ಮಂಗಳೂರು: ನಿಷೇಧಿತ ಪಿಎಫ್‌ಐ ಸಂಘಟನೆ ನಾಯಕರ ಜೊತೆ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಆರೋಪಿ ಶಾರಿಕ್ ನಂಟು ಹೊಂದಿದ್ದನೇ ಎಂಬ ದಿಕ್ಕಿನಲ್ಲಿ ತನಿಖೆ ಮುಂದುವರಿದಿದೆ.
ತಮಿಳುನಾಡಿನಲ್ಲಿ ಶಾರಿಕ್‌ಗೆ ಮಾಜಿ ಪಿಎಫ್ಐ ನಾಯಕರು ಸಾಥ್ ನೀಡಿದ್ದ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರಿಂದ ಮಾಜಿ ಪಿಎಫ್‌ಐ ನಾಯಕರ ತನಿಖೆ ನಡೆಯುತ್ತಿದೆ. ಕೊಯಮತ್ತೂರು ಬಾಂಬ್ ಸ್ಫೋಟದಲ್ಲೂ ಮಾಜಿ ಪಿಎಫ್‌ಐ ನಾಯಕರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಅಕ್ಟೋಬರ್ 23ರಂದು ಕೊಯಮತ್ತೂರಿನ ಸಂಗಮೇಶ್ವರ ದೇವಸ್ಥಾನ ಬಳಿ ಕಾರ್ ಬಾಂಬ್ ಸ್ಫೋಟವಾಗಿತ್ತು.
ಕೊಯಮತ್ತೂರಿನಲ್ಲಿ ಕೆಲ ಮಾಜಿ ಪಿಎಫ್‌ಐ ನಾಯಕರನ್ನು ಶಾರಿಕ್ ಭೇಟಿಯಾಗಿದ್ದ ಮಾಹಿತಿಯಿದೆ. ಜೊತೆಗೆ 1998ರ ಕೊಯಮತ್ತೂರು ಬಾಂಬ್ ಬ್ಲಾಸ್ಟ್ ರೂವಾರಿಯ ಸಂಬಂಧಿಯನ್ನು ಈತ ಭೇಟಿಯಾದ ಅನುಮಾನವಿದೆ. 1998ರ ಕೊಯಮತ್ತೂರು ಬಾಂಬ್ ಬ್ಲಾಸ್ಟ್ ರೂವಾರಿ ಎಸ್.ಎ.ಬಾಷಾ ಸಂಬಂಧಿ ಮುಹಮ್ಮದ್ ತಲ್ಕನನ್ನು ಶಾರಿಕ್‌ಗೆ ಮೋಸ್ಟ್ ವಾಂಟೆಡ್ ಅಬ್ದುಲ್ ಮತೀನ್ ಪರಿಚಯಿಸಿದ್ದಾನೆ. ತಮಿಳುನಾಡು ಹಿಂದೂ ಮುಖಂಡನ ಹತ್ಯೆಯಲ್ಲಿ ಮತೀನ್ ಹೆಸರು ಕೇಳಿ ಬಂದಿತ್ತು. ತಮಿಳುನಾಡಿನ ಹಲವು ಉಗ್ರ ಜಾಲಗಳ ಸಂಪರ್ಕವನ್ನು ಮತೀನ್ ಹೊಂದಿದ್ದಾನೆ. ಈ ಜಾಲವನ್ನು ಶಾರಿಕ್‌ಗೆ ಮತೀನ್ ಕನೆಕ್ಟ್ ಮಾಡಿರುವ ಶಂಕೆಯಿದ್ದು, ತಮಿಳುನಾಡು ಪೊಲೀಸರಿಂದಲೂ ತನಿಖೆ ಮುಂದುವರಿದಿದೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಉಗ್ರ ಶಾರಿಕ್ ಹಿಂದಿರುವ ಮೇನ್ ಹ್ಯಾಂಡ್ಲರ್ ಮತೀನ್ ತಾಹಾ: ಇವನ ಅಪ್ಪ ಒಬ್ಬರು ಸಜ್ಜನ ಮಾಜಿ ಸೈನಿಕ!