Site icon Vistara News

Murder Case: ಲೈಂಗಿಕ ದೌರ್ಜನ್ಯ ಎಸಗಿದವನನ್ನು ಕೊಂದು ಸುಟ್ಟುಹಾಕಿದ ಹುಡುಗರು!

another Indian Student Dead in Ohia, US

ಹೊಸದಿಲ್ಲಿ: ಮೂವರು ಹದಿಹರೆಯದ ಹುಡುಗರು ಸೇರಿ 25 ವರ್ಷದ ಯುವಕನನ್ನು ಕೊಂದು (Murder Case) ಬೆಂಕಿ ಹಚ್ಚಿದ್ದಾರೆ. ಯುವಕ ಎಸಗಿದ ಲೈಂಗಿಕ ದೌರ್ಜನ್ಯದಿಂದ (Physical abuse) ಇವರು ಸಿಟ್ಟಿಗೆದ್ದಿದ್ದರು ಎಂದು ಗೊತ್ತಾಗಿದೆ.

ಆಗ್ನೇಯ ದಿಲ್ಲಿಯಲ್ಲಿ ಈ ಘಟನೆ ನಡೆದಿದೆ. ಆಜಾದ್‌ ಅಹ್ಮದ್‌ ಎಂಬಾತನನ್ನು ಮೂವರು ಹುಡುಗರು ಕೊಂದು ಸುಟ್ಟು ಹಾಕಿದ್ದಾರೆ. ಈತ ಈ ಹುಡುಗರಲ್ಲಿ ಒಬ್ಬನ ಮೇಲೆ ಪದೇ ಪದೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಸೇಡು ತೀರಿಸಿಕೊಳ್ಳಲು ಇವರು ಈ ಕೃತ್ಯ ಎಸಗಿದ್ದಾರೆ.

ಈ ಮೂವರಲ್ಲಿ ಒಬ್ಬಾತ ನಿರ್ಜನ ಪ್ರದೇಶಕ್ಕೆ ಆಜಾದ್‌ ಅಹ್ಮದ್‌ನನ್ನು ಕರೆ ಮಾಡಿ ಕರೆಸಿಕೊಂಡಿದ್ದು, ಅಲ್ಲಿಗೆ ಬಂದಾತನನ್ನು ಹರಿತವಾದ ಆಯುಧದಿಂದ ಇರಿದು ಕೊಂದಿದ್ದಾರೆ. ನಂತರ ಒಣ ಎಲೆಗಳಿಂದ ಮುಚ್ಚಿ ಭಾಗಶಃ ಸುಟ್ಟುಹಾಕಿದ್ದಾರೆ.

ಪೊಲೀಸರು ಇವರನ್ನು ಹಿಡಿದು ಪ್ರಶ್ನಿಸಿದಾಗ ತಾವು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳಾದ ಮೂವರೂ ಹುಡುಗರು 16-17ರ ಪ್ರಾಯದವರು. ಲೈಂಗಿಕ ದೌರ್ಜನ್ಯಕ್ಕೆ ಪ್ರತಿಯಾಗಿ ಹೀಗೆ ಮಾಡಿದೆವೆಂದು ಇವರು ತಿಳಿಸಿದ್ದು, ಇವರಿಂದ ಕೃತ್ಯಕ್ಕೆ ಬಳಸಿದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: Murder Case: ಕೊಲೆ ಆರೋಪಿಯನ್ನು ಹೋಟೆಲ್‌ನೊಳಗೆ ಕೊಚ್ಚಿ ಹತ್ಯೆ

Exit mobile version