿದೆ.
ಜಮೀನು ಬದುವಿನ ವಿಷಯಕ್ಕೆ ಎರಡು ಗುಂಪಿನ ಮಧ್ಯೆ ಗಲಾಟೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಏಕಾಏಕಿ ಮನೆಗಳಿಗೆ ನುಗ್ಗಿ ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ. ಗಲಾಟೆಯು ಎರಡು ದಿನದ ಹಿಂದೆ ಆರಂಭಗೊಂಡಿತ್ತು. ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಅಲ್ಲಿ ಸಮಾಧಾನ ಮಾಡಿ ಕಳುಹಿಸಿದ್ದರು. ಹಿರಿಯರ ಮಧ್ಯಸ್ಥಿಕೆಯಲ್ಲಿ ಗಲಾಟೆ ಬಗೆಹರಿಸಿಕೊಳ್ಳಲಾಗಿತ್ತು. ಇದೀಗ ಮತ್ತೆ ಏಕಾ ಏಕಿ ಗಲಾಟೆ ಮಾಡಿ ಐವರು ಜನರ ಮೇಲೆ ಹಲ್ಲೆ ನಡೆಸಲಾಗಿದೆ. ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Rain News: ಪ್ರತ್ಯೇಕ ಮಳೆ ಅವಘಡ; ಸಿಡಿಲು ಬಡಿದು ಬಾಲಕ, ಮಹಿಳೆ ದುರ್ಮರಣ
ಎರಡು ಪ್ರತ್ಯೇಕ ಮಳೆ ಅವಘಡಗಳಲ್ಲಿ ಸಿಡಿಲು ಬಡಿದು ಬಾಲಕ ಮತ್ತು ಮಹಿಳೆ ದುರ್ಮರಣ ಹೊಂದಿದ್ದಾರೆ. ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಸಿಡಿಲಿಗೆ ಬಾಲಕನೊಬ್ಬ ಬಲಿಯಾಗಿದ್ದರೆ, ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಬಂಡೆಮ್ಮ ನಗರ ಗ್ರಾಮದ ಬಳಿ ಸಿಡಿಲು ಬಡಿದು ಬಾಲಕ ಮೃತಪಟ್ಟಿದ್ದು, ಇನ್ನೊಬ್ಬ ಬಾಲಕನಿಗೆ ಗಂಭೀರ ಗಾಯಗಳಾಗಿವೆ. ಕುರಿ ಮೇಯಿಸಲು ಹೋಗಿದ್ದ ವೇಳೆ ಗುಡುಗು, ಸಿಡಿಲು ಸಹಿತ ಮಳೆ ಸುರಿದಿದ್ದು, ಈ ವೇಳೆ ಮರದ ಬಳಿ ನಿಂತಾಗ ಅವಘಡ ನಡೆದಿದೆ. ಗುಡ್ಡದಕೇರಿ ಬಡಾವಣೆಯ ನಿವಾಸಿ ಯಲ್ಲಪ್ಪ ಕಿಲೀಕೈ (17) ಮೃತ ಬಾಲಕ. ಪರಸಪ್ಪ ಕಿಲೀಕೈ (15) ಗಾಯಾಳುವಾಗಿದ್ದು, ಆತನಿಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದನ್ನೂ ಓದಿ: Murder Case : ಸ್ನೇಹಿತರೇ ಕೊಲೆಗಾರರು; ಬರ್ತ್ ಡೇ ಪಾರ್ಟಿಗೆ ಹೋದ ಯುವಕನ ಬರ್ಬರ ಹತ್ಯೆ