Site icon Vistara News

Fraud Case: ಆರೋಪಿಯೂ ನಕಲಿ, ಮಾಲೀಕನೂ ನಕಲಿ; ಎಲ್ಲಾ ಮೋಸ; ನ್ಯಾಯಾಲಯಕ್ಕೇ ಹತ್ತಾರು ಬಾರಿ ವಂಚನೆ!

real estatae fraud john mosses

ಬೆಂಗಳೂರು: ನಕಲಿ ದಾಖಲೆಪತ್ರ, ನಕಲಿ ಮಾರಾಟಗಾರ, ನಕಲಿ ಮಾಲಿಕ, ವಾದ ಮಾಡುವ ವಕೀಲನೂ ನಕಲಿ! ನ್ಯಾಯಾಲಯಕ್ಕೇ ಮೋಸ ಮಾಡಿ (Fraud Case), ಅಸಲಿ ಆಸ್ತಿ ಮಾಲೀಕರಿಂದ ಜಾಗವನ್ನೂ ಕಿತ್ತುಕೊಳ್ಳುವ ಕರಾಳ ಮೆಗಾ ರಿಯಲ್‌ ಎಸ್ಟೇಟ್‌ ವಂಚನೆ ಜಾಲವೊಂದು (Real Estate Fraud) ಅನಾವರಣಗೊಂಡಿದೆ.

ಹೀಗೆ 116 ಪ್ರಕರಣಗಳಲ್ಲಿ ವಂಚನೆ ಎಸಗಿದ 18 ಜನರ ಮಹಾ ಜಾಲವೊಂದನ್ನು ಪೊಲೀಸರು ಬಂಧಿಸಿದ್ದಾರೆ. ಈ ನಕಲಿಗಳು ನೀಡುತ್ತಿದ್ದ ದಾಖಲೆಗಳನ್ನು ನಂಬಿ ನ್ಯಾಯಾಧೀಶರೂ ಮೋಸ ಹೋಗುತ್ತಿದ್ದುದು ಕೂಡ ಕಂಡುಬಂದಿದೆ. ಜಮೀನು ಕಬ್ಜ ಮಾಡಿಕೊಳ್ಳಲು ಈ ಖತರ್‌ನಾಕ್‌ಗಳು ಅನುಸರಿಸಿದ ಹೊಸ ವಿಧಾನವನ್ನು ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಇವರು ಜಾಗದ ನಕಲಿ ದಾಖಲೆ ಮೊದಲು ಸೃಷ್ಟಿಸಿಕೊಳ್ಳುತ್ತಿದ್ದರು. ನಂತರ ಆಸ್ತಿಯ ಮೇಲೆ ತಗಾದೆ ಸೃಷ್ಟಿಸಿ ಅಸಲಿ ಮಾಲಿಕನಿಗೆ ತಿಳಿಯದಂತೆ ಕೋರ್ಟಿನಲ್ಲಿ ದಾವೆ ಹಾಕುತ್ತಿದ್ದರು. ನಂತರ ಇವರು ಕೋರ್ಟಿನಲ್ಲಿ ತೋರಿಸುವ ಮಾಲಿಕ, ಆರೋಪಿ, ವಕೀಲ, ಸಾಕ್ಷಿದಾರ, ಬಾಡಿಗೆದಾರ ಹೀಗೆ ಎಲ್ಲವೂ ನಕಲಿಯೇ ಆಗಿರುತ್ತಿತ್ತು. ನ್ಯಾಯಾಧೀಶರು ಇದನ್ನು ನಂಬಿ ತೀರ್ಪು ನೀಡುತ್ತಿದ್ದರು.

ನಂತರ ಇವರು ನ್ಯಾಯಾಲಯದ ಅದೇಶ ಪತ್ರ ಹಿಡಿದು ಅಸಲಿ ಲ್ಯಾಂಡ್ ಮಾಲೀಕರಿಗೆ ಧಮಕಿ ಹಾಕುತ್ತಿದ್ದರು. ಕೋರ್ಟ್ ಆರ್ಡರ್ ಇದೆ ಎಂದು ನಂಬಿಸಿ ಅಸಲಿ ಮಾಲೀಕನನ್ನು ಜಾಗ ಬಿಡಿಸುತ್ತಿದ್ದರು. ಇದೇ ರೀತಿ 116 ಬಾರಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಹೀಗೆ ನ್ಯಾಯಾಲಯವನ್ನೇ ತಪ್ಪು ದಾರಿಗೆ ಎಳೆದು ವಂಚಿಸಿದ್ದ 18 ಜನ ಆರೋಪಿಗಳನ್ನು ಇದೀಗ ಬಂಧಿಸಲಾಗಿದೆ.

ನಕಲಿ ಮಾಲೀಕನಾಗಿ ಪ್ರಮುಖ ಆರೋಪಿ ಬಿ. ಮಣಿ, ನಕಲಿ ಬಾಡಿಗೆದಾರರಾಗಿ ಅರುಣ್, ಸೆಂದಿಲ್ ಕುಮಾರ್, ಜಾನ್ ಮೋಸಸ್, ಅಂಥೋಣಿ, ನಕಲಿ ಮಾಲೀಕನ ಪರ ವಕೀಲ ಆರೋಪಿತ‌ ಕರಾರು ಅಹಮದ್, ನಕಲಿ ಸ್ಟಾಂಪ್ ಪೇಪರ್ ತಯಾರು ಮಾಡುತ್ತಿದ್ದ ಎಡ್ವಿನ್ ಎ., ನಕಲಿ ಸಾಕ್ಷಿದಾರ ನರೇಂದ್ರ ಕುಮಾರ್, ನ್ಯಾಯಾಲಯಕ್ಕೆ ದಾವೆ ಸಲ್ಲಿಸುತ್ತಿದ್ದ ಎಂ.ಕಾಂತಮ್ಮ, ನಕಲಿ ಮಾಲೀಕರ ಪರವಾಗಿ ವಕಾಲತ್ತು ಸಲ್ಲಿಸುತ್ತಿದ್ದ ಬಿ.ಮಾರ್ಟಿನ್ ಕುಮಾರ್ ಸೇರಿದಂತೆ 18 ಮಂದಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: Fraud Case: ಸಚಿವೆ ನಿರ್ಮಲಾ ಸೀತಾರಾಮನ್ ಹೆಸರು ಹೇಳಿ ಖತರ್ನಾಕ್‌ ಲೇಡಿಯ ಕಳ್ಳಾಟ, ಕೋಟಿ ಕೋಟಿ ರೂ. ವಂಚನೆ!

Exit mobile version