ಪೂಂಚ್ನಲ್ಲಿ ಸೇನಾ ವಾಹನದ ಮೇಲೆ ಉಗ್ರರು ದಾಳಿ ಮಾಡಿ, ಐವರು ಯೋಧರು ಮೃತಪಟ್ಟ ಬಳಿಕ ಉಗ್ರರ ವಿರುದ್ಧ ಕಾರ್ಯಾಚರಣೆ ತೀವ್ರಗೊಂಡಿದೆ. ಒಂದು ವಾರದಿಂದಲೂ ವಿವಿಧ ಕಡೆಗಳಲ್ಲಿ ಎನ್ಕೌಂಟರ್ ನಡೆಯುತ್ತಿದೆ.
ಅನಿಲ್ ದುಜಾನಾ ಹಲವು ಕೇಸ್ಗಳಲ್ಲಿ ಬೇಕಾದವನಾಗಿದ್ದ. ಬುಲಾಂದ್ಶಹರ್ ಪೊಲೀಸರು ಆತನ ತಲೆಗೆ 25 ಸಾವಿರ ರೂಪಾಯಿ ಬಹುಮಾನ ಘೋಷಿಸಿದ್ದರು. ಹಾಗೇ, ನೊಯ್ಡಾ ಪೊಲೀಸರು 50 ಸಾವರ ರೂ. ಬಹುಮಾನ ನಿಗದಿ ಪಡಿಸಿದ್ದರು.
ಪ್ರಯಾಗ್ರಾಜ್ನ ಕೌಧಿಯಾರ ಪ್ರದೇಶದಲ್ಲಿ ಎನ್ಕೌಂಟರ್ ನಡೆಸಿದ ಪೊಲೀಸರು ವಿಜಯ್ ಚೌಧುರಿ ಅಲಿಯಾಸ್ ಉಸ್ಮಾನ್ ಎಂಬಾತನನ್ನು ಕೊಂದು ಹಾಕಿದ್ದಾರೆ. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡ ಈತನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮೃತಪಟ್ಟಿದ್ದಾನೆ.
ಬೆಳ್ಳಂಬೆಳಗ್ಗೆ ತಪ್ಪಿಸಿಕೊಳ್ಳಲು ಯತ್ನಿಸಿದ ದರೋಡೆಕೋರನೊಬ್ಬನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ.
ಬಂಧನಕ್ಕೆ ಹೋಗಿದ್ದ ಪೊಲೀಸರ ಮೇಲೆ ಚೂರಿಯಿಂದ ಹಲ್ಲೆ ನಡೆಸಲು ಯತ್ನಿಸಿದ ರೌಡಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಜಮ್ಮು ಕಾಶ್ಮೀರದಲ್ಲಿ ಮಂಗಳವಾರ ಪೊಲೀಸರು ಹಾಗೂ ಸಿಆರ್ಪಿಎಫ್ ಸಿಬ್ಬಂದಿ ನಾಲ್ವರು ಉಗ್ರರನ್ನು ಎನ್ಕೌಂಟರ್ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್ ಎಂಬವರಿಗೆ ಚೂರಿಯಿಂದ ಇರಿದ ಪ್ರಕರಣದಲ್ಲಿ ಇದುವರೆಗೆ ಒಟ್ಟಾರೆಯಾಗಿ ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್ ಎಂಬವರಿಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ ಜಬಿ ಎಂಬಾತನ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.
ಭಾರತೀಯ ಸೇನೆಯ ಶ್ವಾನ ಪಡೆಯಲ್ಲಿದ್ದ ಪವರ್ ಫುಲ್ ನಾಯಿ ಆ್ಯಕ್ಸೆಲ್ ಭಾನುವಾರ ನಡೆದ ಎನ್ಕೌಂಟರ್ ವೇಳೆ ವೀರ ಮರಣವನ್ನಪ್ಪಿದೆ. ಸೇನೆ ಮಾತ್ರವಲ್ಲ ನೆಟ್ಟಿಗರು ಕೂಡಾ ಇದಕ್ಕೆ ಕಣ್ಣೀರಿಟ್ಟಿದ್ದಾರೆ.
ಅಮರನಾಥ ಯಾತ್ರೆಗೆ ಅಡ್ಡಿಪಡಿಸಲು ಹೊಂಚು ಹಾಕಿದ್ದ ಇಬ್ಬರು ಲಷ್ಕರೆ ಉಗ್ರರನ್ನು ಪೊಲೀಸರು ಎನ್ಕೌಂಟರ್ನಲ್ಲಿ ಹೊಡೆದುರುಳಿಸಿದ್ದಾರೆ. ಉಗ್ರರಲ್ಲೊಬ್ಬ ಪಾಕಿಸ್ತಾನದಿಂದ ನುಸುಳಿದ್ದ.