Site icon Vistara News

Lover Murdered | ಪ್ರೇಮಿಯ ಕತ್ತು ಸೀಳಿ ಕೊಂದು, ವಿಡಿಯೋ ಮಾಡಿ ಹರಿಬಿಟ್ಟ ಕೊಲೆಪಾತಕಿ!

Lover Murdered

ನವದೆಹಲಿ: ಮುಂಬೈನ 23 ವರ್ಷದ ಶ್ರದ್ಧಾ ವಾಳ್ಕರ್ ಬರ್ಬರ ಕೊಲೆಯಿಂದ ದೇಶ ಚೇತರಿಸಿಕೊಳ್ಳುವ ಮೊದಲೇ, ಮಧ್ಯಪ್ರದೇಶದಲ್ಲೂ ಅಂಥದ್ದೇ ಭೀಭತ್ಸ ಕೊಲೆಯೊಂದು ನಡೆದಿದೆ. ಮೋಸ ಮಾಡಿದ್ದಾಳೆ ಎಂದು ಆರೋಪಿಸಿ ತನ್ನ ಪ್ರಿಯತಮೆಯ ಕುತ್ತು ಸೀಳಿ ಕೊಲೆ ಮಾಡಿದ್ದು (Lover Murdered) ಮಾತ್ರವಲ್ಲದೇ ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ ಕೊಲೆಪಾತಕಿ. ಆರೋಪಿಯನ್ನು ಅಭಿಜಿತ್ ಪತಿಹಾರ್ ಎಂದು ಗುರುತಿಸಲಾಗಿದೆ. ಕೊಲೆಯಾದವಳು ಶಿಪ್ರಾ ಝರಿಯಾ.

ಈ ಸೈಕೋ ಕಿಲ್ಲರ್ ಪತಿಹಾರ್, ತನ್ನ ಗೆಳತಿಯನ್ನು ಬರ್ಬರವಾಗಿ ಕೊಂದಿದ್ದು ಮಾತ್ರವಲ್ಲದೇ ರಕ್ತಸಿಕ್ತ ಆಕೆಯ ದೇಹವನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ನಂಬಿಕೆ ದ್ರೋಹ ಮಾಡಬಾರದು ಎನ್ನುತ್ತಾ ಮೇಲೆ ಹೊದಿಸಿದ್ದ ಚಾದರ ಸರಿಸುತ್ತಾನೆ ಮತ್ತು ರಕ್ತದ ಮಡುವಿನಲ್ಲಿ ಬಿದ್ದಿರುವ ಆಕೆಯ ದೇಹವನ್ನು ತೋರಿಸುವ ಚಿತ್ರಗಳು ಈ ವಿಡಿಯೋದಲ್ಲಿವೆ.

ಈ ಬರ್ಬರ ಕೊಲೆ ವಾರದ ಹಿಂದೆ ನಡೆದಿರುವ ಸಾಧ್ಯತೆ ಇದೆ. ಆದರೆ, ಪೊಲೀಸರು ಇದುವರೆಗೂ ಕೊಲೆಪಾತಕಿ ಅಭಿಜಿತ್ ಪತಿಹಾರ್‌ನನ್ನು ಬಂಧಿಸಿಲ್ಲ. ಕೊಲೆಯಾದ ನತದೃಷ್ಟೆಯ ಹೆಸರು 25 ವರ್ಷದ ಶಿಪ್ರಾ ಝರಿಯಾ. ಜಬಲ್ಪುರನ ಮೇಖ್ಲಾ ರೆಸಾರ್ಟ್‌ನಲ್ಲಿ ಈ ಶವ ದೊರೆತಿದೆ.

ಕೊಲೆ ಪಾತಕಿ ಅಭಿಜಿತ್ ಪತಿಹಾರ್ ಮತ್ತೊಂದು ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಅದರಲ್ಲಿ ಆತ, ತಾನು ಪಟನಾದ ವ್ಯಾಪಾರಿ ಎಂದು ಹೇಳಿಕೊಂಡಿದ್ದಾನೆ. ತಾನು ಪ್ರೀತಿಸುತ್ತಿದ್ದ ಶಿಪ್ರಾ ಝರಿಯಾ ನನ್ನ ಸ್ನೇಹಿತ ಹಾಗೂ ಬಿಸಿನೆಸ್ ಪಾರ್ಟನರ್ ಜಿತೇಂದ್ರ ಕುಮಾರ್ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಅಲ್ಲದೇ, ಆಕೆ ಜಿತೇಂದ್ರನಿಂದ 12 ಲಕ್ಷ ರೂ. ಸಾಲ ಪಡೆದುಕೊಂಡು ಜಬಲ್ಪುರ್‌ಗೆ ಪರಾರಿಯಾಗಿದ್ದಾಳೆ. ಜಿತೇಂದ್ರನ ಸೂಚನೆಯ ಮೇರೆ ಆಕೆಯನ್ನು ಕೊಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿತೇಂದ್ರ ಹಾಗೂ ಆತನ ಸಹಾಯಕ ಸುಮಿತ್ ಪಟೇಲ್ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಇನ್ನೂ ಕೊಲೆಪಾತಕಿ ಅಭಿಜಿತ್ ಪತಿಹಾರನನ್ನು ಪೊಲೀಸರು ಬಂಧಿಸಿಲ್ಲ.

ಇದನ್ನೂ ಓದಿ | ಹುಬ್ಬಳ್ಳಿ ಬಳಿ ರೈಲಿನಲ್ಲಿ ವ್ಯಕ್ತಿಯ ಬರ್ಬರ ಕೊಲೆ

Exit mobile version