Site icon Vistara News

Moral Policing: ಸಹೋದ್ಯೋಗಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡದ್ದಕ್ಕೆ ಹಿಂದೂ ಯುವಕನಿಗೆ ಹಲ್ಲೆ

moral policing shivamogga

ಶಿವಮೊಗ್ಗ: ಮುಸ್ಲಿಂ ಸಹೋದ್ಯೋಗಿಯನ್ನು (Muslim colleague) ಬೈಕ್‌ನಲ್ಲಿ ಕೂರಿಸಿಕೊಂಡು ಹೋಗಿದ್ದಕ್ಕೆ ಹಿಂದೂ ಯುವಕನ (Hindu youth) ಮೇಲೆ ಹಲ್ಲೆ (Assault Case) ಮಾಡಿದ ಘಟನೆ ಶಿವಮೊಗ್ಗ (Shivamogga news) ನಗರದ ಆರ್‌ಎಂಎಲ್ ನಗರದ ಸಮೀಪ ನಡೆದಿದೆ. ಪ್ರಕರಣ (moral policing) ತುಸು ತಡವಾಗಿ ಬೆಳಕಿಗೆ ಬಂದಿದೆ.

ಶಿವಮೊಗ್ಗ ನಗರದ ಸೀಗೆಹಟ್ಟಿಯ ನಿವಾಸಿ ನಂದನ್ ಎಂಬ ಯುವಕನ ಮೇಲೆ ಹಲ್ಲೆ ನಡೆದಿದೆ. ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ನಂದನ್, ಅನ್ಯ ಕೋಮಿನ ಸಹೋದ್ಯೋಗಿಯನ್ನು ಕೆಲಸದ ನಿಮಿತ್ತ ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ. ಈ ವೇಳೆ 20ಕ್ಕೂ ಹೆಚ್ಚು ಅನ್ಯ ಕೋಮಿನ ಯುವಕರು ನಂದನ್‌ನನ್ನು ತಡೆದು ಥಳಿಸಿದ್ದರು.

ನಮ್ಮ ಸಮುದಾಯದ ಹುಡುಗಿಯನ್ನು ಯಾಕೆ ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದೀಯಾ ಎಂದು ಅಕ್ಷೇಪಿಸಿ ಯುವಕರ ಗುಂಪು ಥಳಿಸಿದೆ. ಹಲ್ಲೆಯಲ್ಲಿ ನಂದನ್‌ ಕಣ್ಣು, ಕಿವಿ ಮತ್ತು ಬಾಯಿಯ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಶಿವಮೊಗ್ಗ ಶಾಸಕ ಎಸ್.ಎನ್ ಚನ್ನಬಸಪ್ಪ ಆಸ್ಪತ್ರೆಗೆ ಭೇಟಿ ನೀಡಿ ನಂದನ್ ಆರೋಗ್ಯ ವಿಚಾರಿಸಿದರು. ನಂದನ್‌ಗೆ ಧೈರ್ಯ ಹೇಳಿ, ಸೂಕ್ತ ಕಾನೂನು ಕ್ರಮದ ಭರವಸೆ ನೀಡಿದರು.

ಘಟನೆ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಕಾಂಗ್ರೆಸ್‌ ಆಡಳಿತವನ್ನು ಆಕ್ಷೇಪಿಸಿದ್ದಾರೆ. “ಕಾನೂನು ಸುವ್ಯವಸ್ಥೆಯನ್ನು ಮತೀಯ ಆಧಾರದ ಮೇಲೆ ನಿರ್ವಹಿಸುವ ಮೂಲಕ ಬಹುಸಂಖ್ಯಾತರನ್ನು ಕಾಂಗ್ರೆಸ್‌ ಅಭದ್ರತೆಯ ಸ್ಥಿತಿಗೆ ತಳ್ಳುತ್ತಿದೆ. ಸರ್ಕಾರದ ಆಡಳಿತ ತುಘಲಕ್ ನೀತಿಯನ್ನು ನೆನಪಿಸುತ್ತಿದೆ. ಅಮಾಯಕ ಹಿಂದೂ ಯುವಕನ ಮೇಲಿನ ಹಲ್ಲೆ ಘಟನೆಯು ಶಾಂತಿ ಸುವ್ಯವಸ್ಥೆ ಕದಡುವ ಸ್ಥಿತಿಗೆ ಕಾರಣವಾಗದಂತೆ ಪೋಲಿಸರು ಕಾರ್ಯೋನ್ಮುಖರಾಗಿ ನಂದನ್ ಮೇಲೆ ಹಲ್ಲೆ ನಡೆಸಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸುವೆ” ಎಂದು ಎಕ್ಸ್‌ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.

ಕರೆಂಟ್‌ ಶಾಕ್‌ಗೆ ಕಂಬದಲ್ಲೇ ಕಾರ್ಮಿಕನ ನರಳಾಟ

ಯಾದಗಿರಿ/ವಿಜಯಪುರ: ಭಾರಿ ಮಳೆಗೆ ವಿದ್ಯುತ್‌ ಕಂಬ ಮುರಿದು (Accident Case) ಬಿದ್ದಿತ್ತು. ಕಂಬ ಜೋಡಣೆ ಮಾಡುವಾಗ ಎಡವಟ್ಟಾಗಿದ್ದು, ಕಂಬ ಏರಿ ರಿಪೇರಿ ಕೆಲಸ ಮಾಡುವಾಗ ಕಾರ್ಮಿಕನಿಗೆ ದಿಢೀರ್‌ ವಿದ್ಯುತ್ ಪ್ರವಹಿಸಿ ಒದ್ದಾಡಿದ್ದಾನೆ. ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ ಘಟನೆ ನಡೆದಿದೆ. ಗಂಭೀರ ಗಾಯಗೊಂಡ ಕಾರ್ಮಿಕ ರಾಯಪ್ಪ ಎಂಬಾತನನ್ನು ಸ್ಥಳೀಯರು ರಕ್ಷಿಸಿ ಕಲಬುರಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಲೈನ್ ಬಂದ್ ಮಾಡಿ ಕೆಲಸ ಮಾಡುತ್ತಿದ್ದಾಗ ಏಕಾಎಕಿ ವಿದ್ಯುತ್‌ ಹರಿದಿದೆ. ಕಾರ್ಮಿಕ ರಾಯಪ್ಪ ನಿಯಂತ್ರಣ ತಪ್ಪಿದ್ದು ಕಂಬದಲ್ಲಿ ನೇತಾಡಿ ಸಹಾಯಕ್ಕಾಗಿ ಅಂಗಲಾಚಿದ್ದಾನೆ. ನಂತರ ವಿದ್ಯುತ್ ಬಂದ್ ಮಾಡಿಸಿ ಸ್ಥಳೀಯರೇ ವಿದ್ಯುತ್‌ ಕಂಬ ಏರಿ ಕಾರ್ಮಿಕನ‌ನ್ನು ರಕ್ಷಣೆ ಮಾಡಿದ್ದಾರೆ. ಕೆಂಭಾವಿ ವಿಭಾಗದ ಜೆಸ್ಕಾಂ ‌ಸಿಬ್ಬಂದಿ ಬೇಜವಾಬ್ದಾರಿತನ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಕೆಂಭಾವಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Electric Shock: ಪಲ್ಲಕ್ಕಿ ಹೊತ್ತಿದ್ದ ಟ್ರ್ಯಾಕ್ಟರ್‌ಗೆ ಪ್ರವಹಿಸಿದ ವಿದ್ಯುತ್‌; ಕ್ಷಣಾರ್ಧದಲ್ಲೇ ಇಬ್ಬರು ಸುಟ್ಟು ಕರಕಲು

Exit mobile version