Site icon Vistara News

ಮಹಿಳೆಯನ್ನು ಕೊಂದವನನ್ನು ಜೀವಂತ ಸುಟ್ಟ ಅಸ್ಸಾಮಿ ಬುಡಕಟ್ಟು ಜನ

assam killing

ಗುವಾಹಟಿ: ಹೆಣ್ಣು ಮಗಳೊಬ್ಬಳನ್ನು ಕೊಂದು ಹಾಕಿದ ಪಾತಕಿಯೊಬ್ಬನನ್ನು ಅಲ್ಲಿನ ಜನರೇ ಜೀವಂತವಾಗಿ ಸುಟ್ಟು ಹಾಕಿದ ಘಟನೆ ಅಸ್ಸಾಂನ ಬುಡಕಟ್ಟು ಸಮುದಾಯದಲ್ಲಿ ನಡೆದಿದೆ.

ಅಸ್ಸಾಂ ರಾಜ್ಯದ ನವಗಾಂವ್‌ ಜಿಲ್ಲೆಯ ಬೋರ್‌ ಲಲುಂಗ್‌ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಈತನ ಹೆಸರು ರನ್ಜಿ ಬೊರ್ದೊಲಾಯ್.‌ ಈತನನ್ನು ಜೀವಂತವಾಗಿ ದಹಿಸಲಾಗಿದೆ ಎಂಬ ಸುದ್ದಿ ದೊರೆತಾಗ ಪ್ರದೇಶಕ್ಕೆ ಪೊಲೀಸರು ಭೇಟಿ ನೀಡಿದರು. ದೇಹವನ್ನು ಶೇ.90ರಷ್ಟು ಸುಟ್ಟುಹೋಗಿತ್ತು. ದೇಹವನ್ನು ಹೂಳಲಾಗಿತ್ತು.

ಈ ಪ್ರದೇಶದಲ್ಲಿ ವಾಸವಾಗಿರುವ ಕರ್ಬಿ ಎಂಬ ಬುಡಕಟ್ಟು ಸಮುದಾಯದಲ್ಲಿ ಈ ಘಟನೆ ನಡೆದಿದೆ. ಕೆಲವು ದಿನಗಳ ಹಿಂದೆ, ಹೊಸದಾಗಿ ಮದುವೆಯಾದ ಮಹಿಳೆಯೊಬ್ಬಳ ಶವ ಕೊಳದಲ್ಲಿ ಕಂಡುಬಂದಿತ್ತು. ಈಕೆಯನ್ನು ರನ್ಜಿ ಸೇರಿದಂತೆ ಐದು ಮಂದಿ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಸಾಯಿಸಿದ್ದುದು ಗೊತ್ತಾಗಿತ್ತು. ಈ ಕುರಿತು ಪಂಚಾಯಿತಿ ಸೇರಿಸಿದಾಗ, ರನ್ಜಿ ತಪ್ಪೊಪ್ಪಿಕೊಂಡಿದ್ದ. ಇದರಿಂದ ಸಿಟ್ಟಿಗೆದ್ದ ಒಂದಷ್ಟು ಮಂದಿ ಆತನ ಮೇಲೆ ಸೀಮೆಎಣ್ಣೆ ಸುರಿದು ಅವನನ್ನು ಸುಟ್ಟುಹಾಕಿದ್ದರು.

ಇದನ್ನೂ ಓದಿ: Assam Floods: ಭೀಕರ ಪ್ರವಾಹಕ್ಕೆ ನಲುಗಿದ ಅಸ್ಸಾಂ, ಆಸರೆ ಕಳೆದುಕೊಂಡ ಜನರ ಸಂಕಟ, ಪರದಾಟ

Exit mobile version