Site icon Vistara News

Parappana Agrahara: ಪರಪ್ಪನ ಅಗ್ರಹಾರ ಜೈಲಿನೊಳಗೆ ಮೊಬೈಲು ಸಾಗಿಸುತ್ತಿದ್ದ ಕೈದಿ; 2 ಫೋನ್‌ ಎಲ್ಲಿಟ್ಟುಕೊಂಡಿದ್ದ ಗೊತ್ತಾ?

parappana agrahara mobile sale

ಬೆಂಗಳೂರು: ಪರಪ್ಪನ ಅಗ್ರಹಾರ (Parappana Agrahara Jail) ಜೈಲಿನಲ್ಲಿ ಕೈದಿಗಳ (Prison inmates) ಕಳ್ಳಾಟ ನಿಲ್ಲುತ್ತಿಲ್ಲ. ಕೈದಿಗಳಿಂದಲೇ ರಾಜಾರೋಷವಾಗಿ ಜೈಲಿನಲ್ಲಿ ಮೊಬೈಲ್ ಮಾರಾಟ (mobile phone sale) ನಡೆಯುತ್ತಿದ್ದು, ಜೈಲಿನಲ್ಲಿಯೇ ಇದರಿಂದ ಕೆಲವರು ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಈ ವರದಿ ಓದಿದರೆ, ಮೊಬೈಲ್‌ ಸಾಗಿಸಲು ಇಂಥ ಹಾದಿ ಹಿಡಿಯುವವರೂ ಇರ್ತಾರಾ ಎಂದು ನಿಮಗೆ ಸೋಜಿಗ ಆಗಬಹುದು.

ಹೀಗೆ ಒಬ್ಬ ಕೈದಿ ಕದ್ದು ಮುಚ್ಚಿ ಜೈಲಿಗೆ ಮೊಬೈಲ್ ತೆಗೆದುಕೊಂಡು ಹೋಗಲು ಯತ್ನಿಸಿದ್ದು, ಈತ ಮೊಬೈಲ್ ಇಟ್ಟುಕೊಂಡ ಜಾಗ ಮಾತ್ರ ಪತ್ತೆ ಮಾಡಿದ್ದೇ ರೋಚಕ. ಕೋರ್ಟ್‌ಗೆ ಹೋಗಿ ಮರಳುತ್ತಿದ್ದ ಕೈದಿಯೊಬ್ಬನ ಗುದದ್ವಾರದಲ್ಲಿ ಎರಡು ಮೊಬೈಲ್ ಸಿಕ್ಕಿವೆ! ಜೈಲಿನ ಒಳಗೆ ಬರುವಾಗ ಸ್ಕ್ಯಾನ್ ಮಾಡಿದಾಗ ಈ ವಿಚಾರ ಪತ್ತೆಯಾಗಿದೆ. ರಘುವೀರ್ ಎಂಬ ವಿಚಾರಣಾಧೀನ ಕೈದಿಯ ಗುದದ್ವಾರದಲ್ಲಿ ಎರಡು ಮೊಬೈಲ್ ಹಾಗೂ ಬ್ಯಾಟರಿ ಪತ್ತೆಯಾಗಿವೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಿದ್ದ ಪೊಲೀಸರು ವಾಪಸ್ ಬರುವಾಗ ಯಾರಿಂದಲೋ ಹೇಗೋ ಕಣ್ಣು ತಪ್ಪಿಸಿ ಈತ ಮೊಬೈಲ್ ಪಡೆದಿದ್ದ. ಶ್ರೀಕೃಷ್ಣ ಎಂಬ ಪೊಲೀಸ್ ಪೇದೆ ರಘುವೀರ್‌ನನ್ನು ಕರೆದುಕೊಂಡು ಹೋಗಿದ್ದ. ವಾಪಸ್ ಬಂದಾಗ ಜೈಲಿನ ತಪಾಸಣೆ ವೇಳೆ ಸ್ಕ್ಯಾನ್ ಸೈರನ್ ಮಾಡಿತ್ತು. ಕೂಡಲೇ ರಘುವೀರ್‌ನನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದು ಎಕ್ಸರೇ ಮಾಡಿದಾಗ ಪೊಲೀಸರಿಗೇ ಶಾಕ್ ಆಗಿತ್ತು.

ಹೊಟ್ಟೆಯೊಳಗೆ ಎರಡು ಮೊಬೈಲ್ ಇದ್ದವು. ಹೊಟ್ಟೆಯೊಳಗೆ ಮೊಬೈಲ್ ಹಾಕಿಕೊಂಡು, ಸೆಲ್ಲೋ ಟೇಪ್ ಗುದದ್ವಾರದಲ್ಲಿ ಕೆಳಗೆ ಬಿಟ್ಟಿದ್ದ. ಜೈಲಿನೊಳಗೆ ಹೋಗಿ ಅದನ್ನು ತೆಗೆದು ಲಕ್ಷ ಲಕ್ಷಕ್ಕೆ ಮಾರಾಟ ಮಾಡಲು ಪ್ಲಾನ್‌ ಮಾಡಿಕೊಂಡಿದ್ದ. ಆದರೆ ಪೊಲೀಸರ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ, ಆತ ಯಾರಿಗೆ ಮಾರಲು ಮೊಬೈಲ್‌ ಒಯ್ದಿದ್ದ ಎಂಬ ಕುತೂಹಲ ಮೂಡಿದೆ. ಹೈ ಪ್ರೊಫೈಲ್, ವಿಐಪಿ ಕೈದಿಗಳು ಕೂಡ ಜೈಲಿನಲ್ಲಿರುವುದರಿಂದ ಈ ಕುತೂಹಲ.

ಸರ್ಕಾರಿ ಕಚೇರಿಯಲ್ಲಿ ಡ್ಯಾನ್ಸ್‌ ಮಾಡಿ ರೀಲ್ಸ್; 8 ನೌಕರರಿಗೆ ನೋಟಿಸ್‌

ತಿರುವನಂತಪುರಂ: ನೌಕರರು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಮಾಡಿದ ಬಳಿಕ ಹಿರಿಯ ಅಧಿಕಾರಿಯ ಕೆಂಗಣ್ಣಿಗೆ ಗುರಿಯಾದ ಘಟನೆ ಕೇರಳದಲ್ಲಿ (kerala) ನಡೆದಿದೆ. ಪಟ್ಟನಂತಿಟ್ಟ ಜಿಲ್ಲೆಯ (Pathanamthitta district) ತಿರುವಲ್ಲಾ ಪುರಸಭೆ ಪಾಲಿಕೆ ಕಾರ್ಯದರ್ಶಿ ಅವರು ಇದೀಗ ಎಂಟು ಮಂದಿ ನೌಕರರಿಗೆ ಶೋಕಾಸ್ ನೋಟಿಸ್‌ (notice) ಜಾರಿಗೊಳಿಸಿದ್ದಾರೆ.

ಸರ್ಕಾರಿ ಕಚೇರಿಯಲ್ಲಿ ರೀಲ್ಸ್ ಮಾಡಿರುವ ನೌಕರರು ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಇದು ವೈರಲ್ ಆಗಿದ್ದು, ಮೂರು ದಿನಗಳ ಬಳಿಕ ರೀಲ್ಸ್ ನಲ್ಲಿ ಕಾಣಿಸಿಕೊಂಡಿರುವ ಎಲ್ಲ ನೌಕರರಿಗೆ ನೊಟೀಸ್ ಜಾರಿ ಗೊಳಿಸಲಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ನೌಕರರು ಕಚೇರಿಯಲ್ಲಿ ಹಾಡುವುದು ಮತ್ತು ನೃತ್ಯ ಮಾಡುವುದು ಸೆರೆಯಾಗಿದೆ. ಪುರಸಭೆ ಉದ್ಯೋಗಿಗಳು ರೀಲ್ಸ್ ಗಾಗಿ ಮೊದಲು ಸ್ಕ್ರಿಪ್ಟ್ ಸಿದ್ಧಪಡಿಸಿ ಬಳಿಕ ಅದನ್ನು ಕಚೇರಿಯಲ್ಲಿ ವಿಡಿಯೋ ಮಾಡಿದ್ದಾರೆ. ಹಾಡು ಮತ್ತು ನೃತ್ಯದ ಸಂಯೋಜನೆ ಇದರಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಕೂಡಲೇ ರೀಲ್ಸ್ ಭಾರೀ ವೈರಲ್ ಆಗಿದೆ.

ಇದನ್ನೂ ಓದಿ: Actor Darshan: ಪರಪ್ಪನ ಅಗ್ರಹಾರಕ್ಕೆ ದರ್ಶನ್‌ ನೋಡಲು ಆಗಮಿಸಿದ ಯುವತಿ; ಯಾರಾಕೆ?

Exit mobile version