ರಾಮನಗರ: ಸಲಿಂಗ ಕಾಮಕ್ಕೆ (Homosexuality) ಬಾಲಕನೊಬ್ಬ ಬಲಿಯಾಗಿದ್ದಾನೆ. ನಿನ್ನೆ ಶುಕ್ರವಾರ (ಜ.26) ರಾಮನಗರ ರೈಲ್ವೆ ಹಳಿ ಪಕ್ಕದಲ್ಲಿ ಅನುಮಾನಾಸ್ಪದವಾಗಿ ಬಾಲಕನೊಬ್ಬನ ಶವ (Murder Case) ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಕೊಲೆ ಮಾಡಿ ಬಿಸಾಡಿ ಹೋಗಿರುವ ಶಂಕೆ ವ್ಯಕ್ತವಾಗಿತ್ತು. ಇದೀಗ ತನಿಖೆಯನ್ನು ನಡೆಸಿರುವ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. ಯುವಕನೊಬ್ಬ ಸಲಿಂಗ ಕಾಮಕ್ಕೆ ಬಾಲಕನನ್ನು ಬಳಿಸಿಕೊಂಡು ಬಳಿಕ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
6 ವರ್ಷದ ಬಾಲಕನಿಗೆ ಬಿಸ್ಕೇಟ್ ಆಸೆ ತೋರಿಸಿ ಪುಸಲಾಯಿಸಿದ್ದಾನೆ. ಬಳಿಕ ಆ ಯುವಕ ಬಸ್ ನಿಲ್ದಾಣದಿಂದ ನಿರ್ಜನ ಪ್ರದೇಶಕ್ಕೆ ಬಾಲಕನನ್ನು ಕರೆದುಕೊಂಡು ಹೋಗಿದ್ದಾನೆ. ಬಲವಂತವಾಗಿ ಬಾಲಕನನ್ನು ಸಲಿಂಗ ಕಾಮಕ್ಕೆ ಬಳಸಿಕೊಂಡಿದ್ದಾನೆ. ತನ್ನ ಕಾಮದ ಆಸೆ ತೀರಿದ ಬಳಿಕ ಬಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಇದನ್ನೂ ಓದಿ: Murder Case : ಬಾರ್ ಗಲಾಟೆ; ಹೆಂಡ್ತಿ- ಮಗುವಿನೊಂದಿಗೆ ಮಲಗಿದ್ದ ಟೈಂಗೆ ನುಗ್ಗಿ ಹೊಡೆದು ಕೊಂದರು
ಇನ್ನು ಮೃತದೇಹವು ಪತ್ತೆಯಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ತನಿಖೆ ನಡೆಸಿದಾಗ ಯುವಕನ ಕೃತ್ಯ ಬಯಲಾಗಿದೆ. ತನ್ನ ಸಲಿಂಗಕಾಮಕ್ಕೆ ಬಾಲಕನನ್ನು ಬಳಿಸಿಕೊಂಡು ಹತ್ಯೆ ಮಾಡಿರುವುದು ಗೊತ್ತಾಗಿದೆ. ಸದ್ಯ ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ವೇಳೆ ಸತ್ಯವನ್ನೆಲ್ಲ ಬಾಯ್ಬಿಟ್ಟಿದ್ದಾನೆ.
ಪ್ರಕರಣ ಸಂಬಂಧ ಮೃತ ಬಾಲಕನ ಗುರುತು ಪತ್ತೆ ಹಚ್ಚಲಾಗುತ್ತಿದ್ದು, ರಾಮನಗರ ಟೌನ್ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Namma Metro : ಎಂ.ಜಿ.ರಸ್ತೆ – ಬೈಯಪ್ಪನಹಳ್ಳಿ ಮೆಟ್ರೋ ಸಂಚಾರ ಸ್ಥಗಿತ
ನೀರು ಬಿಡು ಎಂದಿದ್ದಕ್ಕೆ ಕೊಲೆಗಾರನಾದ ವಾಟರ್ ಮ್ಯಾನ್!
ನಮ್ಮ ಏರಿಯಾಗೆ ಕುಡಿಯುವ ನೀರು ಬಿಡು ಎಂದಿದ್ದಕ್ಕೆ ವಾಟರ್ ಮ್ಯಾನ್‌ವೊಬ್ಬ ಕಬ್ಬಿಣದ ರಾಡ್‌ನಿಂದ ಹೊಡೆದು ವ್ಯಕ್ತಿಯ ಕೊಲೆ ಮಾಡಿದ್ದಾನೆ. ಚಿತ್ರದುರ್ಗದ ಮೊಳಕಾಲ್ಮೂರು ತಾಲೂಕಿನ ಗುಂಡ್ಲೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಹಾಂತೇಶ್ (55) ಕೊಲೆಯಾದ ವ್ಯಕ್ತಿ.
ವಾಟರ್ ಮ್ಯಾನ್ ಉಜ್ಜನಿಮೂರ್ತಿಯಿಂದ ಎಂಬಾತ ಆರೋಪಿಯಾಗಿದ್ದಾನೆ. ಉಜ್ಜನಿಮೂರ್ತಿ ಗುಂಡ್ಲೂರು ಗ್ರಾಮ ಪಂಚಾಯತಿ ವಾಟರ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಮಹಾಂತೇಶ್ ಕುಡಿಯುವ ನೀರು ಬಿಡು ಎಂದಿದ್ದಕ್ಕೆ ಸಿಟ್ಟಿಗೆದ್ದ ಉಜ್ಜನಿಮೂರ್ತಿ ಕಬ್ಬಿಣದ ರಾಡ್‌ನಿಂದ ಎದೆ ಭಾಗಕ್ಕೆ ಹೊಡೆದಿದ್ದಾನೆ. ಹೊಡೆದ ರಭಸಕ್ಕೆ ಕೆಳಗೆ ಬಿದ್ದ ಮಹಾಂತೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಪ್ರಕರಣ ಸಂಬಂಧ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ