ಮುಂಬೈ, ಮಹಾರಾಷ್ಟ್ರ: ಕುಡಿತದ ಚಟ ಮತ್ತು ಅತಿಯಾದ ಆತ್ಮವಿಶ್ವಾಸವು ಯಾವುದೇ ಭಾರೀ ಅಪಾಯಕ್ಕೆ ಸಿಲುಕಿಸುತ್ತದೆ. ಇದಕ್ಕೊಂದು ತಾಜಾ ಉದಾಹರಣೆ ಮಹಾರಾಷ್ಟ್ರದ ಮುಂಬೈನಲ್ಲಿ ದೊರೆತಿದೆ. 30 ವರ್ಷಗಳ ಹಿಂದೆ ಲೋನಾವಾಲ (Lonavala) ದರೋಡೆ (robbery) ಮಾಡುವಾಗ ಜೋಡಿ ಕೊಲೆ (Double Murder) ಮಾಡಿದ ವಿಷಯವನ್ನು ವ್ಯಕ್ತಿಯೊಬ್ಬ ಕುಡಿತದ ನಶೆ ಹಾಗೂ ಪೊಲೀಸರು ಇನ್ನು ಪತ್ತೆ ಹಚ್ಚಲಾರರು ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿ ಬಾಯಿಬಿಟ್ಟಿದ್ದಾನೆ. ಅಷ್ಟೇ, ಈಗ ಆತ ಕಂಬಿ ಹಿಂದೆ ಇದ್ದಾನೆ! ಈ ವ್ಯಕ್ತಿಯನ್ನು ಬಂಧಿಸಿರುವ ಮುಂಬೈ ಕ್ರೈಮ್ ಬ್ರ್ಯಾಂಚ್ ಪೊಲೀಸರು (Mumbai Crime Branch Police) ಈಗ ಎಲ್ಲ ಬಾಯಿ ಬಿಡಿಸುತ್ತಿದ್ದಾರೆ. ಸಿನಿಯರ್ ಇನ್ಸ್‌ಪೆಕ್ಟರ್ ಹಾಗೂ ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ (encounter specialist Daya Nayak) ಈ ವ್ಯಕ್ತಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
1993ರ ಅಕ್ಟೋಬರ್‌ನಲ್ಲಿ ಅವಿನಾಶ್ ಪವಾರ್ ಮತ್ತು ಇತರ ಇಬ್ಬರು, ಮುಂಬೈನ ಲೋನಾವಾಲದಲ್ಲಿರುವ ಮನೆಯೊಂದನ್ನು ದರೋಡೆ ಮಾಡಿ, ಆ ಮನೆಯಲ್ಲಿದ್ದ 55 ವರ್ಷದ ಪುರುಷ ಮತ್ತು ಆತನ 50 ವರ್ಷದ ಹೆಂಡತಿಯನ್ನು ಕೊಲೆ ಮಾಡಿದ್ದರು. ಬಳಿಕ ಪವಾರ್ ಹೊರತುಪಡಿಸಿ ಉಳಿದ ಇಬ್ಬರನ್ನು ಪೊಲೀಸರು ಬಂಧಇಸಿದ್ದರು. ಆಗ ಪವಾರ್‌ಗೆ 19 ವರ್ಷ. ಈತ ಮುಂಬೈನಿಂದ ದಿಲ್ಲಿಗೆ ಪರಾರಿಯಾಗಲು ಸಕ್ಸೆಸ್ ಆಗಿದ್ದ. ಲೋನವಾಲಾದಲ್ಲಿ ಆತನ ತಾಯಿ ಕೂಡ ಇದ್ದರು. ಆದರೆ, ಆತ ಮತ್ತೆ ಮರಳಿ ಲೋನಾವಾಲಗೆ ಬರಲೇ ಇಲ್ಲ.
ದಿಲ್ಲಿಯಿಂದ ವಾಪಸ್ ಪವಾರ್ ಔರಂಗಾಬಾದ್ ಬಂದ ಪವಾರ್, ಅಮಿತ್ ಪವಾರ್ ಎಂಬ ಹೆಸರಿನಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಂಡ. ಔರಂಗಾಬಾದ್‌ನಿಂದ ಪಿಂಪ್ರಿ-ಚಿಂಚವಾಡಾ, ಅಹಮದಾಬಾದ್ ನಗರಗಳಲ್ಲಿ ಕೆಲವು ದಿನ ಇದ್ದ. ಬಳಿಕ ಆತ ಮುಂಬೈನ ವಿಖ್ರೋಲಿಯಲ್ಲಿ ವಾಸವಾಗಿದ್ದ. ಪವಾರ್ ಆಧಾರ್ ಕೂಡ ಪಡೆದುಕೊಂಡಿದ್ದ. ಮದುವೆ ಕೂಡ ಆದ. ತನ್ನ ಪತ್ನಿಯ ರಾಜಕೀಯ ವೃತ್ತಿಯನ್ನು ಯಶಸ್ವಿಯಾಗಲು ಪ್ರಯತ್ನಿಸಿದ್ದ.
ಈಗ 49 ವರ್ಷವಾಗಿರುವ ಪವಾರ್ 30 ವರ್ಷಗಳಿಂದ ಘಟನೆಗೆ ಸಂಬಂಧಿಸಿದಂತೆ ಹಿಂದೆ ತಿರುಗಿ ನೋಡಲೇ ಇಲ್ಲ. 1993ರಲ್ಲಿ ಪವಾರ್ ಲೋನಾವಾಲ ತೊರೆದ ನಂತರ ಮತ್ತೆ ಎಂದಿಗೂ ಅಲ್ಲಿಗೆ ಮರಳಲೇ ಇಲ್ಲ. ತನ್ನ ತಾಯಿಯನ್ನಾಗಲೀ, ಹೆಂಡತಿಯ ಪೋಷಕರನ್ನಾಗಲೀ ಭೇಟಿಯಾಗಲು ಆತ ಲೋನಾವಾವಾಗೆ ಬರಲೇ ಇಲ್ಲ ಎನ್ನುತ್ತಾರೆ ಪೊಲೀಸರು.
ಈ ಸುದ್ದಿಯನ್ನೂ ಓದಿ: Double Murder: ಧಾರವಾಡದಲ್ಲಿ ಡಬಲ್ ಮರ್ಡರ್, ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ
ಇಷ್ಟು ವರ್ಷವಾದರೂ ಪೊಲೀಸರು ತನ್ನನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂಬ ಆತ್ಮವಿಶ್ವಾಸ ಪವಾರ್‌ನಲ್ಲಿತ್ತು. ಆದರೆ ಕೆಲವು ದಿನಗಳ ಹಿಂದೆ ಕುಡಿಯುವಾಗ 30 ವರ್ಷದ ಹಿಂದೆ ಮಾಡಿದ ರಾಬರಿ ಹಾಗೂ ಜೋಡಿ ಕೊಲೆಗಳ ಬಗ್ಗೆ ಬಾಯಿ ಬಿಟ್ಟಿದ್ದ. ಈ ಬಗ್ಗೆ ಮಾಹಿತಿ ಪಡೆದುಕೊಂಡ, ಮುಂಬೈ ಕ್ರೈಮ್ ಬ್ರ್ಯಾಂಚಿನ ಎನ್‌ಕೌಂಟರ್ ಸ್ಪೆಷಲಿಸ್ಟ್ ಹಾಗೂ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ದಯಾ ನಾಯಕ್ ಅವರು, ಶುಕ್ರವಾರ ವಿಖ್ರೋಲಿಯಿಂದ ಪವಾರ್‌ನನ್ನು ಅರೆಸ್ಟ್ ಮಾಡಿದ್ದಾರೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.